Advertisement

707 ಜನರ ಲ್ಯಾಬ್‌ ವರದಿ ಬಾಕಿ

06:36 AM May 31, 2020 | Suhan S |

ಗದಗ: ಕೋವಿಡ್ 19 ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ್ದ ಮಾದರಿಗಳಲ್ಲಿ 707 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಕೋವಿಡ್ ಪರೀಕ್ಷೆಗಾಗಿ ಹೊಸದಾಗಿ 55 ಸೇರಿ ಒಟ್ಟು 6356 ಮಾದರಿಗಳ ಪೈಕಿ 5523 ಜನರ ವರದಿಗಳು ನಕಾರಾತ್ಮಕವಾಗಿವೆ. ಮಾದರಿಗಳು ಸರಿ ಇಲ್ಲದ ಕಾರಣ 91 ಮಾದರಿಗಳನ್ನು ತಿರಸ್ಕರಿಸಲಾಗಿದೆ.

Advertisement

ಕೋವಿಡ್ ಸೋಂಕಿನ ಲಕ್ಷಣಗಳು ಹಾಗೂ ವಲಸಿಗರು ಸೇರಿದಂತೆ ಒಟ್ಟು 6109 ಜನರನ್ನು ಕೋವಿಡ್‌-19 ನಿಗಾಕ್ಕೆ ಒಳಪಡಿಸಲಾಗಿದೆ. 1486 ಜನರು 28 ದಿನಗಳ ನಿಗಾ ಅವ  ಪೂರೈಸಿದ್ದಾರೆ. ಇನ್ನುಳಿದಂತೆ 4576 ಜನರು ಮನೆಯಲ್ಲಿ ಮತ್ತು 46 ಜನರು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next