Advertisement
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ವ್ಯಾಪ್ತಿಯ ಕಮನೀಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಶ್ರೀಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ರಾಸುಗಳ ಚರ್ಮ ಗಂಟು ರೋಗ ಅಡ್ಡಿಯಾಗಿ ದನಗಳ ಜಾತ್ರೆಗೆ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿವಿಧ ಮೂಲೆಗಳಿಂದ ರೈತರು ಹಾಗೂ ವ್ಯಾಪಾರಿಗಳು ದನ ಜಾತ್ರೆಗೆ ಬರಲು ನಿಖರ ಮಾಹಿತಿ ಸಿಗದೇ ಪರಿತಪಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಇದೇ ತಿಂಗಳ 28ಕ್ಕೆ ಬ್ರಹ್ಮರಥೋತ್ಸವ:ಸುಪ್ರಸಿದ್ಧ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ದನಗಳ ಜಾತ್ರೆ ಯಾವುದೇ ಅಡಚಣೆಯಾದ್ರು ಬ್ರಹ್ಮರಥೋತ್ಸವ ಮಾತ್ರ ಇದೇ ತಿಂಗಳ 28ರ ಶನಿವಾರ ಮಾಮೂಲಿಯಂತೆ ಪ್ರತಿವರ್ಷ ಪೂಜಾ ವಿಧಾನಗಳ ರೀತಿಯಲ್ಲಿಯೇ ಬಹಳ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ, ಅನ್ನ ಸಂತರ್ಪಣೆ, ದಾಸೋಹ ವ್ಯವಸ್ಥೆಯನ್ನು ನೆಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ. ದನಗಳ ಜಾತ್ರೆ ಕಲೆತಿದ್ದರೆ ರೈತರುಗಳಿಗೆ ತುಂಬಾ ಅನುಕೂಲವಾಗುತಿತ್ತು, ಸಾವಿರಾರು ರೂಪಾಯಿಗಳ ಎತ್ತುಗಳನ್ನು ಕಟ್ಟಿಕೊಂಡಿದ್ದೇವೆ ಮಾರಾಟ ಮಾಡಬೇಕು ತುಂಬಾ ತೊಂದರೆಯಾಗಿದೆ, ಮಕರ ಸಂಕ್ರಾಂತಿ ನಂತರ ರೈತರುಗಳು ಜಾತ್ರೆಗೆ ಬರುತ್ತಾರೆ ಅಂತ ನಾವು ಬಂದಿದ್ದೇವೆ, ಆದರೆ ಇಲ್ಲಿ ಇನ್ನೂ ಸೇರೋದಿಲ್ಲ, ದನದ ಜಾತ್ರೆ ಸೇರೋದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಆದರೆ ರೈತರ ಹಿತದೃಷ್ಟಿಯಿಂದ ದನದ ಜಾತ್ರೆ ನಡೆಯಬೇಕು
– ರಾಮಯ್ಯ ರೈತ, ಕಾಶಾಪುರ ಕೊರಟಗೆರೆ ತಾಲ್ಲೂಕಿನ ಕಮನಿಯ ಕ್ಷೇತ್ರವಾದ
ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಐತಿಹಾಸಿಕವಾಗಿ ನಡೆಯಬೇಕಿದ್ದು, ಮೂರು ವರ್ಷಗಳಿಂದ ಕೊರೋನಾದಿಂದ ಸ್ಥಗಿತಗೊಂಡಿದ್ದ ದನಗಳ ಜಾತ್ರಾ ಮಹೋತ್ಸವ ಈಗ ಚರ್ಮ ರೋಗ ಭಾದೆಯಿಂದ ಮತ್ತೊಮ್ಮೆ ದನಗಳ ಜಾತ್ರೆಗೆ ಅಡಚಣೆಯಾಗುತ್ತಿದ್ದು, ಯಾವುದೇ ಕಾರಣಕ್ಕೂ ಜಾತ್ರೆ ನಿಲ್ಲದಂತೆ ಯಾವುದೇ ರೈತರಿಗೆ ಅನಾನುಕೂಲವಾಗದಂತೆ ನಡೆಯುವಂತಾಗಬೇಕು.
– ನಂಜುಂಡಯ್ಯ. ಸ್ಥಳೀಯ ಮುಖಂಡ. ಕಳೆದ ಮೂರು ವರ್ಷಗಳಿಂದಲೂ ಕ್ಯಾಮೇನಹಲ್ಲಿ ಜಾತ್ರೆ ಮುಂದೊಡಲ್ಪಡುತ್ತಿದೆ. ವಿದುರಾಶ್ವತ ಜಾತ್ರೆಯಲ್ಲಿ ದನಗಳ ಜಾತ್ರೆ ನಡೆಯುತ್ತಿದೆ ಕೊರಟಗೆರೆಯಲ್ಲಿ ಯಾಕೆ ನಡೆಯುತ್ತಿಲ್ಲ ಇಲ್ಲೂ ನಡೆಯಬೇಕು, 50-60 ವರ್ಷಗಳಿಂದ ಎಂದೂ ದನಗಳ ಜಾತ್ರೆ ನಿಂತಿಲ್ಲ, ಈ ಬಾರಿಯೂ ದನಗಳ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಂಬಂಧ ಪಟ್ಟಂತವರು ನಿರ್ವಹಣೆ ಮಾಡಬೇಕು.
– ಶೇಖರಪ್ಪ, ಪುರಿ ಹಾಗೂ ಸ್ವೀಟ್ಸ್ ವ್ಯಾಪಾರಸ್ಥ