Advertisement
ಚಿಕ್ಕೋಡಿ: ನಗರ, ಪಟ್ಟಣ ಪ್ರದೇಶದಲ್ಲಿ ವಕ್ಕರಿಸಿಕೊಂಡಿದ್ದ ಮಹಾಮಾರಿ ಕೊರೊನಾ ಇದೀಗ ಹಳ್ಳಿಗಳಲ್ಲಿ ಸದ್ದು ಮಾಡುತ್ತಿದೆ. ಸದಾ ಆರೋಗ್ಯವಂತವಾಗಿ ಇರುತ್ತಿದ್ದ ಹಳ್ಳಿಗಳತ್ತ ಸೋಂಕು ವ್ಯಾಪಿಸಿಕೊಂಡಿದೆ.
Related Articles
Advertisement
ಸೋಂಕು ತಡೆಗೆ ತಂಡ ರಚನೆ: ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಆಶಾ ಕಾರ್ಯಕರ್ತರನ್ನೊಳ್ಳಗೊಂಡ ತಂಡ ರಚಿಸಿದ್ದು, ಯಾರಿಗೆ ಸೋಂಕು ತಗುಲಿದೆ ಅಂತಹವರ ಮನೆಗೆ ಹೋಗಿ ಮೆಡಿಕಲ್ ಕಿಟ್ ನೀಡಿ ಮನೆಯಲ್ಲಿದ್ದು ಕೊರೊನಾ ಗುಣಮುಖವಾಗಬೇಕೆಂದು ಸಲಹೆ ನೀಡುತ್ತಿದ್ದಾರೆ. ಮೆಡಿಕಲ್ ಕಿಟ್‌ದಲ್ಲಿ ಕೊರೊನಾ ಸೋಂಕು ಕಡಿಮೆ ಮಾಡುವ ಮಾತ್ರೆಗಳು ಇರುತ್ತವೆ.
ತಾಲೂಕಾಡಳಿತದ ಗಮನಕ್ಕೆ ತಾರದೇ ನಡೆಯುತ್ತವೆ ಮದುವೆ-ಸಮಾರಂಭಗಳು: ಕೊರೊನಾ ಸೋಂಕು ಗಂಭೀರತೆ ಅರಿತುಕೊಳ್ಳದ ಗ್ರಾಮೀಣ ಪ್ರದೇಶದ ಜನರು ತಾಲೂಕಾಡಳಿತದ ಗಮನಕ್ಕೆ ತಾರದೇ ತೋಟಪಟ್ಟಿ ಪ್ರದೇಶದಲ್ಲಿ ಬಂಧು ಬಳಗ ಕರೆದುಕೊಂಡು ಅದ್ದೂರಿಯಾಗಿ ಮಧುವೆ ಮತ್ತು ಇನ್ನಿತರ ಸಭೆ ಸಮಾರಂಭ ಆಯೋಜಿಸುತ್ತಿದ್ದಾರೆ. ಇದರಿಂದಲೂ ಸೋಂಕು ಹೆಚ್ಚಳವಾಗುತ್ತಿವೆ. ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಇಡೀ ಗ್ರಾಮವೇ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತವೆ. ಇದು ಸಹ ಸೋಂಕು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಮೂಲಭೂತ ಸೌಲಭ್ಯ ಕೊರತೆ: ಗ್ರಾಮೀಣ ಪ್ರದೇಶದ ಜನರಿಗೆ ಸಿಬೇಕಾದ ಮೂಲಭೂತ ಸೌಲಭ್ಯ ಮರೀಚಿಕೆಯಾಗಿದೆ. ಸರ್ಕಾರ ಕೋವಿಡ್ ಆಸ್ಪತ್ರೆಗಳನ್ನು ತೆರೆದಿದೆ. ಆದರೆ ಅಲ್ಲಿ ಆಕ್ಸಿಜನ್ ಬೆಡ್ ಮತ್ತು ಇತರೇ ಸೌಲಭ್ಯ ಇಲ್ಲ. ಗ್ರಾಮಗಳಲ್ಲಿ ಇರುವ ಆರೋಗ್ಯ ಕೇಂದ್ರದಲ್ಲಿ ನುರಿತ ವೈದ್ಯರೂ ಮತ್ತು ಸಮರ್ಪಕ ಆರೋಗ್ಯ ಸೇವೆ ಇಲ್ಲದೇ ಇರುವುದರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಾ ಹೋಗುತ್ತಿದೆ.