Advertisement
ಏನಿದು ಕುಟೀರ ಶಿಕ್ಷಣ ?ಹಿಂದೆ ಗುರುಕುಲ ಮಾದರಿಯಲ್ಲಿ ಶಿಕ್ಷಣವಿದ್ದು ಅಲ್ಲಿ ಗುರುಗಳಿಂದ ಉತ್ತಮ ಸಂಸ್ಕಾರಭರಿತ, ಜೀವನ
ಮೌಲ್ಯಗಳ ಪಾಠ ಬೋಧಿಸಲಾಗು ತ್ತಿತ್ತು. ಕುಟೀರದ ವಾತಾವರಣದಲ್ಲಿ ಮಕ್ಕಳು ನೆಮ್ಮದಿ, ಶಾಂತಿ, ತಾಳ್ಮೆ ಮೂಲಕ ಪಾಠ ಪ್ರವಚನ ಆಲಿಸಿ ಬದುಕು ರೂಪಿಸಲು ಅಡಿಪಾಯ ವಾಗುತ್ತಿತ್ತು. ಇದೀಗ ನಾಲ್ಕು ಗೋಡೆ ಗಳ ನಡುವೆ ಪುಸ್ತಕದ ಪಾಠಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಸುಸ್ಥಿರ, ಹಲವು ಆಯಾಮದ ಶಿಕ್ಷಣ, ಜೀವನಮೌಲ್ಯದ ಪಾಠಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆೆ. ಇದಕ್ಕಾಗಿ ರೂಪು ತಳೆದಿರುವುದು ಕುಟೀರ ಶಿಕ್ಷಣ. ಇದನ್ನು ಕನ್ನಡ ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಬಿದಿರು, ಮುಳಿಹುಲ್ಲು, ಅಡಿಕೆ ಮರದಿಂದ ಮಾಡಿದ ಕುಟೀರ ನಿರ್ಮಿಸಲಾಗುತ್ತಿದ್ದು ತಂಪಾದ ವಾತಾ ವರಣದಲ್ಲಿ ಪಾಠ ಕೇಳುವ ಸೌಭಾಗ್ಯ ಮಕ್ಕಳದ್ದಾಗಿದೆ.
ಪುಸ್ತಕದ ಪಾಠಗಳ ಜತೆ ಜೀವನ ಮೌಲ್ಯ ಬೆಳೆಸುವ, ನೀತಿಕತೆ, ಪುರಾಣಗಳ ಕತೆ ಹೇಳಿ ಕೊಡಲಾಗುವುದು. ಒಂದರಿಂದ ಏಳನೇ ತರಗತಿವರೆಗೆ ಎಲ್ಲ ತರಗತಿಗಳಿಗೆ ದಿನಂಪ್ರತಿ ಒಂದೊಂದು ತರಗತಿಗಳನ್ನು ಈ ಕೊಠಡಿಯಲ್ಲಿ ನಡೆಸಲಾಗುವುದು. ತುಳುನಾಡಿನ ಪಾಡªನ, ಯಕ್ಷಗಾನ, ನಾಟಕ, ಕುಲಕಸುಬುಗಳ ಪರಿಚಯ, ಗ್ರಾಮೀಣ ಕ್ರೀಡೆಗಳ ತಿಳಿವಳಿಕೆ, ತೆಂಗಿನ ಮಡಲು ಹೆಣೆಯುವಿಕೆ ಸಹಿತ ವಿವಿಧ ಚಟುವಟಿಕೆಗಳು ಇಲ್ಲಿ ನಡೆಯಲಿವೆ. ಈಗಾಗಲೇ ಶಾಲೆಗಳ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಎಲ್ಲರೂ ಕೈಜೋಡಿಸಿದ್ದಾರೆ. ಕೆಲವೆಡೆ ಮಕ್ಕಳ ಹೆತ್ತವರು, ಎಸ್‌ಡಿಎಂಸಿ ಸದಸ್ಯರೇ ಕುಟೀರ ನಿರ್ಮಿಸಿಕೊಟ್ಟಿದ್ದಾರೆ. ಇನ್ನು ಕೆಲವೆಡೆ ಮುಖ್ಯ ಶಿಕ್ಷಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಸಹಕರಿಸಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ಈ ಕುಟೀರ ಶಿಕ್ಷಣದ ಪರಿಕಲ್ಪನೆಯ ಬೀಜ ಬಿತ್ತಿ ದವರು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕಾರ್ಕಳದ ಕ್ರಿಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಅವರ
ಮೂಲಕ ಈ ಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕಾರ್ಕಳಕ್ಕೆ 100 ವರ್ಷ ವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಚಟುವಟಿಕೆಗೆ ಶಿಕ್ಷಣಾಧಿ ಕಾರಿಗಳ ಸಲಹೆ ಮೇರೆಗೆ ಕುಟೀರ ಶಿಕ್ಷಣ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಈ ಪ್ರಯೋಗ ಈಗಾಗಲೇ ಹಲವು ಶಾಲೆಗಳಲ್ಲಿ ಆರಂಭಗೊಂಡಿದ್ದು ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 4ರಂದು ಆರಂಭಗೊಳ್ಳಲಿದೆ.
Related Articles
ಜನಪ್ರತಿನಿಧಿಗಳು, ಶಿಕ್ಷಣ ತಜ್ಞರ ಭೇಟಿ ನೀಡಿ ಕಲಿಕೆಗೆ ಪ್ರೇರಣೆ ನೀಡಲಿದ್ದಾರೆ. ಇದರೊಂದಿಗೆ ಕುಟೀರ ಶಿಕ್ಷಣದಂತಹ ಯೋಚನೆಗಳು ಒಂದಿಷ್ಟು ಟಾನಿಕ್ ನೀಡಿದಂತಾಗಲಿದೆ. ಕುಟೀರದಲ್ಲಿ ಮಕ್ಕಳ ಸೃಜನಶೀಲತೆಗೆ ಒತ್ತು ಸಿಗಲಿದ್ದು, ಈ ಪ್ರಯತ್ನಕ್ಕೆ ಹೆತ್ತವರು ಶಹಬ್ಟಾಸ್ ಎಂದಿದ್ದಾರೆ.
Advertisement
ಶಾಸಕರ ಪ್ರೇರಣೆಕಾರ್ಕಳ ಶಾಸಕರ ಪ್ರೇರಣೆಯಂತೆ ಕನ್ನಡ ಶಾಲೆಗಳಲ್ಲಿ ಕುಟೀರ ಶಿಕ್ಷಣ ಆರಂಭಿಸಲಾಗುವುದು. ಇಲ್ಲಿ ಹಿಂದಿನ ಗುರುಕುಲ ಶಿಕ್ಷಣದ ಮಾದರಿಯಲ್ಲಿ ಪಾಠ ಮಾಡಲಾಗುವುದು. ನಮ್ಮ ನಾಡಿನ ಸಂಸ್ಕೃತಿ, ತುಳುನಾಡಿನ ಆಚರಣೆಗಳ ಜತೆ ಬದುಕುವ ನೈತಿಕ ಶಿಕ್ಷಣ ನೀಡಲಾಗುವುದು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಹೆತ್ತವರು ಈ ಪರಿಕಲ್ಪನೆಗೆ ಕೈಜೋಡಿಸಿದ್ದಾರೆ.
-ಶಶಿಧರ್ ಜಿ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ ಮೌಲ್ಯಾಧಾರಿತ ಶಿಕ್ಷಣ ಉದ್ದೇಶ
ಇದೊಂದು ಉತ್ತಮ ಪರಿಕಲ್ಪನೆ. ತರಗತಿಯ ಹೊರಗೆ ಪ್ರಶಾಂತ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಕುಟೀರ ಶಿಕ್ಷಣ ನಡೆಸಲಾಗುವುದು. ಈ ಪರಿಕಲ್ಪನೆಯ ರೂವಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆ.
-ಪೂರ್ಣಿಮಾ ಭಟ್, ಮುಖ್ಯ ಶಿಕ್ಷಕಿ, ಸರಕಾರಿ ಮಾದರಿ ಹಿ. ಪ್ರಾ. ಶಾಲೆ, ಮುಂಡ್ಕೂರು ಮರದಡಿ ಪಾಠದ ನೆನಪು
ಈ ಕುಟೀರ ಶಿಕ್ಷಣದ ಮೂಲಕ ಹಿಂದೆ ನಾವು ಶಾಲೆಯಲ್ಲಿ ಕಲಿಯುತ್ತಿರುವಾಗ ಶಿಕ್ಷಕರು ಮರದಡಿಯಲ್ಲಿ ಪಾಠ ಮಾಡಿದ್ದ ನೆನಪಾಗುತ್ತಿದೆ. ನಮ್ಮ ಮಕ್ಕಳು ಧನ್ಯರು. ಖುಷಿಯಾಗುತ್ತಿದೆ.
-ರಮೇಶ್ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮುಂಡ್ಕೂರು -ಶರತ್ ಶೆಟ್ಟಿ ಮುಂಡ್ಕೂರು