ಕೋಳಿ ಆಹಾರ (ಫೀಡ್)ದ ತೀವ್ರಅಭಾವ, ಸೆಕೆಯಿಂದಾಗಿ ಫಾರಂಗಳಲ್ಲಿ ಕೋಳಿ ಸಾಕಣೆ ಮಾಡದಿರುವ ಪರಿಣಾಮ ಪೂರೈಕೆ ಕಡಿಮೆಯಾಗಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
Advertisement
175 ರೂ. ದಾಟಿದ ಬೆಲೆಕೋಳಿ ಮಾಂಸದ ಬೆಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ರುತ್ತದೆ. ಕಳೆದ ತಿಂಗಳು ಕೆಜಿಗೆ 70 ರೂ. ಇದ್ದ ಬೆಲೆ 15 ದಿನಗಳಲ್ಲಿ 100 ರೂ. ದಾಟಿತು. ಕಳೆದ ವಾರ 130 ರೂ.ಗಳ ಲ್ಲಿದ್ದರೆ, ಕಳೆದೆರಡು ದಿನಗಳಿಂದ 160 ರೂ.ಗೆ ತಲುಪಿದೆ. ಮೇ 15ರ ವೇಳೆಗೆ ಕೆಜಿಯೊಂದಕ್ಕೆ 175ರಿಂದ 190 ರೂ.ಗೇರಿದೆ.
ಎಪ್ರಿಲ್, ಮೇ ತಿಂಗಳುಯಲ್ಲಿ ಕೋಳಿ ಮರಿ, ಕೋಳಿಗಳ ಸಾವಿನ ಪ್ರಮಾಣ ಹೆಚ್ಚು. ಈ ಬಾರಿ ವಿಪರೀತ ಸೆಕೆಯಿಂದಾಗಿ ಸಾವಿನ ಸಂಖ್ಯೆ ಮತ್ತೂ ಹೆಚ್ಚಿದೆ. ಕೆಲವೆಡೆ ನೀರಿನ ಕೊರತೆಯೂ ಇದೆ ಎನ್ನುತ್ತಾರೆ ಕೋಳಿ ಮಾರಾಟಗಾರರು.
Related Articles
Advertisement