Advertisement
ಸಾಮಾನ್ಯ ಸಭೆ ನಡೆಸಲು 51 ಸದಸ್ಯರಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 26 ಸದಸ್ಯರ ಕೋರಂ ಬೇಕು. ಆದರೆ, ಇಂದಿನ ಸಭೆಯಲ್ಲಿ 22 ಸದಸ್ಯರು ಸಹಿ ಹಾಕಿದ್ದಾರೆ. ತಡವಾಗಿ ಆಗಮಿಸಿದ ಒಬ್ಬರು ಸದಸ್ಯರನ್ನು ಪರಿಗಣಿಸಲಿಲ್ಲ. ಕೋರಂ ಲಭ್ಯವಾಗದ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿಸಭೆ ನಡೆಸಲು ಬರುವುದಿಲ್ಲ.
Related Articles
Advertisement
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಜ್ಜಪ್ಪ, ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಕಾನೂನು ಇಲ್ಲ. 11:30 ಗಂಟೆಗಿಂತ ಹೆಚ್ಚಿಗೆ ಕಾದಿದ್ದೇ ಕಾನೂನು ವಿರೋ ಧಿಯಾಗಿದೆ. ಕೂಡಲೇ ಸಭೆಯನ್ನು ಮುಂದೂಡುವಂತೆ ವಿರೋಧ ಪಕ್ಷದ ಕೆಲ ಸದಸ್ಯರು ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯ ಕೃಷ್ಣಮೂರ್ತಿ, ನಗರಸಿಂಹರಾಜು ಮತ್ತಿತರರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಅಜ್ಜಪ್ಪ, ಕಾಂಗ್ರೆಸ್ ಸದಸ್ಯರಾದ ಕೃಷ್ಣಮೂರ್ತಿ, ನರಸಿಂಹ ಮೂರ್ತಿ ಅವರ ಮಧ್ಯೆ ವಾಕ್ಸಮರ ನಡೆಯಿತು. ನಮಗೆ ಜನರು ಕಲ್ಲಿನಲ್ಲಿ ಓಡಿಸಿಕೊಂಡು ಬಂದು ಹೊಡೆಯುತ್ತಾರೆ. ಕ್ಷೇತ್ರಗಳಲ್ಲಿ ತೀವ್ರ ತರಹದ ಮಸ್ಯೆಗಳಿವೆ. ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬದಲು ಸಾಮಾನ್ಯ ಸಭೆಗೆ ಪ್ರತಿ ಸಲ ಗೈರಾಗುತ್ತಿದ್ದರೆ ಹೇಗೆಂದು ಪ್ರಶ್ನಿಸಿದರು.
ಸಭೆ ಮುಂಡೂತ್ತಿದ್ದಂತೆ ಅದೇ ಜಾಗದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ಸಿಇಒ ರವೀಂದ್ರ, ಅಧ್ಯಕ್ಷರು ಸೂಚಿಸಿದರು. ಇದರಿಂದ ಕುಪಿತರಾದ ಬಿಜೆಪಿ ಸದಸ್ಯರು ಸಭೆ ಮುಂದೂಡಲ್ಪಟ್ಟ ಮೇಲೆ ಹೇಗೆ ಈ ಜಾಗದಲ್ಲಿ ಸಭೆ ನಡೆಸುತ್ತೀರ, ಮಿನಿ ಜಿಪಂ ಹಾಲ್‌ನಲ್ಲಿ ಸಭೆ ಮಾಡಿಕೊಳ್ಳಿ ಎಂದರು.
ಸದಸ್ಯೆ ರಾಜೇಶ್ವರಿ ಮಾತನಾಡಿ, ಈ ಹಿಂದೆ ನಾನು 11:29 ನಿಮಿಷಕ್ಕೆ ಬಂದ ಸಂದರ್ಭದಲ್ಲೂ ಸಮಯ ಮೀರಿ ಬಂದಿದ್ದೀರಿ ಎಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಲು ಅವಕಾಶ ನೀಡಲಿಲ್ಲ. ಆದರೆ, ಇಂದು 11:35 ನಿಮಿಷವಾದರೂ ಏಕೆ ಬರುವವರಿಗಾಗಿ ಕಾಯಲಾಗುತ್ತಿದೆ. ಒಬ್ಬರಿಗೊಂದು, ಮತ್ತೂಬ್ಬರಿಗೊಂದು ಕಾನೂನು ಇಲ್ಲವಾಗಿದ್ದು, ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಮಯ ಮೀರಿ ಆಗಮಿಸಿರುವ ಯಾವುದೇ ಸದಸ್ಯರಿಗೆ ಹಾಜರಾತಿಗೆ ಸಹಿ ಮಾಡಲು ಅವಕಾಶ ನೀಡಬಾರದು. ಕೋರಂ ಇಲ್ಲ ಎಂದಾದ ಮೇಲೆ ಸಭೆಯನ್ನು ಮುಂದೂಡಬೇಕು ಎಂದು ಅಧ್ಯಕ್ಷರು, ಸಿಇಒ ಅವರಿಗೆ ತಾಕೀತು ಮಾಡಿದರು.
ಸದಸ್ಯ ಕೃಷ್ಣಮೂರ್ತಿ ನಡೆ ಕುರಿತು ಸದಸ್ಯ ಅಜ್ಜಪ್ಪ ಮಗುವನ್ನು ಚಿವುಟಿ ನಂತರ ತೊಟ್ಟಿಲು ತೂಗುವ ನಾಟಕ ಮಾಡುತ್ತೀರಾ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಾದ ನಂತರ ಮಹಿಳಾ ಸದಸ್ಯರು ಏರು ಧ್ವನಿಯಲ್ಲಿ ಆರೋಪ ಪ್ರತ್ಯಾರೋಪ ಮಾಡಿದರು.
ಸಭೆಯಲ್ಲಿ ಗದ್ದಲ, ಗಲಾಟೆ ಹೆಚ್ಚಾಗಿದ್ದರಿಂದ ಯಾರು ಏನು ಹೇಳುತ್ತಾರೆ, ಏನು ಕೇಳುತ್ತಾರೆ ಎನ್ನುವುದು ತಿಳಿಯದಾಯಿತು. ಗಲಾಟೆಯ ವಿಷಯ ತಿಳಿದು ಪೊಲೀಸರು ಆಗಮಿಸಿದರು. ವಿಧಿ ಯಿಲ್ಲದೆ ಸಭೆಯನ್ನು ಜಿಪಂ ಸಿಇಒ ಪಿ.ಎನ್.ರವೀಂದ್ರ ಅಧ್ಯಕ್ಷರ ಅನುಮತಿ ಮೇರೆಗೆ ಅನಿರ್ದಿಷ್ಟಾವಧಿಗೆ ಮುಂದೂಡಿದರು.