Advertisement
ನೂತನ ಹೈಟೆಕ್ ಟರ್ಮಿನಲ್‌ನಿಂದ ದಟ್ಟಣೆ ನಿವಾರಣೆಯಾಗಿದೆ. ಪ್ರಯಾಣಿಕರಿಗೆ ಉಪಯೋಗವೂ ಇದರಿಂದಾಗಿದೆ. ಆದರೆ, ಅಲ್ಲಿಂದ ತಲುಪಬೇಕಾದ ಸ್ಥಳಗಳಿಗೆ ಹೋಗಲು ಸಂಪರ್ಕ ಸಾರಿಗೆ ವ್ಯವಸ್ಥೆ ಇನ್ನೂ ಆಗಿಲ್ಲ. ಇಡೀ ಟರ್ಮಿನಲ್‌ಗೆ ಒಂದೇ ಪ್ರವೇಶ ದ್ವಾರ ಇದ್ದು, ಇದೇ ಭಾಗದಿಂದ ನಿರ್ಗಮನ ಮತ್ತು ಆಗಮನದಿಂದ ಸುತ್ತುವರಿದು ಬರುವಂತಾಗಿದೆ. ಜತೆಗೆ, ಇಲ್ಲಿಗೆ ಬಂದಿಳಿದವರು ಮುಖ್ಯರಸ್ತೆಗೆ ತೆರಳಲು ಅಥವಾ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಹೋಗಲು ಸಮರ್ಪಕ ಸಂಪರ್ಕ ಸಾರಿಗೆ ಸೇವೆಗಳಿಲ್ಲ. ಇದ್ದರೂ ಕೆಲವು ಸೀಮಿತ ಪ್ರದೇಶಗಳಿಂದ ಮಾತ್ರ ಕಲ್ಪಿಸಲಾಗಿದೆ. ಇದರಿಂದ ಮಹಿಳೆಯರು, ವೃದ್ಧರು, ಮಕ್ಕಳಿಗೆ ಸಮಸ್ಯೆ ಆಗುತ್ತಿದೆ. ಈ ಮಧ್ಯೆ ವೈಟ್ ಫೀಲ್ಡ್‌ನಲ್ಲಿ ಸಾಕಷ್ಟು ಜನ ಕೆಲಸ ಮಾಡುವುದರಿಂದ ವೈಟ್ ಫೀಲ್ಡ್-ಬೈಯಪ್ಪನಹಳ್ಳಿ-ಯಶವಂತಪುರ ನಡುವೆ “ದಟ್ಟಣೆ ಅವಧಿ’ಯಲ್ಲಿ ಶೆಟಲ್ ಸೇವೆಗಳನ್ನು ಪರಿಚಯಿಸುವ ಅಗತ್ಯವಿದೆ ಎಂಬ ಬೇಡಿಕೆಯೂ ಇದೆ.
Related Articles
Advertisement
ಸಂಚರಿಸುತ್ತಿರುವ ರೈಲುಗಳು : ಎಸ್‌ಎಂವಿಬಿ-ಎರ್ನಾಕುಲಂ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12684), ಎಸ್‌ಎಂವಿಬಿ- ಕೊಚುವೇಲ್ಲಿ (ರೈಲು ಸಂಖ್ಯೆ 16320) ಮತ್ತು ಎಸ್‌ಎಂವಿಬಿ- ಪಾಟ್ನಾ ಸಾಪ್ತಾಹಿಕ ಹಮ್ಸ್‌ಫರ್ ಎಕ್ಸ್‌ಪ್ರೆಸ್(ರೈಲು ಸಂಖ್ಯೆ-22354) ಈ ಮೂರು ಎಕ್ಸ್‌ಪ್ರೆಸ್ ರೈಲುಗಳ ಜತೆಗೆ ಒಂದು ಬಂಗಾರಪೇಟೆಗೆ ಹೋಗುವ ಮೆಮು ಎಕ್ಸ್ ಪ್ರಸ್(ರೈಲು ಸಂಖ್ಯೆ-06527/06528) ಸಂಚರಿಸುತ್ತಿವೆ. ಬೈಯಪ್ಪಹಳ್ಳಿ ನಿಲ್ದಾಣದಿಂದ ಪ್ರತಿದಿನ ಅಂದಾಜು 1,100 ಜನ ಪ್ರಯಾಣಿಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕೊಂಕಣ ಸುತ್ತಿ ಮೈಲಾರಕ್ಕೆ : ಬೈಯಪ್ಪನಹಳ್ಳಿ ನಿಲ್ದಾಣದಿಂದ ಬೈಯ್ಯಪ್ಪನಹಳ್ಳಿ, ಸ್ವಾಮಿ ವಿವೇಕಾನಂದ ರಸ್ತೆ, ಇಂದಿರಾನಗರ, ಹಲಸೂರು ಮುಂತಾದ ಸ್ಥಳಗಳಿಂದ ಬರುವ ಪ್ರಯಾಣಿಕರಿಗೆ ಸರಿಯಾದ ಬಸ್ ಅಥವಾ ಮೆಟ್ರೋ ವ್ಯವಸ್ಥೆ ಇಲ್ಲ. ಪ್ರಯಾಣಿಕರು ಬಿಎಂಟಿಸಿಯ ಕೆಲವು μàಡರ್ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ. ಈ ಬಸ್‌ಗಳು ತಪ್ಪಿದರೆ ಆಟೋಗಳಿಗಾಗಿ ಮೊರೆ ಹೋಗಬೇಕು. ಮತ್ತೂಂದೆಡೆ ಪಕ್ಕದಲ್ಲಿರುವ ಕಸ್ತೂರಿ ನಗರ, ರಾಮಮೂರ್ತಿ ನಗರ, ಬಾಣಸವಾಡಿ ಮಾರ್ಗದ ಪ್ರಯಾಣಿಕರೂ ಬೆನ್ನಿಗಾನಹಳ್ಳಿ ಮೂಲಕವೇ ಸುತ್ತುವರೆದು ಹೋಗಬೇಕು ಎಂದು ಪ್ರಯಾಣಿಕರು ಹೇಳುತ್ತಾರೆ.
ಎರ್ನಾಕುಲಂ ಎಕ್ಸ್‌ಪ್ರೆಸ್‌ಗೆ ಬಂದು ಬೆಳಗಿನ ಜಾವ 4 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬಂದಿಳಿದೆವು. ಅಲ್ಲಿಂದ ಲಿಂಗರಾಜಪುರಂಗೆ ಹೋಗಬೇಕು. ಆದರೆ, ಸರ್ ಎಂ.ವಿ. ಟರ್ಮಿನಲ್‌ನಿಂದ ನೇರ ಬಸ್ ವ್ಯವಸ್ಥೆಯಿಲ್ಲ. ಲಗೇಜ್ ಮತ್ತು ಮಕ್ಕಳನ್ನು ಕರೆದುಕೊಂಡು ಮೆಟ್ರೋ, ಬಸ್ ಎಂದು ಸುತ್ತಾಕಿ ಹೋಗುವುದು ಕಷ್ಟವಾಗುತ್ತದೆ.– ಗಿರಿಜಮ್ಮ, ಪ್ರಯಾಣಿಕರು
–ಭಾರತಿ ಸಜ್ಜನ್