Advertisement
ನ್ಯಾಯಬೆಲೆ ಅಂಗಡಿಗಳಲ್ಲಿ ಕಳೆದ ಮೂರು ದಿನದಿಂದ ಸರ್ವರ್ ಪದೇ ಪದೇ ಸಂಪರ್ಕವನ್ನು ಕಡಿದುಕೊಳ್ಳುತ್ತಿದ್ದು, ಇದರಿಂದಾಗಿ ಸಿಬಂದಿ ಗಂಟೆಗೆ ಮೂರು ಜನರಿಗೆ ಪಡಿತರ ವಿತರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಪದ್ಧತಿ ಅಳವಡಿಸಿ ವರ್ಷ ಕಳೆದಿದೆ. ಅಂದಿನಿಂದ ಇಂದಿನ ವರೆಗೆ ಪಡಿತರ ವಿತರಣೆಯಲ್ಲಿ ಒಂದಲ್ಲ ಒಂದು ಸಮಸ್ಯೆಯಾಗುತ್ತಲೇ ಇದೆ. ಕಳೆದ ಹಲವು ತಿಂಗಳಿನಿಂದ ಕಾಡುತ್ತಿರುವ ಸರ್ವರ್ ಸಮಸ್ಯೆಗೆ ಇನ್ನೂ ಮುಕ್ತಿ ದೊರಕಿಲ್ಲ. ಇದೀಗ ಪಡಿತರ ಸಾಮಗ್ರಿ ವಿತರಣೆಯಾಗುವ ವೆಬ್‌ಸೈಟ್‌ನಲ್ಲಿ ಕೆವೈಸಿ ತಂತ್ರಾಂಶ ಅಳವಡಿಸಿದ ಬಳಿಕ ಸರ್ವರ್ ಪದೇ ಪದೇ ತನ್ನ ಸಂಪರ್ಕ ಕಳೆದುಕೊಳ್ಳುತ್ತಿದೆ. ವಿವಿಧ ಭಾಗದಲ್ಲಿ ಕೆವೈಸಿ ದೃಢೀಕರಣವಾಗುತ್ತಿರುವುದರಿಂದ ಪಡಿತರ ವಿತರಣೆ ಸಮಸ್ಯೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಡಕತ್ತರಿಯಲ್ಲಿ ಸಿಬಂದಿ
ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ದೃಢೀಕರಣ ಪ್ರಾರಂಭವಾಗಿಲ್ಲ. ಕೆವೈಸಿ ದೃಢೀಕರಣ ಪಡಿತರ ಅಂಗಡಿಗಳು ಮಾಡಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ನೆಟವರ್ಕ್ ಸಮಸ್ಯೆಯಿಂದ ಕೆವೈಸಿ ದೃಢೀಕರಣ ತಡವಾದರೂ ಸಿಬಂದಿಗಳು ಸಾರ್ವಜನಿಕರಿಂದ ಬೈಗುಳ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
ಆಹಾರ ಇಲಾಖೆಯ ನೂತನ ನಿರ್ದೇಶನದಂತೆ ಪಡಿತರ ಚೀಟಿಯ ಇ -ಕೆವೈಸಿ ದೃಢೀಕರಣ ಮತ್ತೆ ಪ್ರಾರಂಭಿಸಿದೆ. ಹಿಂದೆ ಜೂನ್‌ನಲ್ಲಿ ಕೆವೈಸಿ ಧೃಡೀಕರಣಕ್ಕೆ ಆದೇಶ ನೀಡಿದರೂ ವಿವಿಧ ಕಾರಣದಿಂದ ನೋಂದಾವಣಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರು ನವೆಂಬರ್ ತಿಂಗಳಿನ ಒಳಗೆ ನೋಂದಾಯಿಸಲು ಗಡುವು ನೀಡಿದೆ. ಈ ಬಾರಿ ಕೆವೈಸಿ ದೃಢೀಕರಣ ಮಾಡದಿರುವವರ ಪಡಿತರ ಸಾಮಗ್ರಿ ತಡೆಹಿಡಿಯಲಾಗುತ್ತದೆ.
Advertisement
ಸರ್ವರ್ ಸಮಸ್ಯೆಯಿಲ್ಲ!ಸರ್ವರ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಪಡಿತರ ವಿತರಣೆ ವೆಬ್‌ಸೈಟ್‌ನಲ್ಲಿ ಅನುಸರಿಸ ಬೇಕಾದ ನಿಯಮಗಳ ಸಿಬಂದಿಗೆ ಸ್ಪಷ್ಟವಾಗಿ ಮಾಹಿತಿ ನೀಡಲಾಗಿದೆ. ಅವುಗಳನ್ನು ಅನುಸರಿ ಸಿದರೆ ಸರ್ವರ್ ಸಮಸ್ಯೆ ಎದುರಾಗುವುದಿಲ್ಲ.
-ಸುನಂದಾ, ಸಹಾಯಕ ನಿರ್ದೇಶಕಿ ಆಹಾರ, ನಾಗರಿಕ ಪೂರೈಕೆ ಇಲಾಖೆ. ದ.ಕ. ಕೆವೈಸಿ ದೃಢೀಕರಣ: ಸಮಸ್ಯೆಗಳಿಗೆ ಕಾರಣ
ಕೆವೈಸಿ ದೃಢೀಕರಣ ಹಾಗೂ ಪಡಿತರ ವಿತರಣೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು Any desk ಮೂಲಕ ಸರಿಪಡಿಸಲಾಗುತ್ತಿದೆ.
-ಕಿರಣ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿಬಂದಿ ತೃಪ್ತಿ ಕುಮ್ರಗೋಡು