Advertisement

ವಾಲಿಬಾಲ್‌ ಗುಟ್ಟ ಕಾಲೋನಿಯಲ್ಲಿ ಮೂಲ ಸೌಕರ್ಯ ಮರೀಚಿಕೆ

01:28 PM Jan 06, 2021 | Team Udayavani |

ಬಾಗೇಪಲ್ಲಿ: ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ನಿವಾಸಿಗಳು ಕೊಳಚೆ ಪ್ರದೇಶದಲ್ಲಿ ವಾಸಿಸುವದುಸ್ಥಿತಿ ಪಾತಾಪಳ್ಯ ಗ್ರಾಮದ ವಾಲಿಬಾಲ್‌ ಗುಟ್ಟಕಾಲೋನಿಯಲ್ಲಿ ಕಂಡು ಬಂದಿದ್ದು, ಇಲ್ಲಿನ ನಾಗರಿಕರಿಗೆ ಇದುವರೆಗೂ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫ‌ಲರಾಗಿದ್ದಾರೆ.

Advertisement

ತಾಲೂಕಿನ ಪಾತಾಪಳ್ಯ ಗ್ರಾಪಂ ಕೇಂದ್ರ ಸ್ಥಾನಹಾಗೂ ಗ್ರಾಪಂ ಕಾರ್ಯಾಲಯದ ಮುಂಭಾಗದಲ್ಲಿರುವ ವಾಲಿಬಾಲ್‌ ಗುಟ್ಟಕಾಲೋನಿನಿವಾಸಿಗಳು ಕನಿಷ್ಠ ಸೌಲಭ್ಯಗಳಿಲ್ಲದೇ ಪರ ದಾಡುವಂತಾಗಿದೆ. ಮುಖ್ಯರಸ್ತೆಗೆ ಹೊಂದು ಕೊಂಡಿರುವ ಈ ಕಾಲೋನಿಗೆ ಕಾಲ್ನಡಿಗೆಯಲ್ಲಿ ತೆರಳಲು ಸಹ ಕಷ್ಟ ಸಾಧ್ಯವಾಗಿದೆ. ಇಲ್ಲಿನ ರಸ್ತೆಗಳು ಸಂಪೂರ್ಣ ಇಂದಿಗೂ ಕಾಡುಕಲ್ಲುನಿಂದ ನಿರ್ಮಿಸಿರುವ ಹಳೆಯ ರಸ್ತೆಗಳಾಗಿದ್ದು, ರಸ್ತೆ ಮತ್ತು ಮನೆಗಳ ಮುಂಭಾಗದಲ್ಲಿ ಚರಂಡಿ ನಿರ್ಮಾಣ ಮಾಡದ ಕಾರಣನಿತ್ಯ ಬಳಕೆ ಹಾಗೂ ಶೌಚಾಲಯ ಕೊಳಚೆನೀರು ರಸ್ತೆಯ ಮಧ್ಯದಲ್ಲೇ ಶೇಖರಣೆಯಾಗಿರುತ್ತದೆ.

ಕೆಲ ಸಾರ್ವಜನಿಕರು ಮನೆಗಳ ಸುತ್ತಮುತ್ತಲಿನಪ್ರದೇಶದ ಖಾಲಿ ಜಾಗದಲ್ಲಿ ಗುಂಡಿಗಳನ್ನುತೋಡಿಕೊಂಡು ಚರಂಡಿಯ ಕೊಳಚೆ ನೀರನ್ನು ಗುಂಡಿಗೆ ತುಂಬಿಸಿದ್ದಾರೆ. ಗುಂಡಿಗಳಿಂದಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುವುದರ ಜೊತೆಗೆ ದುರ್ವಾಸನೆ ಬೀರುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಮರ್ಪಕ ಶುದ್ಧ ಕುಡಿಯುವನೀರಿನ ಸರಬರಾಜು ಇಲ್ಲದೇ ಶುದ್ಧ ನೀರಿಗೂ ಪರದಾಡುವ ಪರಿಸ್ಥಿತಿ ಇಲ್ಲಿನ ನಾಗರಿಕರನ್ನು ಕಾಡುತ್ತಿದೆ.

ಸೌಕರ್ಯ ಕಲ್ಪಿಸಲಿ: ಚುನಾವಣೆ ಸಮಯದಲ್ಲಿಮತಕ್ಕಾಗಿ ಇಲ್ಲಿನ ನಿವಾಸಿಗಳಲ್ಲಿ ಮತಯಾಚನೆಮಾಡುವ ರಾಜಕಾರಣಿಗಳಿಗೆ ಈ ಭಾಗದಜಲ್ವಂತ ಸಮಸ್ಯೆಗಳು ಕಣ್ಣಿಗೆ ಕಾಣಿಸುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಸಂಬಂಧಪಟ್ಟಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಮೂಲ ಸೌಕರ್ಯ ಕಲ್ಪಿಸಲು ಗಮನ ಹರಿಸಬೇಕಾಗಿದೆ.

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರಕೋಟ್ಯಂತರ ರೂ. ಬಿಡುಗಡೆಮಾಡುತ್ತಿದ್ದರೂ ಕಾಳಜಿ ಇಲ್ಲದ ಅಧಿಕಾರಿಗಳ ಧೋರಣೆಯಿಂದ ಇಲ್ಲಿನ ನಿವಾಸಿಗಳು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮೂರ್ತಿ, ಅಂಬೇಡ್ಕರ್‌ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ, ಪಾತಪಾಳ್ಯ

Advertisement

ಪಾತಪಾಳ್ಯ ಗ್ರಾಮದ ವಾಲಿಬಾಲ್‌ ಗುಟ್ಟ ಕಾಲೋನಿ ಎತ್ತರದಪ್ರದೇಶದಲ್ಲಿದ್ದು, ಸಮತಟ್ಟು ಇಲ್ಲದಕಾರಣ ರಸ್ತೆ ಮತ್ತು ಚರಂಡಿಗಳನಿರ್ಮಾಣಕ್ಕೆ ಅಡಚಣೆ ಉಂಟಾಗಿದೆ.ಕಾಲೋನಿಯ ಸಂಪೂರ್ಣ ರಸ್ತೆಗಳನ್ನು ಏಕಕಾಲದಲ್ಲಿ ನಿರ್ಮಿಸಿ ಎಂಬ ಸ್ಥಳೀಯರ ಬೇಡಿಕೆಗೆ ಗ್ರಾಪಂನಲ್ಲಿ ಅಗತ್ಯ ಅನುದಾನದ ಕೊರತೆ ಇದೆ. ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸುತ್ತೇವೆ. –ನಾರಾಯಣ, ಪಿಡಿಒ, ಪಾತಪಾಳ್ಯ ಗ್ರಾಪಂ

 

ಪಿ.ಮಂಜುನಾಥ ರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next