Advertisement

ಮೌಲ್ಯಾಂಕನ ಮೌಲ್ಯಮಾಪಕರಿಗಿಲ್ಲ ಸೌಕರ್ಯ!

06:11 PM Apr 03, 2024 | Team Udayavani |

ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಈ ಬಾರಿ ತೀವ್ರ ಚರ್ಚೆ ಹಾಗೂ ಗೊಂದಲಗಳ ಗೂಡಾಗಿ ವಿದ್ಯಾರ್ಥಿ ಪೋಷಕರನ್ನು ತೀವ್ರ ಕಂಗಾಲಾ ಗಿಸಿದ್ದ ಮೌಲ್ಯಾಂಕನ ಪರೀಕ್ಷೆ ಇದೀಗ ಮತ್ತೂಂದು ವಿವಾದಕ್ಕೆ ಕಾರಣವಾಗಿದೆ.

Advertisement

ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನದಲ್ಲಿ ತೊಡಗಿರುವ ಶಿಕ್ಷಕರಿಗೆ ಕನಿಷ್ಠ ಸೌಕರ್ಯ ಕೊಡದೇ ಶಿಕ್ಷಣ ಇಲಾಖೆ ಕೈ ಚೆಲ್ಲಿದ್ದು, ಕೆಲ ಮೌಲ್ಯಮಾಪನ ಕೇಂದ್ರಗಳಲ್ಲಿ ಶಿಕ್ಷ ಕರು ಪ್ರತಿಭಟನೆ ನಡೆಸಿರುವುದು ಮೌಲ್ಯಮಾಪನ ಅವ್ಯವಸ್ಥೆಗೆ ಕಾರಣವಾಗಿದೆ.

ಪದವಿಯಿಂದ ಹಿಡಿದು ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ಮೌಲ್ಯಮಾಪಕರಿಗೆ ಭರಪೂರ ಭತ್ಯೆ ನೀಡುವ ಇಲಾಖೆಗಳು, ಈ ಬಾರಿ 5, 8 ಹಾಗೂ 9ನೇ ತರಗತಿಗಳಿಗೆ ನಡೆಸುತ್ತಿರುವ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪಕನಿಗೆ ಟಿಎ, ಡಿಎ, ದಿನದ ಭತ್ಯೆ ಬಿಡಿ ಕನಿಷ್ಠ ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪಕರಿಗೆ ಕನಿಷ್ಠ ಕುಡಿಯುವ ನೀರು ಸೇರಿದಂತೆ ಯಾವ ಸೌಲಭ್ಯ ಗಳು ಇಲ್ಲದೇ ಇರುವುದು ಮೌಲ್ಯ ಮಾಪಕರ ಆಕ್ರೋಶಕ್ಕೆ ಕಾರಣವಾಗಿದೆ.

ಕುಡಿಯುವ ನೀರು ವ್ಯವಸ್ಥೆ ಮಾಡಿಲ್ಲ: ಈ ಬಾರಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದರೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಕೋರ್ಟ್‌ ಮೇಟ್ಟಿಲೇರಿದ ಪರಿಣಾಮ ಹಲವಾರು ಬಾರಿ ಪರೀಕ್ಷೆಗಳನ್ನು ಮುಂದೂಡಬೇಕಾಯಿತು. ಆದರೆ ಅಂತೂ ಇಂತೂ ಪರೀಕ್ಷೆ ಸುಗಮವಾಗಿ ನಡೆದು ವಿದ್ಯಾರ್ಥಿ ಪೋಷಕರು ನೆಮ್ಮೆದಿಯ ನಿಟ್ಟುಸಿರು ಬಿಟ್ಟರೂ ಮೌಲ್ಯ ಮಾಪನ ಕಾರ್ಯದಲ್ಲಿ ಭಾಗಿಯಾಗಿರುವ ಶಿಕ್ಷಕರನ್ನು ಇಲಾಖೆ ಕಡೆಗಣಿಸಿರುವುದು ಇದೀಗ ಮೌಲ್ಯಮಾಪಕರ ಆಕ್ರೋಶಕ್ಕೆ ಕಾರಣವಾಗಿದೆ. ಮೌಲ್ಯಮಾಪನ ವಹಿಸಿರು ಕೇಂದ್ರಗಳು ಮೌಲ್ಯಮಾಪಕರಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಿಲ್ಲ. ಹೋಗಿ ಬರುವ ಶಿಕ್ಷಕರಿಗೆ ಇಲಾಖೆಯಿಂದ ಯಾವುದೇ ಪ್ರಯಾಣ ಭತ್ಯೆ ಕೊಡುತ್ತಿಲ್ಲ. ಮಧ್ಯಾಹ್ನದ ಹೊತ್ತು ಊಟಕ್ಕೂ ಪರದಾಡಬೇಕಿದೆ. ಇಲಾಖೆ ಮೌಲ್ಯಾ ಮಾಪಕರಿಗೆ ಕನಿಷ್ಠ ಭತ್ಯೆ ಕೊಡಬೇಕಿತ್ತು ಎಂಬ ಮಾತು ಕೇಳಿ ಬರುತ್ತಿದೆ. ಪದವಿ, ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪಕರಿಗೆ ಸಾವಿರಾರು ದಿನದ ಭತ್ಯೆಯನ್ನು ಕೊಡುತ್ತಿರುವ ಶಿಕ್ಷಣ ಇಲಾಖೆ, 5, 8 ಹಾಗೂ 9 ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಯ ಮೌಲ್ಯ ಮಾಪಕರನ್ನು ಕಡೆಗಣಿಸಿರುವುದು ಸಾಕಷ್ಟು ಚರ್ಚೆಗೆ ಹಾಗೂ ಟೀಕೆಗೆ ಗುರಿಯಾಗಿದೆ.

ಪರೀಕ್ಷೆ ಕೆಲಸದ ಜೊತೆಗೆ ಮೌಲ್ಯಾಂಕನ ಹೊರೆ!

Advertisement

5, 8 ಮತ್ತು 9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆಯಲ್ಲಿ ಶಿಕ್ಷಕರು ಕಳೆದ 3-4 ದಿನಗಳ ಕಾಲ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದು, ಇದರ ನಡುವೆ ಶಿಕ್ಷಕರು ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೌಲ್ಯಮಾಪನ ಕೇಂದ್ರದಲ್ಲಿ ಹಲವು ಕುಂದುಕೊರತೆಗಳು ಕಂಡುಬಂದಿದ್ದು, ಪ್ರೌಢ ಶಾಲೆಗಳಿಂದ ಹಲವು ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ, ನಂತರ ಮೌಲ್ಯಮಾಪನ ಮಾಡುವ ಹೊರೆ ಜಾಸ್ತಿಯಾಗಿದೆ. ಅಲ್ಲಿನ ನೋಡೆಲ್‌ ಅಧಿಕಾರಿಗಳು ಶಿಕ್ಷಣ ಇಲಾಖೆಯ ಬಂದಿರುವ ಅನುದಾನವನ್ನು ಬಳಸದೆ, ಶಿಕ್ಷಕರನ್ನು ಸುಡು ಬಿಸಿಲಿನಲ್ಲಿ ನೀರಿನ ವ್ಯವಸ್ಥೆ ಇಲ್ಲದೇ ಪರಿದಾಡುವ ಪರಿಸ್ಥಿತಿ ಇದೆ ಎಂದು ಅಲ್ಲಿನ ಮೌಲ್ಯಮಾಪಕರೊಬ್ಬರು ತಮ್ಮ ಸಮಸ್ಯೆಗಳನ್ನು ಪತ್ರಿಕೆಯೊಂದಿಗೆ ಹಂಚಿ ಕೊಂಡರು. ಇನ್ನೂ ಮೌಲ್ಯಮಾಪನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳು ತ್ತಿರು ವುದು ಕಂಡು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next