Advertisement
ಕಳೆದ ಭಾನುವಾರ ಚರಂಡಿ ಪಕ್ಕದ ಸಾಮೂಹಿಕ ಮಹಿಳಾ ಶೌಚಾಲಯದ ಮರ್ಯಾದ ಗೋಡೆಯ ಒಂದು ಬದಿಯ ಮೂಲೆಯನ್ನು ಸಾಮಾಜಿಕ ಕಾರ್ಯಕರ್ತ ಬಸವರಾಜ ಗಾಣಗೇರ ಜೆಸಿಬಿಯಿಂದ ಏಕಾಏಕಿ ಪುರಸಭೆ ಅಧ್ಯಕ್ಷರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ತೆರೆವುಗೊಳಿಸಿದ್ದರು.
Related Articles
Advertisement
ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಬಸವರಾಜ ಗಾಣಗೇರ ಅವರು, ಕಳೆದ ಭಾನುವಾರ ಏಕಾಏಕಿ ಮಹಿಳಾ ಶೌಚಾಲಯ ತೆರವುಗೊಳಿಸಲು ಯತ್ನಿಸಿರುವುದು ದುಡುಕಿನ ನಿರ್ಧಾರ. ಸುಪ್ರೀಂ ಕೋರ್ಟ್ ಆದೇಶದನ್ವಯ ಈ ರೀತಿ ಮರ್ಯಾದ ಗೋಡೆ ಇರಬಾರದು. ಈ ರೀತಿಯ ಶೌಚಾಲಯಗಳನ್ನು ತೆರವುಗೊಳಿಸಿ ಸುಲಭ ಮಾದರಿ ಶೌಚಾಲಯ ನಿರ್ಮಿಸಲು ಸೂಚಿಸಿತ್ತು.ಆದರೆ ಪಟ್ಟಣದ 5ನೇ ವಾರ್ಡಿನಲ್ಲಿ ಮಹಿಳಾ ಸಾಮೂಹಿಕ ಶೌಚಾಲಯದ ಮರ್ಯಾದ ಗೋಡೆ ಇದ್ದು ಇನ್ನೂ ಬಳಕೆಯಲ್ಲಿದೆ.
ಸ್ವಚ್ಛ ಭಾರತ ಅಭಿಯಾನದ ಯೋಜನೆ ಸಂಪೂರ್ಣ ಅನುಷ್ಠಾನ ಹಿನ್ನೆಲೆಯಲ್ಲಿ ಬಯಲು ಬಹಿರ್ದೇಸೆ ಮುಕ್ತಗೊಳಿಸಲು ಪ್ರತಿ ಕುಟುಂಬ ವೈಯಕ್ತಿಕ ಶೌಚಾಲಯ ಹೊಂದಬೇಕಿದೆ. ಆದರೆ ಈ ವಾರ್ಡಿನಲ್ಲಿ ಜಾಗೆಯ ತೊಂದರೆಯಿಂದಾಗಿ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಖುದ್ದಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳದವರ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಮನವಿ ಮಾಡಿದ್ದೆ. ಇವರಲ್ಲಿ ಕೆಲವು ಕುಟುಂಬಗಳು ಸ್ಪಂಧಿಸಿವೆ. ಇನ್ನಾದರೂ ಪುರಸಭೆ ವೈಯಕ್ತಿಕ ಶೌಚಾಲಯ ಹೊಂದಿರದ ಕುಟುಂಬ ಗುರುತಿಸಿ ಆದ್ಯತೆಯಾಗಿ ಶೌಚಾಲಯ ನಿರ್ಮಿಸಬೇಕು ಇಲ್ಲವೇ ಈ ಸ್ಥಳದಲ್ಲಿ ಸುಲಭ ಮಾದರಿ ಶೌಚಾಲಯ ನಿರ್ಮಿಸಬೇಕೆನ್ನುವುದು ನಮ್ಮ ಆಗ್ರಹವಾಗಿದೆ ಎಂದು ಬಸವರಾಜ್ ಗಾಣಗೇರ ತಿಳಿಸಿದರು.