Advertisement

ಉದ್ಯಮ ಆರಂಭವಾದರೂ ಮೂಲ ವಸ್ತು ಕೊರತೆ

08:29 AM May 03, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿಯ ಜೀವನಾಧಾರವಾಗಿರುವ ಬೀಡಿ ಉದ್ಯಮ ಒಂದು ತಿಂಗಳ ಬಳಿಕ ನಿಧಾನವಾಗಿ ಪುನರಾರಂಭವಾಗಿದೆ. ಆದರೆ ಅಗತ್ಯಕ್ಕೆ ತಕ್ಕಷ್ಟು ಮೂಲ ವಸ್ತುಗಳ ಪೂರೈಕೆಯಾಗದ ಕಾರಣ ದುಡಿಯುವ ಕೈಗಳಿಗೆ ಕೆಲಸ ಇಲ್ಲ ಎಂಬಂತಾಗಿದೆ. ಮಂಗಳೂರಿನ ಹಲವಾರು ಬ್ರ್ಯಾಂಡೆಡ್‌, ನಾನ್‌ ಬ್ರ್ಯಾಂಡೆಡ್‌ ಬೀಡಿ ಕಂಪೆನಿಗಳು ಕಾರ್ಮಿಕರಿಗೆ ಬೇಕಾದ ಬೀಡಿ ಎಲೆ, ಹೊಗೆಸೊಪ್ಪನ್ನು ತರಿಸಿಕೊ ಳ್ಳುವುದು ಮಧ್ಯಪ್ರದೇಶ, ರಾಜಸ್ಥಾನ, ಝಾರ್ಖಂಡ್‌ ಮೊದಲಾದ ರಾಜ್ಯಗಳಿಂದ. ಕೋವಿಡ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಂತಾರಾಜ್ಯ ಸರಕು ಸಾಗಾಟ ಪೂರ್ಣ ಸ್ತಬ್ಧಗೊಂಡಿದೆ. ಕೆಲವು ಕಂಪೆನಿಗಳು ಆರು ತಿಂಗಳು ಅಥವಾ ಒಂದು ವರ್ಷಕ್ಕೆ
ಬೇಕಾದ ಕಚ್ಚಾ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತವೆ.  ಸಾಮಾನ್ಯವಾಗಿ ಎಪ್ರಿಲ್‌, ಮೇಯಲ್ಲಿ ಅಲ್ಲಿ ಕಚ್ಚಾ ಸಾಮಗ್ರಿ ಕಟಾವು ಆಗುತ್ತಿದ್ದು, ಆಗ ತರಿಸಿಕೊಳ್ಳು ವುದು ಕ್ರಮ. ಆದರೆ ಈ ವರ್ಷ ಲಾಕ್‌ಡೌನ್‌ನಿಂದಾಗಿ ಸಾಗಾಟ ಸ್ಥಗಿತಗೊಂಡಿದೆ. ಸದ್ಯ ತಮ್ಮಲ್ಲಿ ದಾಸ್ತಾನಿರುವ ಸೀಮಿತ ಕಚ್ಚಾ ಸಾಮಗ್ರಿಗಳನ್ನು ಕಾರ್ಮಿಕರಿಗೆ ನೀಡುತ್ತಿವೆ. ಇಲ್ಲಿ ಉತ್ಪಾದಿಸಲ್ಪಡುವ ಬೀಡಿಯ ಬಹುತೇಕ
ಪಾಲು ಉತ್ತರ ಭಾರತ ರಾಜ್ಯಗಳಲ್ಲಿ ಮಾರಾಟವಾ ಗುತ್ತದೆ. ಸದ್ಯದ ಸ್ಥಿತಿಯಲ್ಲಿ ಕಚ್ಚಾ ವಸ್ತುಗಳನ್ನು ತರಿಸಿ ಕೊಳ್ಳುವುದೂ ಅಸಾಧ್ಯ; ಸಿದ್ಧವಸ್ತುವನ್ನು ಕಳುಹಿಸಿ ಕೊಡುವುದೂ ಆಸಾಧ್ಯ ಎಂಬಂತಾಗಿದೆ.

Advertisement

ಶೇ. 50ರಷ್ಟು ಕೆಲಸ
ಒಂದೆಡೆ ಬೆಳಗ್ಗೆ 11 ಗಂಟೆಯೊಳಗೆ ಕಾರ್ಮಿಕರಿಂದ ಬೀಡಿ ಸಂಗ್ರಹಿಸುವುದು, ಸಾಗಿಸುವುದು ಮಾಡಬೇಕಿದೆ. ಕಚ್ಚಾ ಸಾಮಗ್ರಿ ಕೊರತೆಯೂ ಇರುವುದರಿಂದ ಅವುಗಳನ್ನು ಕಾರ್ಮಿಕರಿಗೆ ನಿಯಮಿತವಾಗಿ ಹಂಚುವ ಮೂಲಕ ಶೇ. 50ರಷ್ಟು ಕೆಲಸವನ್ನು ನೀಡಲು ಉಭಯ ಜಿಲ್ಲೆಗಳಲ್ಲಿ ನಿರ್ಧರಿಸಲಾಗಿದೆ.

ಲಾಕ್‌ಡೌನ್‌ನಲ್ಲಿ ಬೇಡಿಕೆ ಅಧಿಕ
ಸಾಮಾನ್ಯವಾಗಿ ಮಾರ್ಚ್‌, ಎಪ್ರಿಲ್‌, ಮೇಯಲ್ಲಿ ವಿವಿಧ ರೀತಿಯ ಸಮಾರಂಭ, ಉತ್ಸವಗಳು ನಡೆಯುವುದರಿಂದ ಕಾರ್ಮಿಕರು ಅಷ್ಟಾಗಿ ಬೀಡಿ ಕಾಯಕದಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ. ಆದರೆ ಈ ವರ್ಷ ಲಾಕ್‌ಡೌನ್‌ನಿಂದಾಗಿ ಮನೆಯಿಂದ ಹೊರಗೆ ಹೋಗುವಂತಿಲ್ಲ. ಮನೆಯ ಇತರ ಸದಸ್ಯರೂ ಮನೆಯಲ್ಲಿ ದ್ದಾರೆ. ಹಾಗಾಗಿ ಬೀಡಿ ಕಟ್ಟುವ ಕೆಲಸಕ್ಕೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಬೀಡಿ ಕಾಂಟ್ರಾಕುrದಾರರು.

ಸಾವಿರ ಬೀಡಿ ಕಟ್ಟಿದರೆ 180 ರೂ. ಸಿಗುತ್ತದೆ. ಗರಿಷ್ಠವೆಂದರೆ ಸಾಮಾನ್ಯವಾಗಿ ಒಬ್ಬರು ದಿನಕ್ಕೆ 800 ಬೀಡಿ ಕಟ್ಟಲು ಸಾಧ್ಯ. ಆದರೆ ಅದುವೇ ಕರಾವಳಿಯ ಲಕ್ಷಾಂತರ ಮಂದಿಗೆ ಜೀವನಾಧಾರ. ಆದರೆ ಈಗ ಅಷ್ಟೂ ಕೆಲಸ ಸಿಗುತ್ತಿಲ್ಲ. ಶೇ. 50ರಷ್ಟು ಮಾತ್ರ ಕೆಲಸ ಸಿಗುತ್ತಿದೆ. ಕಚ್ಚಾವಸ್ತು ಸಾಗಾಟಕ್ಕೆ ಸರಕಾರಗಳು ಅವಕಾಶ ಮಾಡಿಕೊಡಬೇಕು.
– ಜೆ. ಬಾಲಕೃಷ್ಣ ಶೆಟ್ಟಿ , ಪ್ರಧಾನ ಕಾರ್ಯದರ್ಶಿ, ಬೀಡಿ ವರ್ಕರ್ ಫೆಡರೇಶನ್‌

ದ.ಕ., ಉಡುಪಿ ಜಿಲ್ಲೆಯಲ್ಲಿ 4 ಲಕ್ಷ ಮಂದಿ ಬೀಡಿ ಕಾರ್ಮಿಕರು, 3,000 ಕಾಂಟ್ರಾಕುrದಾರರಿದ್ದು, ಅವರೆಲ್ಲರ ಬದುಕಿನ ಮೇಲೆ ಲಾಕ್‌ಡೌನ್‌ ದೊಡ್ಡ ಪೆಟ್ಟು ನೀಡಿದೆ. ದ.ಕ. ಜಿಲ್ಲೆಯಲ್ಲಿ ಎ. 27ಕ್ಕೆ ಹಾಗೂ ಉಡುಪಿಯಲ್ಲಿ ಎ. 29ಕ್ಕೆ ಬೀಡಿ ಉದ್ಯಮ ಮರು ಆರಂಭಗೊಂಡಿದೆ. ಹೆಚ್ಚಿನ ಕಂಪೆನಿಗಳು ಶೇ. 50ರಷ್ಟು ಕೆಲಸ ನೀಡುವ ಭರವಸೆ ಕೊಟ್ಟಿವೆ. ಮೂಲವಸ್ತುಗಳ ಪೂರೈಕೆ ಆರಂಭವಾಗದಿದ್ದರೆ ಮೇ ತಿಂಗಳಿನಲ್ಲಿ ಭಾರೀ ಸಮಸ್ಯೆಯಾಗುವ ಆತಂಕವಿದೆ.
– ಕೃಷ್ಣಪ್ಪ, ಅಧ್ಯಕ್ಷರು, ದ.ಕ., ಉಡುಪಿ ಜಿಲ್ಲಾ ಬೀಡಿ ಕಾಂಟ್ರಾಕುrದಾರರ ಸಂಘ

Advertisement

ಕಾರ್ಮಿಕರಿಂದ ಸಂಗ್ರಹಿಸಿದ ಬೀಡಿಯನ್ನು ಸಾಗಿಸಲು, ಬೀಡಿ ಸಾಮಗ್ರಿಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸಾಗಿಸಲು ಪಾಸ್‌ ನೀಡಲಾಗಿದೆ.
– ನಾಗರಾಜ್‌, ಕಾರ್ಮಿಕರ ಅಧಿಕಾರಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next