Advertisement
ತಾಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿರುವ ಸೊಳ್ಳೆಪುರ ಗ್ರಾಮಕ್ಕೆ 50 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿದೆ. ಸರ್ಕಾರದ ಯಾವುದೇ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸದೆ ಗ್ರಾಮ ಹಾಳುಕೊಂಪೆಯಾಗಿದೆ. ಎರಡು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮವು, ಹೆಚ್ಚು ಕೃಷಿಕರನ್ನು ಹೊಂದಿದೆ. 1300 ಮತದಾರರಿದ್ದು, ಚುನಾವಣೆ ವೇಳೆ ಗ್ರಾಮಕ್ಕೆ ಭೇಟಿ ನೀಡುವ ಶಾಸಕರು, ಸಂಸದರು ಹಾಗೂ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಚುನಾವಣೆ ಬಳಿಕ ಇತ್ತ ತೆಲೆಹಾಕಿಯೂ ಮಲಗುವುದಿಲ್ಲ.
Related Articles
Advertisement
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಜಿಪಂ, ತಾಪಂ ಹಾಗೂ ಸರ್ಕಾರದ ಗಮನಸೆಳೆದು ಪ್ರಸಕ್ತ ಎದುರಾಗುವ ಗ್ರಾಪಂ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಾಗರಿಕರಲ್ಲಿ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮಕ್ಕೆ ಕಲ್ಪಿಸಿ ಮಾದರಿ ಗ್ರಾಮವಾಗಿಸಬೇಕೆಂಬುದು ಸ್ಥಳೀಯರ ಒಕ್ಕೊರಲಿನ ತೀರ್ಮಾನವಾಗಿದೆ.
ಸ್ಥಳೀಯರ ಆಕ್ರೋಶ : ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದ್ದರೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಚಕಾರವೆತ್ತದೆ ಮೌನ ವಹಿಸಿದ್ದಾರೆ. ಈವರೆಗೂ ಪಂಚಾಯಿತಿಯಿಂದ ಮನೆ, ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಶಾಸಕರು, ಸಂಸದರು ಜಿಪಂ ಸದಸ್ಯರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿಸಿ ಯಾವುದೇ ಅಭಿವೃದ್ಧಿಕಾರ್ಯಗಳಿಗೆ ಚಾಲನೆ ನೀಡದಿರುವುದು, ಸ್ಥಳೀಯ ನಾಯಕರು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯಧೋರಣೆ ಸ್ಥಳೀಯರ ಆಕ್ರೋಶಕ್ಕೆಕಾರಣವಾಗಿದೆ. ಹೀಗಾಗಿ ಮುಂದಿನ ಚುನಾವಣೆ ಬಹಿಷ್ಕರಿಸುವ ನಿಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
50 ವರ್ಷಗಳಿಂದಲೂ ವಾಸಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆಜಿಲ್ಲಾಡಳಿತ ಹಕ್ಕುಪತ್ರ ನೀಡುವ ಮೂಲಕ ಸರ್ಕಾರದ ಯೋಜನೆಪಡೆಯಲುಅವಕಾಶಕಲ್ಪಿಸಬೇಕಾಗಿದ್ದು, ಗ್ರಾಮಕ್ಕೆ ಸೌಲಭ್ಯಕಲ್ಪಿಸಿಮಾದರಿ ಗ್ರಾಮವನ್ನಾಗಿಸಲು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳುಇತ್ತ ಗಮನ ಹರಿಸಬೇಕಗಿದೆ. – ಸೋ.ಸಿ. ಪ್ರಕಾಶ್, ಸೊಳ್ಳೆಪುರ ನಿವಾಸಿ
ಸೊಳ್ಳೆಪುರಗ್ರಾಮ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ಈಗಷ್ಟೇ ಗಮನಕ್ಕೆ ಬಂದಿದ್ದು,ಖುದ್ದು ಸ್ಥಳಕ್ಕೆಭೇಟಿ ನೀಡಿಪರಿಶೀಲಿಸಲಾಗುವುದು.ಕ್ರಮವಹಿಸಿ ಗ್ರಾಮಾಭಿವೃದ್ಧಿಗೆ ಒತ್ತು ನೀಡಲಾಗುವುದು. –ಮುನಿರಾಜು, ತಾಪಂ ಇಒ
– ಎಸ್.ಪುಟ್ಟಸ್ವಾಮಿ