Advertisement

Kustagi: ಜೆಸ್ಕಾಂ‌ ಸಿಬ್ಬಂದಿಗೆ ಅಶ್ಲೀಲವಾಗಿ ನಿಂದನೆ; ಠಾಣೆಗೆ ದೂರು

01:26 PM Oct 20, 2023 | Team Udayavani |

ಕುಷ್ಟಗಿ: ವಿದ್ಯುತ್ ಸರಬರಾಜಿನಲ್ಲಿ ತಾಂತ್ರಿಕ ಅಡಚಣೆಗೆ ಬ್ಯಾಲಿಹಾಳ ಗ್ರಾಮದ ವ್ಯಕ್ತಿಯೋರ್ವ ಜೆಸ್ಕಾಂ ಶಾಖಾಧಿಕಾರಿ ಹಾಗೂ 220 ಕೆವಿ ವಿತರಣಾ ಘಟಕದ ಸಿಬ್ಬಂದಿಗೆ ಅಶ್ಲೀಲ ಬೈಗುಳದಲ್ಲಿ ನಿಂದಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕಳೆದ ಗುರುವಾರ ಕೊರಡಕೇರಾ ಫೀಡರ್ ಲೈನ್ ಗೆ ಸಮಯ 8-40 ರಿಂದ ಮಧ್ಯಾಹ್ನ 1-45 ವರೆಗೆ ವಿದ್ಯುತ್ ಸರಬರಾಜಿನ ಮಧ್ಯೆ ಟಿಸಿ ತಾಂತ್ರಿಕ ಅಡಚಣೆಯಿಂದ ಅರ್ಧಗಂಟೆ ಪೂರೈಕೆ ಸ್ಥಗಿತಗೊಂಡಿದೆ. ನಂತರ ತಾಂತ್ರಿಕ ಅಡಚಣೆ ಸರಿಪಡಿಸಿ ಸಮಯ 2-30ರವರೆಗೆ ವಿಸ್ತರಿಸಿ ಸರ್ಕಾರ‌ ನಿಯಮದನ್ವಯ 5 ಗಂಟೆ ವಿದ್ಯುತ್ ಪೂರೈಕೆಯ ಸೇವೆ ಪರಿಪೂರ್ಣಗೊಳಿಸಲಾಗಿತ್ತು.

ಈ ಬೆಳವಣಿಗೆಯಲ್ಲಿ ಬ್ಯಾಲ್ಯಾಳ ಗ್ರಾಮದ ಹನಮಂತಪ್ಪ ಬೀರಪ್ಪ ಆಡೀನ್ ಎನ್ನುವ ವ್ಯಕ್ತಿ ವಿದ್ಯುತ್ ಪೂರೈಕೆಯಲ್ಲಿ ಅರ್ಧ ಗಂಟೆಯ ವ್ಯತ್ಯಯಕ್ಕೆ ಕೋಪೋದ್ರಿಕ್ತನಾಗಿ 220 ಕೆವಿ ವಿತರಣಾ ಸಂಸ್ಥೆಯ ಸಿಬ್ಬಂದಿಗೆ ಅವಾಶ್ಚವಾಗಿ ಬೈದಿರವುದಲ್ಲದೇ ಪದೇ ಪದೇ ಫೋನ್ ಮಾಡಿ ಕಿರಿಕಿರಿ ಮಾಡಿದ್ದು ಅಲ್ಲದೇ ಕುಷ್ಟಗಿ ಜೆಸ್ಕಾಂ ಶಾಖಾಧಿಕಾರಿ ತಾಜುದ್ದೀನ್ ಅವರಿಗೆ ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಾನೆ. ಬ್ಯಾಲಿಹಾಳ ಗ್ರಾಮದ ವ್ಯಕ್ತಿ‌ ಹನಮಂತಪ್ಪ ಆಡೀನ್ ಅಸಹನೀಯ ಬೈಗುಳ ಸಹಿಸಿಕೊಂಡು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸದರಿ ವ್ಯಕ್ತಿಯ ವಿರುದ್ದ ಕ್ರಮವಹಿಸಬೇಕು. ಸರ್ಕಾರದ ನಿಯಮದಂತೆ ಪೂರೈಕೆಯ ವೇಳೆ ಉಂಟಾಗುವ ವಿದ್ಯುತ್ ವ್ಯತ್ಯಯಕ್ಕೆ ಸಿಬ್ಬಂದಿಯನ್ನು ಹೊಣೆ ಮಾಡದಂತೆ ಜಾಗೃತಿ ಮೂಡಿಸಲು ಜೆಸ್ಕಾಂ ಹಾಗೂ 220ಕೆವಿ ವಿತರಣಾ ಘಟಕದ ಸಿಬ್ಬಂದಿ ಪೊಲೀಸ್ ಠಾಣೆ ಪಿಎಸೈ ಹಾಗೂ ಸಿಇಐ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mysore: ಜಗತ್ತು ಮೈಸೂರಿನತ್ತ ನೋಡಲು ಮಹಾರಾಜರೆ ಕಾರಣ: ಸಚಿವ ಎಚ್. ಕೆ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next