Advertisement

ಕುತ್ಯಾರು ಪಡು ಇರಂದಾಡಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನ

04:28 PM Mar 03, 2024 | Team Udayavani |

ಕಾಪು: ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣಗೊಂಡಿರುವ ಕುತ್ಯಾರು ಪಡು ಇರಂದಾಡಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನವೀಕೃತ ಶಿಲಾಮಯ ದೈವಾಲಯ ಸಮರ್ಪಣೆ, ಪುನಃಪ್ರತಿಷ್ಠೆ, ಸಾನ್ನಿಧ್ಯ ಕಲಶೋತ್ಸವ, ಮಹಾ ಅನ್ನಸಂತರ್ಪಣೆ, ನೇಮವು ಎಲ್ಲೂರು ಸೀಮೆಯ ಪ್ರಧಾನ ತಂತ್ರಿ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಎಲ್ಲೂರು ದೇಗುಲ ಪ್ರಧಾನ ಅರ್ಚಕ ವೇ| ಮೂ| ಎಲ್ಲೂರು ಕೃಷ್ಣಮೂರ್ತಿ ಭಟ್ಟರ ಸಹಕಾರದೊಂದಿಗೆ ಮಾ. 3ರಿಂದ ಮಾ. 5ರ ವರೆಗೆ ಜರಗಲಿದೆ.

Advertisement

ಮಾ. 3ರಂದು ಸಂಜೆ 6ರಿಂದ ಆಲಯ ಪ್ರತಿಗ್ರಹ, ಶಿಲ್ಪ ಪೂಜೆ, ಮಹಾಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ಸಪ್ತಶುದ್ಧಿ, ಗೋಪ್ರವೇಶ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಕಾ³ಲ ಬಲಿ, ಬಾಲಾಲಯದಿಂದ ಸಾನ್ನಿಧ್ಯಕ್ಕೆ ತಂದು ಬಿಂಬಾಧಿವಾಸ, ಕಲಶ ಮಂಡಲ, ಕಲಶಾಧಿವಾಸ, ರಕ್ಷೆ ನಡೆಯಲಿದೆ.

ಮಾ. 4ರಂದು ಬೆಳಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹವನ, 48 ಸಾನ್ನಿಧ್ಯ ಕಲಶ ಪ್ರತಿಷ್ಠೆ, ಅಧಿವಾಸ ಹೋಮ, ಶಿಖರ ಪ್ರತಿಷ್ಠೆ, ಬೆಳಗ್ಗೆ 8.26ಕ್ಕೆ ದೈವ ಸಂದರ್ಶನದ ಮೂಲಕ ಗರ್ಭಗೃಹ ಪ್ರವೇಶ ಸಹಿತ ನೂತನ ಆಲಯದಲ್ಲಿ ಮಣೆ ಮಂಚಾವು ಮತ್ತು ದೈವ ಪ್ರತಿಷ್ಠೆ, ಕಲಶಾಭಿಷೇಕ, ಹಾಲಾವಳಿ, ಪ್ರಸನ್ನ ಪೂಜೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಗಜಕಂಬ ಮುಹೂರ್ತ, 11ಕ್ಕೆ ಕಂಬೆರ್ಲ ಕಲದಲ್ಲಿ ಪಂಚಕಜ್ಜಾಯ ಸೇವೆ, ಮಧ್ಯಾಹ್ನ 12ಕ್ಕೆ ಚಪ್ಪರಾರೋಹಣ, 12.30ಕ್ಕೆ ಮಹಾಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಭಂಡಾರ ಇಳಿಯುವುದು, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ, 9 ಗಂಟೆಯಿಂದ ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ಪರಿವಾರ ದೈವಗಳಿಗೆ ವೈಭವದ ನೇಮ ನಡೆಯಲಿದೆ.

ಮಾ. 5ರಂದು ಬೆಳಗ್ಗೆ 9ರಿಂದ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮ, ಹಾಲಾವಳಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಕುತ್ಯಾರು ಪಡುಇರಂದಾಡಿ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ, ಸ್ಥಳವಂದಿಗರು, ದೈವದ ಪಾತ್ರಿ ಮತ್ತು ಅರ್ಚಕ ವರ್ಗ ಹಾಗೂ ಸಮಸ್ತ ಭಕ್ತರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next