Advertisement
ಕಿರ್ಗಿಯೋಸ್-ಕಶನೋವ್ ನಡುವಿನ ಕಾದಾಟ 5 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟಿತು. ಇದೇನೂ ವಿಶೇಷವಲ್ಲ. ಆದರೆ ಐದರಲ್ಲಿ 4 ಸೆಟ್ ಟೈ-ಬ್ರೇಕರ್‌ಗೆ ವಿಸ್ತರಿಸಿ ಟೆನಿಸ್ ಅಭಿಮಾ ನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತು. ಅದರಲ್ಲೂ ಆಸ್ಟ್ರೇಲಿಯದ ಆಟಗಾರನೇ ಕಣದಲ್ಲಿದ್ದ ಕಾರಣ ಪಂದ್ಯದ ಕುತೂಹಲ ಮುಗಿಲು ಮುಟ್ಟಿತ್ತು. ಕೊನೆಗೂ ಕಿರ್ಗಿಯೋಸ್ 6-2, 7-6 (7-5), 6-7 (6-8), 6-7 (7-9), 7-6 (10-8) ಅಂತರದಿಂದ ಗೆದ್ದು ಬಂದರು.
ಇನ್ನೊಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ ಸ್ಟಾನಿಸ್ಲಾಸ್ ವಾವ್ರಿಂಕ-ಡ್ಯಾನಿಲ್ ಮೆಡ್ವಡೇವ್ ನಡುವೆ ನಡೆಯಲಿದೆ. ಎದುರಾಳಿ ಜಾನ್ ಇಸ್ನರ್ ದ್ವಿತೀಯ ಸೆಟ್ ವೇಳೆ ಗಾಯಾಳಾಗಿ ಹಿಂದೆ ಸರಿದ ಕಾರಣ 2014ರ ಚಾಂಪಿಯನ್ ವಾವ್ರಿಂಕ ಸುಲಭದಲ್ಲಿ ಮುನ್ನಡೆದರು. ಆಗ ವಾವ್ರಿಂಕ 6-4, 4-1 ಅಂತರದ ಮುನ್ನಡೆಯಲ್ಲಿದ್ದರು.
Related Articles
Advertisement
ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ 6-2, 6-2, 6-4ರಿಂದ ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಅವರನ್ನು ಕೆಡವಿದರು. ಜ್ವೆರೇವ್ ಅವರಿನ್ನು ರಶ್ಯದ ಆ್ಯಂಡ್ರೆ ರುಬ್ಲೇವ್ ವಿರುದ್ಧ ಸೆಣಸಲಿದ್ದಾರೆ. ರುಬ್ಲೇವ್ 2-6, 7-6 (7-3), 6-4, 7-6 (7-4)ರಿಂದ ಬೆಲ್ಜಿಯಂನ ಡೇವಿಡ್ ಗೊಫಿನ್ ಆಟಕ್ಕೆ ತೆರೆ ಎಳೆದರು.
ಸಿಮೋನಾ ಹಾಲೆಪ್, ಮುಗುರುಜಾ ಮುನ್ನಡೆಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್‌ನಲ್ಲಿ ಸಿಮೋನಾ ಹಾಲೆಪ್, ಗಾರ್ಬಿನ್ ಮುಗುರುಜಾ ಪ್ರಿ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. ಶನಿವಾರದ ಪಂದ್ಯದಲ್ಲಿ ಸಿಮೋನಾ ಹಾಲೆಪ್ 6-1, 6-4 ಅಂತರದಿಂದ ಕಜಕಿಸ್ಥಾನದ ಯುಲಿಯಾ ಪುಟಿನ್ಸೇವಾ ಅವರನ್ನು ಮಣಿಸಿದರು. ಇವರ ಮುಂದಿನ ಎದುರಾಳಿ ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್. ಅವರು ಅಮೆರಿಕದ ಕಿಕಿ ಬೆಲ್ಲಿಸ್ ವಿರುದ್ಧ 6-1, 6-7 (5-7), 6-0 ಅಂತರದ ಗೆಲುವು ಸಾಧಿಸಿದರು. ಸ್ಪೇನಿನ ಗಾರ್ಬಿನ್ ಮುಗುರುಜಾ 6-1, 6-2 ಅಂತರದಿಂದ ಎಲಿನಾ ಸ್ವಿಟೋಲಿನಾ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಟಾಪ್-10ರ ಯಾದಿಯ 6ನೇ ಆಟಗಾರ್ತಿ ಕೂಟದಿಂದ ಹೊರಬಿದ್ದಂತಾಯಿತು. ಎಸ್ತೋನಿಯಾದ ಅನೆಟ್ ಕೊಂಟವೀಟ್ ಸ್ವಿಜರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್ ಅವರೆದುರು 6-0, 6-1 ಅಂತರದ ಸುಲಭ ಜಯ ಸಾಧಿಸಿದರು. ಇವರ ಎದುರಾಳಿ ಪೋಲೆಂಡಿನ ಐಗಾ ಸ್ವಿಟೆಕ್. ಅವರು ಕ್ರೊವೇಶಿಯಾದ ಡೋನಾ ವೆಕಿಕ್‌ಗೆ 7-5, 6-3ರಿಂದ ಆಘಾತವಿಕ್ಕಿದರು. ಬೋಪಣ್ಣ ಜೋಡಿ ಮುನ್ನಡೆ
ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ-ಉಕ್ರೇನಿನ ನಾದಿಯಾ ಕಿಶೆನೋಕ್ ದ್ವಿತೀಯ ಸುತ್ತು ತಲುಪಿದ್ದಾರೆ. ಅವರು ಉಕ್ರೇನಿ ಲುಡ್ಮಿಲಾ ಕಿಶೆನೋಕ್-ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ವಿರುದ್ಧ 7-5, 4-6, 10-6 ಅಂತರದ ಕಠಿನ ಗೆಲುವು ಒಲಿಸಿಕೊಂಡರು.