Advertisement

ಕ್ಯಾ “ಬಾತ್‌’ಹೈ

06:00 AM Aug 01, 2018 | |

ಕುಟುಂಬದಲ್ಲಿ ಆಗಷ್ಟೇ ಹೊಸ ಸದಸ್ಯನ ಆಗಮನವಾಗಿದೆ. ಹೊಸದಾಗಿ ಅಪ್ಪ- ಅಮ್ಮನಾದ ಖುಷಿ ಒಂದೆಡೆಯಾದರೆ, ಆ ಮಗುವಿನ ಲಾಲನೆ- ಪಾಲನೆಯ ಜವಾಬ್ದಾರಿ ಮತ್ತೂಂದೆಡೆ. ಅದರಲ್ಲೂ ನವಜಾತ ಶಿಶುಗಳಿಗೆ ಸ್ನಾನ ಮಾಡಿಸುವುದು ಬಹಳ ಶ್ರದ್ಧೆ, ಜಾಗರೂಕತೆಯನ್ನು ಬೇಡುತ್ತದೆ. ಮೈ ಬೆಚ್ಚಗಿಡುವಷ್ಟು ನೀರು, ಕಣ್ಣುರಿಯದಂಥ ಸೋಪು, ಮೆತ್ತಗಿನ ಟವೆಲ್‌… ಮಗುವಿನ ಸ್ನಾನಕ್ಕೆ ಏನೆಲ್ಲಾ ಬೇಕು ಗೊತ್ತಾ? 

Advertisement

1. ಸ್ಪಾಂಜ್‌ನೊಂದಿಗೆ ಶುರು ಮಾಡಿ…
ಮೊದಲ ಒಂದೆರಡು ವಾರ, ಮಗುವಿಗೆ ಸ್ಪಾಂಜ್‌ ಬಾತ್‌ ಕೊಡುವುದು ಉತ್ತಮ.  ಸ್ಪಾಂಜ್‌ ಅನ್ನು ಉಗುರು ಬೆಚ್ಚಗಿನ ನೀರಿನನಲ್ಲಿ ಅದ್ದಿ, ನಿಧಾನಕ್ಕೆ ಮಗುವಿನ ಮುಖ, ಕಿವಿ, ಎದೆ, ಹೊಟ್ಟೆಯ ಭಾಗವನ್ನು ಶುಚಿಗೊಳಿಸುತ್ತಾ ಬನ್ನಿ. ಡೈಪರ್‌ನ ಭಾಗವನ್ನು ಸರಿಯಾಗಿ ತೊಳೆಯಿರಿ. ಒಂದೆರಡು ವಾರಗಳ ನಂತರ ಬೇಬಿ ಸೋಪ್‌ನಿಂದ ಸ್ನಾನ ಮಾಡಿಸಬಹುದು.  

2. ಸೋಪ್‌ ಬಳಸುವಾಗ ಎಚ್ಚರ
ಮಗುವಿನ ಮೈ, ತುಂಬಾ ಗಲೀಜಾಗಿದ್ದರೆ ಮಾತ್ರ ಬೇಬಿ ಸೋಪ್‌ ಬಳಸಿ. ಇಲ್ಲದಿದ್ದರೆ ಬೆಚ್ಚಗಿನ ನೀರಿನಲ್ಲಿ ಮೈ ತೊಳೆದರೆ ಸಾಕು. ಸೋಪು ಬಳಸುವಿರಾದರೆ, ಮೃದುವಾಗಿ ಉಜ್ಜಿ ನೊರೆ ಉಳಿಯದಂತೆ ಶುಚಿಗೊಳಿಸಿ. ಸ್ವಲ್ಪ ಉದ್ದ ಕೂದಲಿದ್ದರೆ, ಬೇಬಿ ಶ್ಯಾಂಪೂ ಬಳಸಬಹುದು. ಅತಿಯಾಗಿ ಸೋಪು, ಶ್ಯಾಂಪೂ ಬಳಸುವುದು ಮಗುವಿನ ಸೂಕ್ಷ್ಮಚರ್ಮಕ್ಕೆ ಹಾನಿಕರ. 

3. ನೀರು ಎಷ್ಟು ಬಿಸಿಯಿದೆ?
ಸ್ನಾನ ಮಾಡಿಸುವ ಮುನ್ನ, ನೀರು ಎಷ್ಟು ಬಿಸಿ ಇದೆ ಅಂತ ನೋಡಿಕೊಳ್ಳಿ. ತುಂಬಾ ತಣ್ಣನೆಯ, ತುಂಬಾ ಬೆಚ್ಚಗಿನ ನೀರು ಮಗುವಿನ ಚರ್ಮಕ್ಕೆ ಅಪಾಯಕಾರಿ. 37 ರಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಬೆಚ್ಚಗಿನ ನೀರನ್ನು ಬಳಸಿ ಎನ್ನುತ್ತಾರೆ ಮಕ್ಕಳ ತಜ್ಞರು. 

4.  ಎಲ್ಲವೂ ಕೈಗೆ ಸಿಗುವಂತಿರಲಿ
ಮಗುವಿಗೆ ಸ್ನಾನ ಮಾಡಿಸುವಾಗ ತುಂಬಾ ಎಚ್ಚರಿಕೆ, ಜಾಗ್ರತೆ ಬೇಕು. ನೀರು, ಬೇಬಿ ಸೋಪು, ಟವೆಲ್‌, ಟಬ್‌, ಮಗುವಿನ ಆಟಿಕೆ… ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡೇ ಮಗುವನ್ನು ಸ್ನಾನಕ್ಕೆ ಕರೆದೊಯ್ಯಿರಿ. ಗಡಿಬಿಡಿ ಮಾಡಿಕೊಳ್ಳದೆ, ಮಗುವಿನ ಸ್ನಾನವನ್ನು ಎಂಜಾಯ್‌ ಮಾಡಿ. 

Advertisement

5. ಮೃದುವಾಗಿ ಒರೆಸಿ
ಸ್ನಾನ ಮುಗಿದ ನಂತರ, ಮೆತ್ತನೆಯ ಟವೆಲ್‌ನಿಂದ ಮಗುವನ್ನು ಒರೆಸಿ. ಟವೆಲ್‌ ಅನ್ನು ದಿನವೂ ಒಗೆದು ಶುಚಿಗೊಳಿಸದಿದ್ದರೆ ಚರ್ಮದ ಅಲರ್ಜಿ ಆಗುವ ಅಪಾಯವಿರುತ್ತದೆ. ನಂತರ, ಬೇಬಿ ಲೋಷನ್‌ ಹಚ್ಚಿ ಕೂಸಿನ ಚರ್ಮವನ್ನು ರಕ್ಷಿಸಿ.

Advertisement

Udayavani is now on Telegram. Click here to join our channel and stay updated with the latest news.

Next