Advertisement

ಕನ್ನಡಿಗರ ಆಟಕ್ಕೆ ಪಂಜಾಬ್‌ ಕಿಂಗ್‌

06:15 AM Apr 09, 2018 | Team Udayavani |

ಮೊಹಾಲಿ: ಕನ್ನಡಿಗರಾದ ಕೆ.ಎಲ್‌.ರಾಹುಲ್‌(51 ರನ್‌) ಹಾಗೂ ಕರುಣ್‌ ನಾಯರ್‌ (50ರನ್‌) ಬಿರುಗಾಳಿ ಅಬ್ಬರದ ಅರ್ಧಶತಕ ನೆರವಿನಿಂದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಗೌತಮ್‌ ಗಂಭೀರ್‌ ನೇತೃತ್ವದ ಡೆಲ್ಲಿ ಡೇರ್‌ ಡೆವಿಲ್ಸ್‌ ವಿರುದ್ಧ 6 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಡೇರ್‌ ಡೆವಿಲ್ಸ್‌ ಗೌತಮ್‌ ಗಂಭೀರ್‌ (55 ರನ್‌) ಅರ್ಧಶತಕ ನೆರವಿನಿಂದ 20 ಓವರ್‌ಗೆ 7 ವಿಕೆಟ್‌ಗೆ 166 ರನ್‌ಗಳಿಸಿತು. ಈ ಗುರಿ ಬೆನ್ನಟ್ಟಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಆರಂಭದಲ್ಲೇ ಅಬ್ಬರಿಸಿತು. ಕನ್ನಡಿಗ ಜತೆ ಇನಿಂಗ್ಸ್‌ ಆರಂಭಿಸಿದ ಕರುನಾಡ ವೀರ ಕೆ.ಎಲ್‌.ರಾಹುಲ್‌ (51 ರನ್‌) ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಆದರೆ ಈ ಹಂತದಲ್ಲಿ ಮಾಯಾಂಕ್‌ ಅಗರ್ವಾಲ್‌ (7ರನ್‌) ಔಟಾದರು. ತಂಡದ ಮೊತ್ತ 64 ರನ್‌ ಆಗಿದ್ದಾಗ ರಾಹುಲ್‌ ವಿಕೆಟ್‌ ಕಳೆದುಕೊಂಡರು.ಇವರ ಬೆನ್ನಲ್ಲೇ ಯುವರಾಜ್‌ ಸಿಂಗ್‌ (12ರನ್‌) ಕೂಡ ಪೆವಿಲಿಯನ್‌ಗೆ ನಡೆದರು. ಆಗ 97 ರನ್‌ ಆಗಿತ್ತು. ಪಂಜಾಬ್‌ ಆತಂಕ ಮನೆ ಮಾಡಿತ್ತು.

ಆದರೆ ಡೇವಿಡ್‌ ಮಿಲ್ಲರ್‌ (ಅಜೇಯ 24 ರನ್‌) ಹಾಗೂ ಸ್ಟೋಯಿನಿಸ್‌ (ಅಜೇಯ 22 ರನ್‌) ತಂಡವನ್ನು 18.5 ಓವರ್‌ನಲ್ಲಿ 167 ರನ್‌ ಗಳಿಸುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್‌ : ಡೆಲ್ಲಿ ಡೇರ್‌ಡೆವಿಲ್ಸ್‌ 20 ಓವರ್‌ಗೆ 166/7 (ಗೌತಮ್‌ ಗಂಭೀರ್‌ ರನೌಟ್‌ 55, ಕ್ರಿಸ್‌ ಮಾರಿಸ್‌ ಔಟಾಗದೆ 27 ಮುಜೀಬ್‌ ಉರ್‌ 28ಕ್ಕೆ 2) ಕಿಂಗ್ಸ್‌ ಇಲೆ ವೆನ್‌ ಪಂಜಾಬ್‌ 18.5 ಓವರ್‌ಗೆ 167/4 ( ಕೆ.ಎಲ್‌.ರಾಹುಲ್‌ 51, ಕರುಣ್‌ ನಾಯರ್‌ 50,ರಾಹುಲ್‌ ಟೆವಾಟಿಯ 24ಕ್ಕೆ 1)

ಪಂದ್ಯಶ್ರೇಷ್ಠ: ಕೆ.ಎಲ್‌. ರಾಹುಲ್‌

Advertisement

ಕೆ.ಎಲ್‌.ರಾಹುಲ್‌ ಐಪಿಎಲ್‌ ದಾಖಲೆ
ಪಂಜಾಬ್‌ ತಂಡದ ಕೆ.ಎಲ್‌.ರಾಹುಲ್‌ 14 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಇದರೊಂದಿಗೆ ಯೂಸುಫ್ ಪಠಾಣ್‌ ಹೆಸರಲ್ಲಿ ದ್ದ ದಾಖಲೆಯನ್ನು ಅಳಿಸಿ ಹಾಕಿದರು. ಕೆಕೆಆರ್‌ನಲ್ಲಿದ್ದ ಯೂಸುಫ್ 2014ರಲ್ಲಿ ಹೈದರಾಬಾದ್‌ ವಿರುದಟಛಿ 15 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು. ಆರ್‌ಸಿಬಿ ವಿರುದ್ಧ 2017ರಲ್ಲಿ 15 ಎಸೆತದಲ್ಲಿ ಕೆಕೆಆರ್‌ನ ಸುನಿಲ್‌ ನಾರಾಯಣ್‌ ಅರ್ಧಶತಕ ಸಿಡಿಸಿದ್ದನ್ನು ಸ್ಮರಿಸಬಹುದು. ಉಳಿದಂತೆ 2014ರಲ್ಲಿ ಪಂಜಾಬ್‌ ವಿರುದ್ಧ ಸಿಎಸ್‌ಕೆ ಸುರೇಶ್‌ ರೈನಾ (16 ಎಸೆತ), ಡೆಲ್ಲಿ ವಿರುದಟಛಿ 2007ರಲ್ಲಿ ಡೆಕ್ಕನ್‌ ಚಾರ್ಜರ್ನ ಗಿಲ್‌ಕ್ರಿಸ್ಟ್‌ 17 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next