Advertisement
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ತುಳಸಿಕೆರೆ ಇಂಡಿಗನತ್ತ, ಮೆಂದಾರೆ, ತೇಕಾಣಿ, ಪಡಸಲನತ್ತ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳಾದ ವಿದ್ಯುತ್ ಸಾರಿಗೆ ವ್ಯವಸ್ಥೆ ಉನ್ನತ ಶಿಕ್ಷಣ ವ್ಯವಸ್ಥೆ ಆರೋಗ್ಯ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಜೀವನ ಸುಧಾರಣೆಗೆ ಬೇಕಾದ ಮೂಲಸೌಕರ್ಯ ಕೊರತೆಯಿಂದ ವಂಚಿತರಾಗಿದ್ದು, ನಾವು ಸಹ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಇನ್ನು ಮುಂದೆ ನಾವು ಮತದಾನ ಬಹಿಷ್ಕಾರ ಮಾಡುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಜನ ಪ್ರತಿನಿಧಿ ಗಳಿಗೆ ಗ್ರಾಮಸ್ಥರಿಂದ ಪತ್ರ ಬರೆಯ ಲಾಗಿತ್ತು.
Related Articles
Advertisement
ರೈತ ಮುಖಂಡ ಮಾದೇಶ್ ಮಾತನಾಡಿ, ನಾವು ಪ್ರತಿದಿನ ಕತ್ತಲೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ನೀವು ಸಹ ಇಂದು ನಮ್ಮ ಜೊತೆಯಲ್ಲಿ ಇರಿ ನಮ್ಮ ಕಷ್ಟಗಳನ್ನು ಕಣ್ಣಾರೆ ನೋಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆ ವೇಳೆ ಗ್ರಾಮಸ್ಥರುಗಳು ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ನಾವು ಅನಾರೋಗ್ಯ ಸಂಬಂಧ ಮಹದೇಶ್ವರ ಬೆಟ್ಟಕ್ಕೆ ತೆರಡುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್‌ನಲ್ಲಿ ತಡೆಯುತ್ತಾರೆ. ಹಣ ನೀಡಿದರೆ ಬಿಡುತ್ತಾರೆ. ಇನ್ನು ಮದ್ಯ ಮಾರಾಟ ಮಾಡುವುದರಿಂದ ಹಣ ವಸೂಲಿ ಮಾಡಿಕೊಂಡು ಬಿಟ್ಟು ಬಿಡುತ್ತಿದ್ದಾರೆ ಎಂದು ಆರ್ ಎಫ್ಓ ಅವರಿಗೆ ತಿಳಿಸಿದ್ದಾರೆ. ಈ ವೇಳೆ ವಲಯ ಅರಣ್ಯಾಧಿಕಾರಿ ಭಾರತೀಯ ನಂದಿಹಳ್ಳಿ ಮಾತನಾಡಿ, “ನೀವು ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ. ನೇರವಾಗಿ ನನ್ನನ್ನೇ ಸಂಪರ್ಕ ಮಾಡಿ ಎಂದು ದೂರವಾಣಿ ಸಂಖ್ಯೆಯನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಾಗರತ್ನಮ್ಮ ಮುಖಂಡ ರವಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಮಹಿಳೆಯರಿಂದ ಆರ್‌ಎಫ್ಒಗೆ ದಿಗ್ಬಂಧನ :
ಗ್ರಾಮಸ್ಥರನ್ನು ಭೇಟಿ ಮಾಡಿ ಚುನಾವಣಾ ಮತದಾನದಲ್ಲಿ ಭಾಗವಹಿಸುವಂತೆ ಮನವೊಲಿಸಲು ತೆರಳಿದ್ದ ಮಲೆಮಹದೇಶ್ವರ ಬೆಟ್ಟ ಆರ್ ಎಫ್ಒ ಭಾರತಿ ನಂದಿಹಳ್ಳಿ ರವರಿಗೆ ಇಂಡಿಗನತ್ತ ಗ್ರಾಮದ ಮಹಿಳೆಯರು ನೀವು ಸಹ ನಮ್ಮ ರೀತಿಯೇ ನಡೆದುಕೊಂಡು ಹೋಗಬೇಕು. ನೀವು ಯಾವುದೇ ಕಾರಣಕ್ಕೂ ಜೀಪ್ ನಲ್ಲಿ ತೆರಳಬಾರದು. ನಮ್ಮ ಕಷ್ಟ ಏನು ಎಂದು ನಿಮಗೆ ತಿಳಿಯಬೇಕು ಎಂದು ದಿಗ್ಬಂದನ ಹಾಕಿ ನಂತರ ಬಿಟ್ಟು ಕಳುಹಿಸಿದ್ದಾರೆ. ಒಟ್ಟಾರೆ ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಬೇಕಾಯಿತು.