Advertisement
ಹೌದು, ತಾಲೂಕಿನ ಸಾರಂಗಿ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಮೇಲ್ಸೇತುವೆ ಇಲ್ಲ. ನಿತ್ಯ ನೂರಾರು ಜನ ಜೀವ ಕೈಯಲ್ಲಿಡಿದು ಹಳ್ಳದ ರಸ್ತೆಯಲ್ಲಿ ಹಾದುಹೋಗುವ ಸ್ಥಿತಿ ಇದೆ. ತಾಲೂಕಿನಸಂತೇಬಾಚಹಳ್ಳಿ ಹೋಬಳಿಗೆ ಸೇರಿದ ಸಾರಂಗಿ ಗ್ರಾಮದ ಬಳಿ ದೊಡ್ಡ ಹಳ್ಳವೊಂದಿದೆ. ಹಳ್ಳದ ಮೇಲ್ಭಾಗದಲ್ಲಿ ಹೇಮಾವತಿ ಯೋಜನೆ ಮುಖ್ಯ ಕಾಲುವೆಗೆ ಮೇಲ್ಗಾಲುವೆ ನಿರ್ಮಿಸಲಾಗಿದೆ. ಈಮೇಲ್ಗಾಲುವೆ ಕೆಳಗೆ ಹಳ್ಳದ ನೀರು ಹರಿಯುತ್ತದೆ. ಹಳ್ಳದ ನೀರು ಹರಿದು ಹೋಗುವ ಮಾರ್ಗದಲ್ಲಿಯೇ ಪ್ರಮುಖವಾದ ಗ್ರಾಮೀಣ ರಸ್ತೆಯಿದ್ದು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಹಳ್ಳ ಹರಿದರೆ ಜನತೆ ಸಂಕಷ್ಟ ಎದುರಾಗುತ್ತದೆ.
Related Articles
Advertisement
ಸಚಿವ ನಾರಾಯಣಗೌಡ ಸಾರಂಗಿ ಪಕ್ಕದ ಕೈಗೋನಹಳ್ಳಿ ಗ್ರಾಮದವರು. ಕಳೆದ ಎಂಟೂವರೆ ವರ್ಷದಿಂದ ಕ್ಷೇತ್ರದ ಶಾಸಕರಾಗಿದ್ದಾರೆ. ಇದೀಗರಾಜ್ಯದ ಪ್ರಭಾವಿ ಸಚಿವರೂ ಆಗಿದ್ದಾರೆ. ಕಳೆದ ಡಿ.4ರಂದು ಸಚಿವ ನಾರಾಯಣಗೌಡರ ಸ್ವಗ್ರಾಮಕೈಗೋನಹಳ್ಳಿಯ ಯುವಕ ಉದಯಕುಮಾರ್‌ದಿಢೀರ್ ಸುರಿದ ಮಳೆಯಿಂದಾಗಿ ನೀರಿನ ರಭಸ ಹೆಚ್ಚಾದ ಪರಿಣಾಮ ಇದೇ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋಗಿ ಮೃತಪಟ್ಟಿರುವ ದುರ್ಘಟನೆಯೂ ನಡೆದಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನಾರಾಯಣಗೌಡ ಅವರು ಕೂಡಲೇ ಇತ್ತ ಗಮನ ಹರಿಸಿ ಹಳ್ಳದ ಸಮಾನಾಂತರ ಸೇತುವೆ ಎತ್ತರಿಸಿ ತಮ್ಮ ಭಾಗದ ಗ್ರಾಮೀಣ ಜನರ ದೈನಂದಿನ ಬವಣೆ ನೀಗಿಸಲುಮುಂದಾಗಬೇಕಾಗಿದೆ ಎಂದು ಮಲ್ಲೇನಹಳ್ಳಿ ನಂಜಪ್ಪ ಆಗ್ರಹಿಸಿದ್ದಾರೆ.
ಸಾರಂಗಿ ಹಳ್ಳಕ್ಕೆ ಮೇಲು ಸೇತುವೆ ಇಲ್ಲದ ಕಾರಣ ಜನ ಹಳ್ಳದ ನೀರಿನ ನಡುವೆಯೇ ಜೀವ ಭಯದಲ್ಲಿ ಸಂಚರಿಸುತ್ತಿದ್ದಾರೆ. ಕಳೆದ 4ದಶಕಗಳಿಂದ ಈ ಭಾಗದ ಜನ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. -ಕೈಗೋನಹಳ್ಳಿ ರಮೇಶ್, ಸಾರಂಗಿ ಗ್ರಾಪಂ ಸದಸ್ಯ
-ಅಪ್ಪನಹಳ್ಳಿ ಅರುಣ್