Advertisement

ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆ

03:24 PM Sep 27, 2020 | Suhan S |

ಚಿಂತಾಮಣಿ: ಕಳೆದ ನಾಲ್ಕೈದು ತಿಂಗಳುಗಳಿಂದ ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡದ ಪರಿಣಾಮ ನೌಕರರು ಮೂರು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಿರತರಾಗಿರುವ ಪರಿಣಾಮ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಗಳಿಲ್ಲದೆ ಆಸ್ಪತ್ರೆ ದುರ್ವಾಸನೆ ಬೀರುವಂತಾಗಿದ್ದು, ಸಾರ್ವಜನಿಕರ ಮತ್ತು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನಾಲೈದು ತಿಂಗಳುಗಳಿಂದ ಸಂಬಳ ಇಲ್ಲ: ಸಾರ್ವಜನಿಕ ಆಸ್ಪತ್ರೆಯಲ್ಲಿ 24 ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಸಂಬಳ ನೀಡದಿರುವುದರಿಂದ ಜೀವನಕ್ಕೆ ನಿರ್ವಹಣೆಗೆ ಕಷ್ಟವಾಗಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದರಿಂದ ಆಸ್ಪತ್ರೆಯಲ್ಲಿನ ಕ್ಲೀನಿಕ್‌ ಮತ್ತು ನಾನ್‌ ಕ್ಲೀನಿಕ್‌ಕೆಲಸಗಳು ನಿಂತು ಹೋಗಿ ರೋಗಿಗಳು ಪರದಾಡುವಂತಾಗಿದೆ.

ಆವರಣದಲ್ಲೇ ಕಸದ ಚೀಲಗಳು: ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ದಿನ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ದಿನಕ್ಕೆ 50 ಕ್ಕೂ ಹೆಚ್ಚು ರೋಗಿಗಳು ದಾಖಲಾಗುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ನೌಕರರು ಇಲ್ಲದ ಪರಿಣಾಮ ಕಸದ ಚೀಲಗಳು ಆಸ್ಪತ್ರೆಯ ಆವರಣದಲ್ಲೇ ಎಸೆದಿರುವುದರಿಂದ ದುರ್ವಾಸನೆ ಹೆಚ್ಚುತ್ತಿದ್ದು, ರೋಗಿಗಳು ದಿನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಬೆಡ್‌ಶೀಟ್‌ ವಾಸನೆ: ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಹಾಸಿಗೆ ಮೇಲೆ ಹೊದಿಸಿರುವ ಬೆಡ್‌ಶೀಟ್‌ಗಳನ್ನು ಸಹ ಹೊಗೆಯದ ಪರಿಣಾಮ ದುರ್ವಾಸನೆ ಬೀರುತ್ತಿದ್ದು, ಕೋವಿಡ್ ಸಂಕಷ್ಟದ ಸಮಯದಲ್ಲಿ ರೋಗ ವಾಸಿ ಮಾಡಿಕೊಳ್ಳಲು ಬಂದು ಮತ್ತಷ್ಟು ಕಾಯಿಲೆಗಳನ್ನು ಹಚ್ಚಿಕೊಂಡು ಹೋಗಬೇಕಾಗಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

ತಾಯಿಮಕ್ಕಳ ಗತಿ ಏನು?: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರತಿದಿನ ಹತ್ತಾರು ಗರ್ಭಿಣಿಯರ ಹೆರಿಗೆ ಆಗುತ್ತದೆ. ಇಲ್ಲಿಬಾಣಂತಿಯರು ಮತ್ತು ಎಳೆಕೂಸುಗಳು  ಇರುತ್ತಾರೆ. ಆದರೆ ಹೆರಿಗೆ ವಾರ್ಡ್‌ಗಳಲ್ಲೂ ಸಹ ಸ್ವತ್ಛತೆ ಮಾಡದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

4 ಖಾಯಂ, 24 ನೌಕರರು ಹೊರಗುತ್ತಿಗೆ :  ಆಸ್ಪತ್ರೆಯಲ್ಲಿ ಖಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದು ಕೇವಲ ನಾಲ್ಕು ನೌಕರರು ಮಾತ್ರ. ಉಳಿದ24 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸದರಿ ಕಾರ್ಯವನ್ನೆ ನಂಬಿ ಜೀವನ ಸಾಗಿಸುತ್ತಿರುವ ನೌಕರರಿಗೆ ಕೋವಿಡ್ ಸಂಕಷ್ಟದಲ್ಲಿಯೂ ಗುತ್ತಿಗೆದಾರ ಮತ್ತು ಅಧಿಕಾರಿಗಳು ಸಂಬಳ ನೀಡದ ಪರಿಣಾಮ ನೌಕರರುಕರ್ತವ್ಯಕ್ಕೆ ಗೈರಾಗಿದ್ದು, ಆಸ್ಪತ್ರೆಯ ಒಳಗೂ ಮತ್ತು ಹೊರಗೂ ಸ್ವಚ್ಛತಾಕಾರ್ಯಗಳು ನಡೆಯದೇ ದುರ್ವಾಸನೆ ಬೀರುತ್ತಿದೆ.

ಭರವಸೆ ಹುಸಿ : ಹೊರಗುತ್ತಿಗೆ ನೌಕರರಿಗೆ ಒಂದು ವಾರದೊಳಗೆ ಸಂಬಳ ನೀಡುತ್ತೇವೆಂದು ಹೇಳಿದ್ದ ಜಿಲ್ಲಾ ಆರೋಗ್ಯಾಧಿಕಾರಿಗಳು ಭರವಸೆ ನೀಡಿ ಎರಡು ವಾರವಾದರೂ ಇನ್ನು ಸಂಬಳ ನೀಡದ ಪರಿಣಾಮ ನೌಕರರು ಕರ್ತವ್ಯಕ್ಕೆ ಗೈರಾಗಲುಕಾರಣವಾಗಿದೆ.

ಆಸ್ಪತ್ರೆಯಲ್ಲಿಕಾರ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರು ಮುಷ್ಕರದಲ್ಲಿ ತೊಡಗಿರುವುದ ರಿಂದ ಆಸ್ಪತ್ರೆಯಲ್ಲಿ ಇರುವ ನಾಲ್ಕೈದು ನೌಕರರಿಂದ ಸಂಪೂರ್ಣ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲು ಕಷ್ಟವಾಗಿದೆ. ಸಂತೋಷ್‌, ಆಸ್ಪತ್ರೆಯ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next