Advertisement
ಇಲ್ಲಿನ ಸಾರ್ವಜನಿಕ ವಿದ್ಯಾ ಸಂಸ್ಥೆಯ ಐಟಿಐ ಕಾಲೇಜಿನಲ್ಲಿ ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಸಋಷಿ ಕುವೆಂಪು ಅವರ 118ನೇ ಜಯಂತ್ಯುತ್ಸವದಲ್ಲಿ ಹಿರಿಯ ಕನ್ನಡದ ಕಟ್ಟಾಳು ಸಿಂ.ಲಿಂ.ನಾಗರಾಜು ಅವರ ಸ್ಮರಣೆ, ಅನಿಕೇತನ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರು ಕುಪ್ಪಳ್ಳಿಯಲ್ಲಿ ಹುಟ್ಟಿ, ಮೈಸೂರಲ್ಲಿ ಬೆಳೆದು, ರಾಜ್ಯ, ರಾಷ್ಟ್ರ ಮಾತ್ರವಲ್ಲ, ಇಡೀ ವಿಶ್ವಕ್ಕೆ ಕನ್ನಡ ಸಾಹಿತ್ಯವನ್ನು ವಿಸ್ತರಿಸಿ ಇತಿ ಹಾಸದ ದಿಗ್ಗಜರ ಪಾಲಿಗೆ ಸೇರಿದರು. ಕನ್ನಡ ಅಕ್ಷರ ಲೋಕದ ನವ ಸಾಹಿತ್ಯವನ್ನು ಮೇರು ಶಿಖರಕ್ಕೆ ಏರಿಸಿದ ಮಹಾನ್ ಚೇತನ. ಅವರ ಬದುಕಿನ ಆಚಾರ, ವಿಚಾರಗಳು, ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ದಾರಿ ದೀಪವಾಗಬೇಕು ಎಂದರು.
Related Articles
Advertisement
ಕವಿಗಳಾದ ಕೂರಣಗರೆ ಕೃಷ್ಣಪ್ಪ, ಎಲೆಕೆರೆ ರಾಜಶೇಖರ್, ವರದರಾಜು, ರಾಘವೇಂದ್ರ ಮಯ್ಯ, ಅಬ್ಬೂರು ಶ್ರೀನಿವಾಸ್, ಯೋಗೇಶ್ ದ್ಯಾವಪಟ್ಟಣ ಕವಿತೆ ವಾಚಿಸಿದರು .ಡಿ.ಪಿ. ಪುಟ್ಟಸ್ವಾಮಿ (ಡಿಪಿಎಸ್), ಕುಂತೂರ್ ದೊಡ್ಡಿ ಕುಮಾರ್, ಕರಿಸಿದ್ದಪ್ಪ, ಗೋವಿಂದಳ್ಳಿ ಶಿವಣ್ಣ, ಶ್ರೀಮತಿ ಚಂದ್ರಿಕಾ, ಸುಣ್ಣಘಟ್ಟ ಗಂಗಾಧರ್, ಚಕ್ಕೆರೆ ಸಿದ್ದರಾಜು ಬಾಣಂತಳ್ಳಿ ಪ್ರಕಾಶ್ ಮೊದಲಾದವರು ಕುವೆಂಪು ವಿರಚಿತ ಗೀತೆಗಳನ್ನು ಹಾಡಿ ಗೀತಗಾಯನ ನಡೆಸಿಕೊಟ್ಟರು.
ಇದೇ ವೇಳೆ ಹಿರಿಯ ಸಾಹಿತಿ ಶಿವರಾಮೇ ಗೌಡ ನಾಗವಾರ ಅವರಿಗೆ ಅನಿಕೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುವೆಂಪು ಆದರ್ಶ ಅಳವಡಿಸಿಕೊಳ್ಳಿ : ನನ್ನನ್ನು ಗುರುತಿಸಿ ಅನಿಕೇತನ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಸಂತೋಷದವಾಗಿದ್ದು, ಮಹಾಕವಿಯಾಗಿ, ದಾರ್ಶನಿಕರಾಗಿ, ಶಿಕ್ಷಣ ತಜ್ಞರಾಗಿ ವಿವಿಧ ರಂಗಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ರಾಷ್ಟ್ರಕವಿ ಕುವೆಂಪು ಅವರು ಮನುಜಮತ ವಿಶ್ವಪಥ ಎಂಬ ಘೋಷಣೆ ಮೂಲಕ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದರು. ಅವರ ಆದರ್ಶ ಬದುಕನ್ನು ಅನುಸರಿಸುವುದೇ ಅವರಿಗೆ ನಾವು ಸಲ್ಲಿಸುವ ಗೌರವ ಎಂದು ಸಾಹಿತಿ ಶಿವರಾಮೇಗೌಡ ನಾಗವಾರ ತಿಳಿಸಿದರು.