Advertisement

ಅಂಗನವಾಡಿಗೆ ಸೌಕರ್ಯ ಕೊರತೆ

04:32 PM Jul 31, 2019 | Team Udayavani |

ದೋಟಿಹಾಳ: ದೂರದಿಂದ ನೋಡಿದರೆ ಸಣ್ಣ ಮನೆಯಂತೆ ಕಾಣ್ಣುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂಗನವಾಡ ಕೇಂದ್ರ ಎಂಬುದು ಗೊತ್ತಾಗುತ್ತದೆ. ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ, ಕೊಟ್ಟಗೆಯಂತಹ ಒಂದು ಅಂಕಣದಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡಲಾಗುತ್ತಿದೆ. ಬಳೂಟಗಿ ಗ್ರಾಮದ 3ನೇ ಅಂಗನವಾಡಿ ಕೇಂದ್ರ ದುಸ್ಥಿತಿ ಇದು.

Advertisement

ಈ ಕೇಂದ್ರ ಆರಂಭವಾಗಿ ನಾಲ್ಕೈದು ವರ್ಷಗಳಾಗಿವೆ. ಆದರೆ ಇದುವರೆಗೂ ಕೇಂದ್ರ ಕಟ್ಟಡ ನಿರ್ಮಿಸಲು ಜಾಗ ಇಲ್ಲದ ಕಾರಣ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಆರಂಭದಿಂದ ಇದುವರೆಗೂ 4-5 ಬಾಡಿಗೆ ಮನೆಗಳನ್ನು ಬದಲಾಯಿಸಲಾಗಿದೆ. ಸದ್ಯ ಮಣ್ಣಿನ ಛಾವಣಿ ಇರುವ ಮನೆಯಲ್ಲಿ ಕೇಂದ್ರ ನಡೆಯುತ್ತಿದೆ. ಈ ಮನೆಗೆ ವಿದ್ಯುತ್‌ ಸಂಪರ್ಕ, ಶೌಚಾಲಯ ಹಾಗೂ ಸರಿಯಾದ ಬೆಳಕಿನ ವ್ಯವಸ್ಥೆಇಲ್ಲ. ಇಕ್ಕಟ್ಟಾದ ಸ್ಥಳದಲ್ಲಿ ಕೇಂದ್ರ ನಡೆಯುತ್ತಿದೆ. ಕೊಠಡಿಯ ಒಂದು ಮೂಲೆಯಲ್ಲಿ ಅಡುಗೆ ಮಾಡಿದರೆ, ಇನ್ನೊಂದು ಮೂಲೆಯಲ್ಲಿ ಸಾಮಗ್ರಿ ಇಡಲಾಗಿದೆ. ಛಾವಣಿ ದುರಸ್ತಿಯಲ್ಲಿದ್ದು, ಮಳೆಗಾಲದಲ್ಲಿ ನೀರೆಲ್ಲ ಒಳಗಡೆಯೇ ಬರುತ್ತವೆ. ಇಂತಹ ಸ್ಥಿತಿಯಲ್ಲಿ ಮಧ್ಯಾಹ್ನ ಊಟ ಮಾಡಲು ಸ್ಥಳಾವಕಾಶವಿಲ್ಲದ ಕಾರಣ ಮಾತೃಪೂರ್ಣ ಯೋಜನೆ ಫಲಾನುಭವಿಗಳು ಊಟವನ್ನು ಮನೆಗಳಿಗೆ ಒಯ್ಯುತ್ತಿದ್ದಾರೆ.

ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು 25 ಮಕ್ಕಳಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ, ಕಲಿಕೆಗೆ ಅಗತ್ಯವಾದ ಪರಿಸರವಿಲ್ಲದ ದನದ ಕೊಟ್ಟಿಗೆಯಂತ ಕೊಠಡಿಯಲ್ಲಿ ಅಂಗನವಾಡಿ ನಡೆಯುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಅಂಗನವಾಡಿ ಕೇಂದ್ರಕ್ಕೆ ಉತ್ತಮ ಕಟ್ಟಡ ಒದಗಿಸಲು ಕ್ರಮಕೈಗೊಳ್ಳಬೇಕು.

ಅಂಗನವಾಡಿ ಕಾರ್ಯಕರ್ತೆ ಮಾತನಾಡಿ, ಕೇಂದ್ರದ ಕಟ್ಟಡ ನಿರ್ಮಿಸಲು ಜಾಗದ ಸಮಸ್ಯೆ ಇದೆ. ಇದರ ಬಗ್ಗೆ ಹಲವು ಭಾರಿ ಗ್ರಾಮಸ್ಥರು ಜೊತೆ ಅಧಿಕಾರಿಗಳ ಚರ್ಚೆ ಮಾಡಿದ್ದಾರೆ. ಆದರೂ ಕಟ್ಟಡಕ್ಕೆ ಜಾಗ ಸಿಗುತ್ತಿಲ್ಲ. ಇತ್ತೀಚೆಗೆ ಗ್ರಾಮದ ಹಿರಿಯರೊಬ್ಬರು ತಮ್ಮ ಹೊಲದಲ್ಲಿ ಜಾಗ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬಳೂಟಗಿ ಗ್ರಾಮದ 3ನೇ ಅಂಗನವಾಡಿ ಕೇಂದ್ರಕ್ಕೆ ಜಾಗದ ಕೊರತೆಯಿಂದ ಕಟ್ಟಡ ನಿರ್ಮಾಣವಾಗಿಲ್ಲ. ಗ್ರಾಮಸ್ಥರು ಕೇಂದ್ರಕ್ಕೆ ಜಾಗದ ವ್ಯವಸ್ಥೆ ಮಾಡಿದರೆ ಕಟ್ಟಡ ನಿರ್ಮಾಣ ಕ್ರಮಕೈಗೊಳ್ಳುತ್ತೇವೆ ಎಂದು ಕುಷ್ಟಗಿ ಸಿಡಿಪಿಒ ವೀರೇಂದ್ರ ನಾವದಗಿ ಅವರು ಹೇಳಿದರು.

Advertisement

•ನಿವೇಶನ ನೀಡಿದರೆ ನೂತನ ಕಟ್ಟಡ ನಿರ್ಮಾಣ

•ಮಕ್ಕಳ ಕಲಿಕೆಗೆ ಗಾಳಿ, ಬೆಳಕಿನ ಸಮಸ್ಯೆ

 

•ಮಲ್ಲಿಕಾರ್ಜುನ ಮೆದಿಕೇರಿ.

Advertisement

Udayavani is now on Telegram. Click here to join our channel and stay updated with the latest news.

Next