Advertisement

ಉತ್ತಮ ಸಮಾಜಕ್ಕೆ ಕುವೆಂಪು ಚಿಂತನೆ ಅಗತ್ಯ

02:06 PM Dec 30, 2020 | Team Udayavani |

ಮಂಡ್ಯ: ಕುವೆಂಪು ಅವರ ಚಿಂತನೆ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

Advertisement

ನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಕುವೆಂಪು ಜಯಂತಿಯಲ್ಲಿಮಾತನಾಡಿ, ಕುವೆಂಪು ಅವರು ನಮ್ಮಕನ್ನಡ ನಾಡು ಕಂಡ ಶ್ರೇಷ್ಠ ಕವಿಗಳು,ದ.ರಾ.ಬೇಂದ್ರೆ ಅವರು ಹೇಳಿರುವಂತೆಕುವೆಂಪು ಅವರು ಜಗದ ಮತ್ತುಯುಗದ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದರು.

ಅಸ್ಪಶ್ಯತೆ ವಿರುದ್ಧ ಹೋರಾಟ: ತಮ್ಮ ಸಾಹಿತ್ಯದ ಮೂಲಕ ವೈಚಾರಿಕತೆ ನಿಲುವು, ನಾಡು ನುಡಿಯ ಬಗ್ಗೆ ಪ್ರಜ್ಞೆ, ದೇಶ ಪ್ರೇಮ ಮನೋಭಾವ ತೋರಿಸುವುದರ ಜತೆಗೆ ಅಸ್ಪಶ್ಯತೆ, ಅಸಮಾನತೆಯ ವಿರುದ್ಧ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಚಳವಳಿಗೆ ಪೂರಕ ಕಾವ್ಯ ರಚನೆ: ಕುವೆಂಪು ಅವರ ಸಾಹಿತ್ಯ, ಕಾದಂಬರಿಗಳು, ಕವನ, ಕಥೆ, ಕಾವ್ಯ, ಮಹಾಕಾವ್ಯಗಳಲ್ಲಿ ಒಂದೊಂದು ರೀತಿಯ ವೈಶಿಷ್ಟ್ಯತೆಯನ್ನು ಕಾಣಬಹುದು. ಒಂದೊಂದುಕಾವ್ಯದಲ್ಲೂ ಜಾnನ ಸುಜಾnನದ ಜತೆಗೆಸಮಾಜದ ಚಿಂತನೆ ಬದಲಾಯಿಸುವಂಥ ದೃಷ್ಟಿಕೋನವನ್ನು ನಾವು ನೋಡಬಹುದು. ನವೋದಯ ಸಾಹಿತ್ಯದ ಕವಿಗಳಾಗಿ ಭಾರತ ಸ್ವಾತಂತ್ರ್ಯ ಚಳವಳಿ, ಕನ್ನಡ ಏಕೀಕರಣ ಚಳವಳಿಗೆ ಪೂರಕ ಕಾವ್ಯಗಳನ್ನು ರಚನೆ ಮಾಡಿದ್ದಾರೆ.

ಕುವೆಂಪು ಅವರು ತಮ್ಮ ನಾಟಕ, ಕಾದಂಬರಿ ಮೂಲಕ ಅಸಮಾನತೆತೊಡೆದು ಹಾಕಲು ಪ್ರಾಮಾಣಿಕಪ್ರಯತ್ನ ಮಾಡಿದರು ಎಂದರು.ವಿಚಾರಧಾರೆ ಎಂದಿಗೂ ಪ್ರಸ್ತುತ: ಮಹಾಕಾವ್ಯಗಳ ಮುಖಾಂತರತೋರಿಸಿರುವಂಥ ವಿಚಾರಧಾರೆಗಳುಎಂದಿಗೂ ಪ್ರಸ್ತುತ. ಅವರು ತಮ್ಮಸಾಹಿತ್ಯದಲ್ಲಿ ಐದು ಸೂತ್ರಗಳನ್ನು ತಿಳಿಸಿದ್ದಾರೆ.

Advertisement

ವಿಶ್ವಮತ, ಜಗದ ಪಥ,ಸೂರ್ಯೋದಯ, ಸಮನ್ವಯತೆ ಈಸೂತ್ರಗಳನ್ನು ನಮ್ಮ ದಿನನಿತ್ಯ, ಆಡಳಿತ  ಸೂತ್ರದಲ್ಲಿ ಅಳವಡಿಸಿಕೊಂಡರೆ ಉತ್ತಮಸಮಾಜವನ್ನು ಅಭಿವೃದ್ಧಿಪಥದ ಸಮಾಜ ವನ್ನು ನಿರ್ಮಿಸಬಹುದಾಗಿದೆ. ಭಾಷೆ, ನಾಡಿನ ಬಗ್ಗೆ ಅಪಾರ ಪ್ರೇಮ ಬೆಳೆಸಿಕೊಳ್ಳಬಹುದು. ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ ನಾಡಗೀತೆಯನ್ನು ರಚನೆಮಾಡಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ವಿ.ಆರ್‌. ಶೈಲಜಾ, ಸಿಇಒ ಎಸ್‌.ಎಂ.ಜುಲ್‌ ಫಿಖಾರ್‌ ಉಲ್ಲಾ, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕಉದಯ್‌ಕುಮಾರ್‌, ಪೊ›.ಜಿ.ಟಿ.ವೀರಪ್ಪ, ಡಿ.ದೇವರಾಜು ಹಿಂದುಳಿದವರ್ಗಗಳ ವೇದಿಕೆ ಅಧ್ಯಕ್ಷ ಎಲ್‌. ಸಂದೇಶ್‌, ನಿವೃತ್ತ ಪ್ರಾಂಶುಪಾಲೆ ಡಾ.ಲೀಲಾ ಅಪ್ಪಾಜಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next