Advertisement
ಕೋಟ: ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಸಾೖಬ್ರಕಟ್ಟೆ ಜನತಾ ಕಾಲನಿಯಲ್ಲಿ ಬಹುತೇಕ ಭೋವಿ ಜನಾಂಗದವರು ವಾಸವಾಗಿದ್ದಾರೆ. ಇಲ್ಲಿನ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರದ ಸಮಸ್ಯೆ ಇದೆ ಹಾಗೂ ವಿದ್ಯುತ್ ಸಂಪರ್ಕ, ವಸತಿ ಯೋಜನೆಯ ಮನೆ ಮತ್ತು ಸರಕಾರದ ಹಲವು ಸೌಕರ್ಯಗಳನ್ನು ಪಡೆಯಲು ಸಮಸ್ಯೆ ಇದೆ. ಈ ಬಗ್ಗೆ ಹೋರಾಟಗಳು ನಡೆಯುತ್ತಿದ್ದು, ಹಕ್ಕು ಪತ್ರ ನೀಡಿಕೆ ಇದೀಗ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಕ್ಕುಪತ್ರದ ಜತೆಗೆ ಕಾಲನಿಗೆ ಇತರ ಮೂಲಸೌಕರ್ಯಗಳನ್ನು ಕಲ್ಪಿಸುವ ಬಗ್ಗೆಯೂ ಆಡಳಿತ ವ್ಯವಸ್ಥೆ ಗಮನಹರಿಸಬೇಕಿದೆ.
Related Articles
Advertisement
ಹಕ್ಕುಪತ್ರ ಸಮಸ್ಯೆಯ ಪರಿಶೀಲನೆಗಾಗಿ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್‌ಮೂರ್ತಿ ಅವರು ಇತ್ತೀಚೆಗೆ ಸ್ಥಳಕ್ಕಾಗ ಮಿಸಿದ್ದು ಸ್ಥಳೀಯ ವಾರ್ಡ್ ಸದಸ್ಯರಾದ ಅಮೃತ್ ಪೂಜಾರಿ ಅವರ ಉಸ್ತುವಾರಿಯಲ್ಲಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಲಾಗಿದೆ ಹಾಗೂ ಸಮಸ್ಯೆ ಪರಿಹರಿಸುವ ಭರವಸೆ ಯನ್ನು ತಹಶೀಲ್ದಾರರು ನೀಡಿದ್ದಾರೆ.
ಸೂಕ್ತ ಕ್ರಮ :
ಇಲ್ಲಿನ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತಿದ್ದು ಈಗಾಗಲೇ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದ್ದು ಅಂತಿಮ ಹಂತದಲ್ಲಿದೆ. ಅದೇ ರೀತಿ ಎಲ್ಲ ಅಭಿವೃದ್ಧಿಯ ಕುರಿತು ಗಮನಹರಿಸಲಾಗುವುದು. – ಅಮೃತ್ ಪೂಜಾರಿ, ಸ್ಥಳೀಯ ವಾರ್ಡ್ ಸದಸ್ಯ
ಇತರ ಸಮಸ್ಯೆಗಳೇನು? :
- ಈ ಕಾಲನಿಗೆ ಅಪರಿಚಿತರು ಸಾಕು ಹಂದಿಗಳನ್ನು ತಂದು ಬಿಡುತ್ತಿದ್ದು ಇವುಗಳಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸ್ಥಳೀಯಾಡಳಿತ ಇವುಗಳನ್ನು ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಇದೆ.
- ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುವ ಕಾರ್ಮಿಕರ ಬಯಲು ಶೌಚ ತಡೆಗೆ ಕ್ರಮ ಅಗತ್ಯವಿದೆ.
- ಚರಂಡಿ ಸಮಸ್ಯೆಯಿಂದ ಕೊಳಚೆ ನೀರು ನಿಂತು ಸೊಳ್ಳೆ ಉತ್ಪಾದನೆಯಾಗುತ್ತಿದೆ.
- ಬೀದಿ ನಾಯಿಗಳ ಕಾಟವೂ ಸಾಕಷ್ಟಿದೆ.
- ಪ್ರತೀ ವರ್ಷವೂ ಕುಡಿಯುವ ನೀರಿನ ಸಮಸ್ಯೆ
- ಸಾಕಷ್ಟು ಕುಟುಂಬಗಳಿಗೆ ವ್ಯವಸ್ಥಿತವಾದ ಮನೆ ಇಲ್ಲ .