Advertisement

LABತಪ್ಪಲಿದೆ ಜಿಲ್ಲಾಸ್ಪತ್ರೆ ಅಲೆದಾಟ: ರೋಗ ಪರೀಕ್ಷೆಗೆ ತಾಲೂಕು ಆಸ್ಪತ್ರೆಗಳಲ್ಲೂ ಪ್ರಯೋಗಾಲಯ

01:03 AM Sep 29, 2023 | Team Udayavani |

ಮಂಗಳೂರು: ಸದ್ಯ ಜಿಲ್ಲಾಸ್ಪತ್ರೆಗ ಳಲ್ಲಷ್ಟೇ ಇರುವ ವೈರಾಣು ಪರೀಕ್ಷೆ ಪ್ರಯೋ ಗಾಲಯ ಸೌಲಭ್ಯ ಇನ್ನು ಉಭಯ ಜಿಲ್ಲೆಗಳ ತಾಲೂಕು ಆಸ್ಪತ್ರೆಗಳಲ್ಲೂ ಲಭ್ಯವಾಗಲಿವೆ.

Advertisement

ವಿವಿಧ ರೋಗಗಳ ಹೆಚ್ಚಿನ ತಪಾಸಣೆಗೆ ಪ್ರಯೋಗಾಲಯಗಳು ಸದ್ಯ ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿಲ್ಲಾಸ್ಪತ್ರೆ ಗಳಲ್ಲಿ ಇವೆ. ಸದ್ಯವೇ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕು ಆಸ್ಪತ್ರೆಗಳಲ್ಲೂ ಪ್ರಯೋಗಾಲಯ ಸ್ಥಾಪನೆಗೊಳ್ಳಲಿದ್ದು, ಕ್ರಮೇಣ ಸಮುದಾಯ ಆಸ್ಪತ್ರೆಗಳಿಗೂ ವಿಸ್ತರಣೆಗೊಳ್ಳಲಿದೆ.

ಉಡುಪಿ ಜಿಲ್ಲೆಯ ಕುಂದಾ ಪುರದಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಗೊಂಡಿದೆ. ಕಾರ್ಕಳದಲ್ಲೂ ಶೀಘ್ರವೇ ಆರಂಭಗೊಳ್ಳಲಿದೆ. ಉಳಿದ ತಾಲೂಕು ಗಳಿಗೂ ವಿಸ್ತರಣೆಯಾಗಲಿದೆ.

ಈ ಪ್ರಯೋಗಾಲಯದಲ್ಲಿ ಡೆಂಗ್ಯೂ, ಐಜಿಎಂ ಎನ್‌ಎಸ್‌1, ಇಲಿ ಜ್ವರ, ಹೆಪ ಟೈಟಿಸ್‌ ಎಲಿಸಾ, ಹೆಪಟೈಟಿಸ್‌ ಎ, ಹೆಪ ಟೈಟಿಸ್‌ ಇ, ಚಿಕುನ್‌ಗುನ್ಯ, ಟೈಪಾಯ್ಡ, ಫ‌ಂಗಸ್‌ ಟೆಸ್ಟೆಡ್‌ ಕಲ್ಚರ್‌, ಮಲೇರಿಯಾ, ಟಿಬಿ, ಎಚ್‌1ಎನ್‌1 ಸಹಿತ ವಿವಿಧ ರೋಗಗಳ ಪರೀಕ್ಷೆಯನ್ನು ಮಾಡಲಾಗುತ್ತದೆ.

ಸದ್ಯದಲ್ಲೇ ಎಂಆರ್‌ಐ, ಡಯಾಲಿಸಿಸ್‌ ರೋಗಿಗಳು ಎಂಆರ್‌ಐ ಸ್ಕಾ ನಿಂಗ್‌ ಅಥವಾ ಡಯಾಲಿಸಿಸ್‌ಗೆ ಇದುವರೆಗೆ ಜಿಲ್ಲಾಸ್ಪತ್ರೆಗೆ ಹೋಗಬೇಕಿತ್ತು. ಆದರೆ ಮುಂದೆ ಈ ಸೌಲಭ್ಯ ತಾಲೂಕು ಆಸ್ಪತ್ರೆಗಳಲ್ಲೂ ಲಭ್ಯವಾಗಲಿದೆ. ಈ ಬಗ್ಗೆ ರಾಜ್ಯ ಸರಕಾರ ಈಗಾ ಗಲೇ ಸೂಚಿಸಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಉದ್ದೇಶಗಳು ಸಮರ್ಪಕವಾಗಿ ಜಾರಿಯಾಗಬೇಕೆಂದು ತಿಳಿಸಲಾಗಿದೆ.

Advertisement

ಏನಿದುಲ್ಯಾಬ್‌?
ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಡಿಸ್ಟ್ರಿಕ್ಟ್ ಪಬ್ಲಿಕ್‌ ಲ್ಯಾಬ್‌ (ಡಿಪಿಎಚ್‌ಎಲ್‌ ) ಇದೆ. ಅದೇ ರೀತಿ ತಾಲೂಕು ಮಟ್ಟದಲ್ಲಿ ಬ್ಲಾಕ್‌ ಪಬ್ಲಿಕ್‌ ಹೆಲ್ತ್‌ ಲ್ಯಾಬೊರೇಟರಿ (ಬಿಪಿಎಚ್‌ಎಲ್‌) ಆರಂಭಗೊಳ್ಳಲಿದೆ. ಈ ಹಿಂದೆ ಒಂದೇ ಪ್ರಯೋಗಾಲಯದಲ್ಲಿ ಎಲ್ಲ ಪರೀಕ್ಷೆಗಳನ್ನು ನಡೆಸಲಾಗುತ್ತಿರಲಿಲ್ಲ. ಈಗ ಆ ಎಲ್ಲ ವ್ಯವಸ್ಥೆ ಗಳನ್ನು ಒಂದೇ ಸೂರಿನಡಿ ತರುತ್ತಿದ್ದು, ತಾಲೂಕು ಮಟ್ಟದಲ್ಲೇ ಸಿಗುವ ಕಾರಣ ಜಿಲ್ಲಾಸ್ಪತ್ರೆಗೆ ಅಲೆಯುವುದು ತಪ್ಪಲಿದೆ. ಪರೀಕ್ಷಾ ವರದಿಯೂ ಶೀಘ್ರ ಲಭಿಸಲಿದೆ. ಈ ಪ್ರಯೋಗಾಲಯಕ್ಕೆ ಸಂಬಂಧಪಟ್ಟ ಉಪಕರಣ, ಸಿಬಂದಿ ವರ್ಗ, ಪರಿಣತರ ನೇಮಕ ನಡೆಯಬೇಕಿದೆ.

ಜಿಲ್ಲಾಸ್ಪತ್ರೆಯ ಮಾದರಿಯಲ್ಲೇ ತಾಲೂಕು ಆಸ್ಪತ್ರೆಗಳಲ್ಲೂ ಪ್ರಯೋ ಗಾಲಯ ಆರಂಭಿಸಲು ನಿರ್ಧರಿಸಲಾಗಿದೆ. ಶೀಘ್ರವೇ ಕೆಲವೆಡೆ ಆರಂಭಗೊಳ್ಳಲಿದೆ. ಇದರಿಂದ ಫಲಿತಾಂಶ ತ್ವರಿತವಾಗಿ ಸಿಗಲಿದ್ದು, ಜನರಿಗೆ ಅನುಕೂಲವಾಗಲಿದೆ.
-ಡಾ| ನವೀನ್‌ ಚಂದ್ರ ಕುಲಾಲ್‌,
ಡಾ| ನಾಗರತ್ನಾ, ರೋಗವಾಹಕ ಆಶ್ರಿತ ರೋಗ ಗಳ ನಿಯಂತ್ರಣಾಧಿಕಾರಿಗಳು, ದ.ಕ., ಉಡುಪಿ ಜಿಲ್ಲೆ

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next