ಭಾರತೀನಗರ: ಜನರ ಆರೋಗ್ಯ ಕಾಪಾಡಬೇಕಾದ ವೈದ್ಯರು, ಆಸ್ಪತ್ರೆಯ ಆಡಳಿತಾಧಿಕಾರಿಗಳೇ ರೋಗ ಹರಡಲು ಕಾರಣರಾಗಿದ್ದಾರೆ.
ಹೌದು, ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಒಳಚರಂಡಿ ಕಟ್ಟಿಕೊಂಡು ಹಲವುದಿನಗಳೇ ಕಳೆದಿದ್ದರೂ, ಇದನ್ನು ಸ್ವತ್ಛಗೊಳಿಸಲು ಕ್ರಮ ಕೈಗೊಂಡಿಲ್ಲ. ಹೀಗಾಗಿ ಆಸ್ಪತ್ರೆಯ ಕಲುಷಿತ ನೀರು ಮುಖ್ಯ ರಸ್ತೆಗೆ ಹರಿಯುತ್ತಿದೆ. ಇದರಿಂದ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಕಲುಷಿತ ನೀರು ರಸ್ತೆಯ ಇಕ್ಕೆಲಗಳ ಗುಂಡಿಯನ್ನು ಸೇರುತ್ತಿದೆ. ಇದರಿಂದ ರೋಗ ಹರಡುವ ಭೀತಿ ಎದುರಾಗಿದೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳುವ ಜನತೆ ಮೂಗು ಮುಚ್ಚಿಕೊಂಡು ತೆರಳುತ್ತಿದ್ದಾರೆ. ಅಲ್ಲದೆ, ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲಿ ನಾಯಿಗಳು ಬಂದು ಮಲಗುತ್ತಿದ್ದು,ಇದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ಕೋವಿಡ್ ತಾಂಡವ:ಕೋವಿಡ್-19 ಜಿಲ್ಲೆಯಲ್ಲಿ ತಾಂಡವವಾಡುತ್ತಿದೆ. ನಿತ್ಯ 200ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.ನಿತ್ಯ ಸ್ವತ್ಛತೆ ಬಗ್ಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಅರಿವು ಮೂಡಿಸುತ್ತಿದ್ದರೂ, ಸಮು ದಾಯ ಆರೋಗ್ಯಕೇಂದ್ರದ ಆಡಳಿತಾಧಿಕಾರಿಗಳಿಗೆ ಅನ್ವಯವಾದಂತೆ ಕಾಣುತ್ತಿಲ್ಲ. ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಸಾರ್ವಜನಿಕರು,ಆರೋಗ್ಯಕೇಂದ್ರದಆಡಳಿತಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಆಕ್ರೋಶ: ಆರೋಗ್ಯ ಕಾಪಾಡಬೇಕಾದ ಆರೋಗ್ಯಕೇಂದ್ರವು ಅನಾರೋಗ್ಯವನ್ನು ಹರಡುತ್ತಿದೆ. ಆಸ್ಪತ್ರೆ ಆವರಣದಲ್ಲಿ ಸ್ವತ್ಛತೆಯನ್ನು ಕಾಪಾಡದಿದ್ದರೆ ಮುಂದಿನದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಶಿವನಂಜೇಗೌಡ, ಗೌಡಯ್ಯನದೊಡ್ಡಿ ಕಾಳೇಗೌಡ, ಮೊಗಣ್ಣ, ಕುಮಾರ, ರಾಮ, ಶಿವು ಎಚ್ಚರಿಸಿದ್ದಾರೆ.
ಆಸ್ಪತ್ರೆ ಮುಂಭಾಗ ಹರಿಯುತ್ತಿರುವ ಕಲುಷಿತ ನೀರು ತಡೆಗೆ ಈಗಾಗಲೇಕ್ರಮ ಕೈಗೊಳ್ಳಲಾಗಿದೆ. ಸಂಬಂಧಿಸಿದವರಿಗೆ ಕಲುಷಿತನೀರು ರಸ್ತೆಗೆ ಹರಿಯದಂತೆ ನೋಡಿಕೊಳ್ಳಬೇಕು ಎಂದು ತಾಕೀಲು ಮಾಡಲಾಗಿದೆ
.- ಡಾ. ಸಂದೀಪ್, ಆಡಳಿತ ವೈದ್ಯಾಧಿಕಾರಿ
ಆಸ್ಪತ್ರೆಗೆ ಬಂದರೆಕೊಳಚೆ ನೀರನ್ನು ತುಳಿದುಕೊಂಡು ಹೋಗುವ ಪರಿಸ್ಥಿತಿ ಇದೆ. ಆರೋಗ್ಯಕಾಪಾಡಬೇಕಾದ ಆಸ್ಪತ್ರೆ ವೈದ್ಯಾಧಿಕಾರಿಗಳು ಒಳಚರಂಡಿ ಸರಿಪಡಿಸಿಲ್ಲ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರುಕ್ರಮ ಕೈಗೊಂಡು, ನೈರ್ಮಲ್ಯಕಾಪಾಡಲಿ.
– ಮಧು, ಮಣಿಗೆರೆ