Advertisement

ಕುವೈಟ್‌- ಮಂಗಳೂರು ವಿಮಾನ ಯಾನ ತಾತ್ಕಾಲಿಕ ರದ್ದು

01:43 AM Mar 08, 2020 | Sriram |

ಮಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುವೈಟ್‌ ಸರಕಾರವು ಭಾರತ ಸಹಿತ 7 ದೇಶಗಳಿಗೆ ವಿಮಾನ ಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಕುವೈಟ್‌ ಮತ್ತು ಮಂಗಳೂರು ನಡುವಣ ವಿಮಾನ ಯಾನವೂ ಸ್ಥಗಿತಗೊಂಡಿದೆ.

Advertisement

ಅದರಂತೆ ಮಾರ್ಚ್‌ 6ರಿಂದ ಒಂದು ವಾರ ಕಾಲ ಕುವೈಟ್‌ನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಕುವೈಟ್‌ಗೆ ವಿಮಾನ ಸಂಚಾರ ಇರುವುದಿಲ್ಲ.

ಮಂಗಳೂರಿನಿಂದ ದುಬಾೖ, ಅಬುಧಾಬಿ, ದೋಹಾ ಮತ್ತು ದಮಾಮ್‌ಗಳಿಗೆ ಎಂದಿನಂತೆ ಸಂಚರಿಸುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಮತ್ತು ದಿಲ್ಲಿ ನಡುವಿನ ವಿಮಾನ ಯಾನ ಕೆಲವು ದಿನಗಳ ಹಿಂದೆಯೇ ಪ್ರಯಾಣಿಕರ ಕೊರತೆಯಿಂದಾಗಿ ರದ್ದುಗೊಂಡಿದೆ.

ವಿದೇಶಿ ಯಾತ್ರಿಕರ ಆಗಮನಕ್ಕೆ ತಡೆ
ಮೂಡುಬಿದಿರೆ: ಸಾವಿರಕಂಬದ ಬಸದಿಗೆ ಬೇಸಗೆಯ ಅವಧಿಯಲ್ಲಿ ಅತೀ ಹೆಚ್ಚು ವಿದೇಶೀ ಯಾತ್ರಿಕರು ಆಗಮಿಸುತ್ತಿದ್ದು ಈ ಬಾರಿ ಕೊರೊನಾ ವೈರಸ್‌ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿದೇಶೀ ಯಾತ್ರಿಕರ ಆಗಮನಕ್ಕೆ ಕೊಂಚ ತಡೆಯೊಡ್ಡಬೇಕಾದ ಅನಿವಾರ್ಯ ಎದುರಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಕೊರೊನಾ ವೈರಸ್‌ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕರ್ನಾಟಕ ಸರಕಾರ ಹೊರಡಿಸಿರುವ ತಿಳಿವಳಿಕೆ ಪತ್ರವನ್ನು ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳಲ್ಲಿ ಬಸದಿ ಆವರಣದಲ್ಲಿ ಪ್ರದರ್ಶಿಸಲಾಗುತ್ತಿದೆ. ಸಿಬಂದಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮನವರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯವಾಗಿ ನವಮಂಗಳೂರು ಬಂದರಿಗೆ ಪ್ರವಾಸಿ ಹಡಗುಗಳು ಬಂದಾಗ ಅದರಲ್ಲಿ ಬರುವ ಪ್ರಯಾಣಿಕರು ಮೂಡುಬಿದಿರೆ ಬಸದಿ ಸಹಿತ ಕರಾವಳಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.

ಮಂಗಳೂರು ಬಂದರಿನಲ್ಲಿ ಪ್ರವಾಸಿ ಹಡಗಿಗೆ ತಡೆ
ಪಣಂಬೂರು: ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ನವಮಂಗಳೂರು ಬಂದರಿಗೆ ಬರುವ ಪ್ರವಾಸಿ ಹಡಗು ಗಳಿಗೆ ತಡೆ ನೀಡಲಾಗಿದ್ದು ಮಾ.31ರ ವರೆಗೆ ಬಂದರು ಪ್ರವೇಶಿಸದಂತೆ ಆದೇಶ ನೀಡಲಾಗಿದೆ. ಪ್ರಸ್ತುತ ದೇಶದ ವಿವಿಧ ಬಂದರುಗಳಿಗೆ ಪ್ರವಾಸಿ ಹಡಗುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಶನಿವಾರ ಬರಲಿದ್ದ ಎಂಎಸ್‌ಸಿ ಲಿರಿಕಾ ಪ್ರವಾಸಿ ಹಡಗಿಗೆ ಎನ್‌ಎಂಪಿಟಿ ಪ್ರವೇಶ ನಿರಾಕರಿಸಲಾಗಿದೆ ಎಂದು ಬಂದರು ಅ ಧಿಕೃತವಾಗಿ ಸಂಬಂಧ ಪಟ್ಟ ಏಜಂಟ್‌ ಸಂಸ್ಥೆಗಳಿಗೆ ತಿಳಿಸಿದೆ. ಕೇಂದ್ರ ಸರಕಾರ ವಿದೇಶದಿಂದ ಬರುವ ವ್ಯಕ್ತಿಗಳ ಮೇಲೆ ನಿಗಾ ಇರಿಸಿದ್ದು ಈಗ ಪ್ರವಾಸಿ ಹಡಗುಗಳಿಗೂ ಭಾರತ ಪ್ರವೇಶಕ್ಕೆ ತಡೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next