Advertisement

ಕುವೈಟ್‌ ಸಂತ್ರಸ್ತರು: ಮಂಗಳೂರಿನ ಓರ್ವ ಇಂದು ಆಗಮಿಸುವ ನಿರೀಕ್ಷೆ

01:20 PM Jul 18, 2019 | keerthan |

ಮಂಗಳೂರು: ಕುವೈಟ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿ ರುವ ಭಾರತೀಯ ಸಂತ್ರಸ್ತ ಕಾರ್ಮಿಕರ ಪೈಕಿ ಇಬ್ಬರು ಶನಿವಾರ ತಾಯ್ನಾಡಿಗೆ ಮರಳಿದ್ದು, ಇನ್ನುಳಿದವರಲ್ಲಿ 15 ಜನರ ತಂಡ ಸೋಮವಾರ ಕುವೈಟ್‌ನಿಂದ ಹೊರಡಲಿದೆ.

Advertisement

ಪ್ರಥಮ ಹಂತದಲ್ಲಿ ಮಂಜೇಶ್ವರದ ಅಭಿಷೇಕ್‌ ಮತ್ತು ಉತ್ತರ ಪ್ರದೇಶದ ಪಂಕಜ್‌ ಸ್ವದೇಶಕ್ಕೆ ಹೊರಟಿದ್ದಾರೆ.

ಅಭಿಷೇಕ್‌ ರವಿವಾರ ಮುಂಬಯಿ ತಲುಪಿದ್ದು, ಅಲ್ಲಿಂದ ಬಸ್‌ ಮೂಲಕ ಮಂಗಳೂರು ಕಡೆಗೆ ಪ್ರಯಾಣಿಸಿದ್ದಾರೆ. ಸೋಮವಾರ ಅವರು ಮಂಗಳೂರಿಗೆ ತಲುಪಲಿದ್ದಾರೆ.

ಅಭಿಷೇಕ್‌ ಮತ್ತು ಪಂಕಜ್‌ ಕುಮಾರ್‌ ಅವರಿಗೆ ಶುಕ್ರವಾರ ಪಾಸ್‌ಪೋರ್ಟ್‌ ಹಸ್ತಾಂತರಿಸಲಾಗಿತ್ತು. ಕುವೈಟ್‌ನಲ್ಲಿ ನೆಲೆಸಿರುವ ಮೋಹನ್‌ದಾಸ್‌ ಕಾಮತ್‌ ಮತ್ತು ಳಂಗೋವನ್‌ ವಿಮಾನ ಟಿಕೆಟ್‌ ಪ್ರಾಯೋಜಿಸಿದ್ದರು.

ಅಭಿಷೇಕ್‌ ಮತ್ತು ಪಂಕಜ್‌ ಕುಮಾರ್‌ ಅವರನ್ನು ಮೋಹನ್‌ದಾಸ್‌ ಕಾಮತ್‌, ರಾಜ್‌ ಭಂಡಾರಿ, ಅಲ್ವಿನ್‌ ಡಿ’ಸೋಜಾ, ಅಮಿತಾಶ್‌ ಪ್ರಭು ಮತ್ತಿತರರು ಶನಿವಾರ ರಾತ್ರಿ ಕುವೈಟ್‌ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಬೀಳ್ಕೊಟ್ಟಿದ್ದರು.

Advertisement

ಕುವೈಟ್‌ ವಿಮಾನ ನಿಲ್ದಾಣದಿಂದ ದೂರವಾಣಿ ಮೂಲಕ “ಉದಯವಾಣಿ’ ಯೊಂದಿಗೆ ಮಾತನಾಡಿದ ಅಭಿಷೇಕ್‌, ಹಲವು ಸಮಸ್ಯೆಗಳಿಗೆ ಸಿಲುಕಿ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದ ನನಗೆ ಭಾರತಕ್ಕೆ ಮರಳಿ ಬರಲು ಅವಕಾಶ ದೊರಕಿರುವುದು ಸಂತಸ ತಂದಿದೆ. ಇದಕ್ಕೆ ಮೋಹನ್‌ದಾಸ್‌ ಕಾಮತ್‌, ರಾಜ್‌ಭಂಡಾರಿ, ಬಿನಫಿಲೀಸ್‌ ಮೊದಲಾದವರು, ಬಂಟರ ಸಂಘ ಕುವೈಟ್‌ ನೆರವು ನೀಡಿದೆ ಎಂದು ಕೃತಜ್ಞತೆ ಸಲ್ಲಿಸಿದ್ದರು.

ಜು.15ರಂದು 15 ಮಂದಿ ಆಂಧ್ರದವರು ಹೊರಡಲಿದ್ದು, ಅವರ ಟಿಕೆಟ್‌ ಅನ್ನು ಅನಿವಾಸಿ ಉದ್ಯಮಿ ಆಂಧ್ರದ ಆಕಾಶ್‌ ಪನ್ವಾರ್‌ ಪ್ರಾಯೋಜಿಸಿದ್ದಾರೆ. ಜು. 17ರಂದು ಮಂಗಳೂರಿನ 19 ಮಂದಿ ಬರಲಿದ್ದು, ಇವರ ಟಿಕೆಟ್‌ನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮತ್ತು ಇತರ ದಾನಿಗಳು ಭರಿಸಲು ಮುಂದಾಗಿದ್ದಾರೆ. ಕುವೈಟ್‌ನಲ್ಲಿ ಅತಂತ್ರರಾದವರಿಗೆ ಕಂಪೆನಿ ನೀಡಿದ ಬಾಡಿಗೆ ಮನೆಯನ್ನೇ ಮುಂದುವರಿಸಲಾಗಿದ್ದು, ಜು. 17ರವರೆಗೆ ಇದರಲ್ಲಿ ತಂಗಲು ಮನೆಯ ಮಾಲಕರು ಒಪ್ಪಿಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next