Advertisement

ಕುವೆಂಪು ಸಾಂಸ್ಕೃತಿಕ ರಾಯಭಾರಿ

04:40 PM Dec 30, 2020 | Team Udayavani |

ಬೀದರ: ರಾಷ್ಟ್ರ ಕುವೆಂಪು ಅವರು ಜಾತ್ಯತೀತ ನಿಲುವು ಪ್ರತಿಪಾದನೆಗಾಗಿರಾಮಾಯಣ ದರ್ಶನಂ ಮಹಾಕಾವ್ಯರಚಿಸಿದ್ದು ಅವಿಸ್ಮರಣೀಯ ಎಂದುಪ್ರಾಚಾರ್ಯ ಹಾಗೂ ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ ಹೇಳಿದರು.

Advertisement

ನಗರದ ಕರ್ನಾಟಕ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದಕುವೆಂಪು ಜನ್ಮದಿನದ ನಿಮಿತ್ತಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಸಮಾರಂಭದಲ್ಲಿ ಮಾತನಾಡಿದ ಅವರು,ಆಧುನಿಕ ಕಾಲದಲ್ಲಿ ಮಹಾಕಾವ್ಯ ನಿಂತೆಹೋಯಿತು ಎನ್ನುವಾಗ ಕುವೆಂಪುಅವರು ಮಹಾ ಕಾವ್ಯ ರಚಿಸಿದ್ದುಚಾರಿತ್ರಿಕವಾಗಿ ಮಹತ್ವದ ಸಂಗತಿ. ಮಹಾ ಕಾದಂಬರಿಗಳಾದ ಮಲೆಮಗಳು,ಕಾನೂರು ಹೆಗ್ಗಡತಿ ಮೂಲಕ ಒಂದು ಕಾಲದ ಜೀವನ ವಿಧಾನಗಳನ್ನು ಕಟ್ಟಿಕೊಟ್ಟ ಸಾಂಸ್ಕೃತಿಕ ರಾಯಭಾರಿಗಳೆಂದು ಬಣ್ಣಿಸಿದರು.

ಉಪನ್ಯಾಸಕರಾದ ಮಹೇಶ ಬಿರಾದಾರ, ಶ್ರೀದೇವಿ ಮೇತ್ರೆ, ನೆಹರು ಪವಾರ, ಪ್ರಮುಖರಾದ ಎಂ.ಎಲ್‌. ರಾಸೂರ, ಶ್ರುತಿ ಬೀರಗಿ, ಲಕ್ಷ್ಮೀ, ವೀರಶೆಟ್ಟಿ ಪಾಟೀಲ, ಗಣೇಶ ಘಂಟಿ ಇದ್ದರು.

ಬಸವಕಲ್ಯಾಣದಲ್ಲಿ 51ನೇ ಉಪನ್ಯಾಸ ಮಾಲಿಕೆ :

ಬಸವಕಲ್ಯಾಣ: ಕಾವ್ಯ ಮತ್ತು ತತ್ವಜ್ಞಾನ ಕುವೆಂಪು ಸಾಹಿತ್ಯದ ಜೀವಾಳವಾಗಿವೆ. ಪ್ರಕೃತಿ ದರ್ಶನ ಮತ್ತು ಮಾನವೀಯತೆ ಕುವೆಂಪು ಸಾಹಿತ್ಯದ ತಾತ್ವಿಕತೆಯಾಗಿದೆ ಎಂದು ಸರಕಾರಿ ಪಿಯು ಕಾಲೇಜು ಉಪನ್ಯಾಸಕ ರೇವಣಸಿದ್ಧಪ್ಪ ದೊರೆಗಳ್‌ ಹೇಳಿದರು.

Advertisement

ನಗರದ ಅಲ್ಲಮಪ್ರಭು ಪದವಿ ಕಾಲೇಜಿನಲ್ಲಿ ಮಂಳವಾರ ಏರ್ಪಡಿಸಿದ್ದ ಡಾ| ಜಯದೇವಿತಾಯಿ ಲಿಗಾಡೆಪ್ರತಿಷ್ಠಾನದ 51ನೇ ಉಪನ್ಯಾಸ ಮಾಲಿಕೆ ಹಾಗೂ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಕುವೆಂಪು ಮತ್ತುವಿಚಾರವಾದ ಕುರಿತು ಅವರುಮಾತನಾಡಿ, ಕುವೆಂಪು ಅವರುಕವಿಯಾಗುವುದಕ್ಕಿಂತ ಬಹುದೊಡ್ಡ ತತ್ವ ಜ್ಞಾನಿಯಾಗಿದ್ದರು. ವಸಾಹಾತುಶಾಹಿ ಕಾಲಕ್ಕೆ ಓದು-ಅಧ್ಯಯನ ಮಾಡಿದ ಕುವೆಂಪು, ಕನ್ನಡತ್ವ, ಭಾರತೀಯತೆ ಮತ್ತು ವಿಶ್ವಮಾನವ ತತ್ವವನ್ನುತಮ್ಮ ಬರಹದ ಮೂಲಕಪ್ರ ತಿಪಾದಿಸಿದರು. ಸಮಾಜದಲ್ಲಿನ ಮೌಡ್ಯ ಕಂದಾಚಾರಗಳನ್ನು ಕಟುವಾಗಿ ವಿರೋಧಿಸಿ ವಿಚಾರ ಕ್ರಾಂತಿಗೆ ಆಹ್ವಾನಿಸಿದ ಚಿಂತಕರಾಗಿದ್ದಾರೆ.

ಡಾ| ಭೀಮಾಶಂಕರ ಬಿರಾದಾರ ಮಾತನಾಡಿ, ವಿಶ್ವ ಮಾನವ-ಪ್ರಜ್ಞೆ,ಪ್ರಕೃತಿಪ್ರೇಮ, ನುಡಿಪ್ರಜ್ಞೆ, ರಾಷ್ಟ್ರೀಯತೆಮತ್ತು ಕನ್ನಡ ರಾಷ್ಟ್ರೀಯತೆಗಳುಕುವೆಂಪು ಕಾವ್ಯಗಳಲ್ಲಿ ಅಡವಾಗಿವೆ.ಮಲೆನಾಡಿನ ಜಮೀನುದಾರಿ ಪದ್ಧತಿ, ಹೆಣ್ಣಿನ ಬದುಕು,ವಸಾಹತುಶಾಹಿ, ಆಧುನಿಕತೆಯನ್ನುಎದುರಿಸುವ ವಿಧಾನಗಳು, ಮಲೆಗಳಲ್ಲಿಮದುಮಗಳು, ಕಾನೂರು ಹೆಗ್ಗಡತಿಕಾದಂಬರಿಗಳಲ್ಲಿ ನೆಲೆಗೊಂಡಿವೆ. ಮೌಡ್ಯ ಕಂದಾಚಾರ ವಿರೋಧಿಸುವ, ಸಾಮಾಜಿಕ ಸಂಕೀರ್ಣತೆ ಮೀರುವ ಚಿಂತನೆಗಳು ಅವರ ವೈಚಾರಿಕ ಬರಹಗಳಲ್ಲಿ ಅಡವಾಗಿವೆ ಎಂದರು.

ಚಂದ್ರಕಾಂತ ಅಕ್ಕಣ್ಣಾ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವಿಂದ್ರ ಬರಗಾಲೆ ಸ್ವಾಗತಿಸಿದರು. ಪ್ರಿಯಾಂಕಾ ಮಡಕೆ ನಿರೂಪಿಸಿದರು. ಶಹಾನವಾಜ್‌ ಶೇಖ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next