Advertisement

ಪರಮಾಪ್ತ ಶಿಷ್ಯೆಯನ್ನು ನೆನೆದು ಭಾವುಕರಾದ ಅಡ್ವಾಣಿ

09:24 AM Aug 08, 2019 | Hari Prasad |

ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕಿ, ಸಜ್ಜನ ರಾಜಕಾರಣಿ ಸುಷ್ಮಾ ಸ್ವರಾಜ್ ನಿಧನಕ್ಕೆ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ತಾವು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಅವರು ತೋರಿದ ಕಾರ್ಯ ಬದ್ಧತೆಯನ್ನು ನೆನೆದು ಅಡ್ವಾಣಿ ಕಣ್ಣೀರು ಹಾಕಿದ್ದಾರೆ. ಸುಷ್ಮಾ ಅವರ ಆಡಳಿತ ಶೈಲಿ ಮತ್ತು ಕೆಲಸದಲ್ಲಿನ ಬಧ್ಧತೆಯನ್ನು ಬಿಜೆಪಿಯ ಭೀಷ್ಮ ಅಡ್ವಾಣಿ ಅವರು ಕೊಂಡಾಡಿದ್ದಾರೆ.

ಅಡ್ವಾಣಿ ಅವರೊಂದಿಗೆ ದೀರ್ಘ ಸಮಯ ಪಕ್ಷ ಸಂಘಟನೆಯಲ್ಲಿ ಸುಷ್ಮಾ ಭಾಗಿಯಾಗಿದ್ದರು. ತಮ್ಮ ರಾಜಕೀಯ ಗುರುವಿನ ಸ್ಥಾನವನ್ನು ಅಡ್ವಾಣಿ ಅವರಿಗೆ ಸುಷ್ಮಾ ನೀಡಿದ್ದರು. ಈ ಸಲುವಾಗಿ ಪ್ರತಿ ವರ್ಷ ಅಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಸುಷ್ಮಾ ಅವರು ಚಾಕಲೇಟ್ ಕೇಕ್ ಜತೆ ಆಗಮಿಸಿಸುತ್ತಿದ್ದರು. ಅಡ್ವಾಣಿ ಅವರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಅಚ್ಚುಮೆಚ್ಚು.

ಸುಷ್ಮಾ ಸ್ವರಾಜ್ ಅವರು ಅಡ್ವಾಣಿಯವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದವರಲ್ಲಿ ಒಬ್ಬರಾಗಿದ್ದರು. ಹಿಂದಿನ ಸರಕಾರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ದಿನಗಳನ್ನು ಅಡ್ವಾಣಿ ಅವರು ನೆನಪಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಅಡ್ವಾಣಿ ಅವರು ದೇಶಾದ್ಯಂತ ರಥಯಾತ್ರೆಯ ಮೂಲಕ ಪಕ್ಷ ಸಂಘಟಿಸಿದ್ದರು. ಅವರ ಜತೆ ಸುಷ್ಮಾ ಸ್ವರಾಜ್ ಅವರೂ ಕೈಜೋಡಿಸಿದ್ದರು. 80 ದಶಕದಲ್ಲಿ ಪಕ್ಷ ಸೇರಿದ್ದ ಸುಷ್ಮಾ ಅವರು ಯುವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಸುಷ್ಮಾ ಸ್ವರಾಜ್ ಅವರನ್ನು ಅಡ್ವಾಣಿಯವರ ಬಣ ಎಂದೇ ಕರೆಯಲಾಗುತ್ತಿತ್ತು.

Advertisement

ತಮ್ಮ ಕಾರ್ಯಶೈಲಿಯಿಂದಲೇ ಪಕ್ಷದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು. ತಮ್ಮ 25ನೇ ವಯಸ್ಸಿಗೆ ಹರಿಯಾಣ ಸರಕಾರದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅಟಲ್ ಮತ್ತು ಮೋದಿ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಯುಪಿಎ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರು ಸದನದಲ್ಲಿ ಹಲವು ಮಹತ್ವದ ಚರ್ಚೆಗಳಲ್ಲಿ ಪಾಲ್ಗೊಂಡು ಪರಿಣಾಮಕಾರಿ ವಿರೋಧ ಪಕ್ಷವಾಗಿ ಎನ್.ಡಿ.ಎ. ಗುರುತಿಸಿಕೊಳ್ಳುವಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next