Advertisement

ಕುಷ್ಟಗಿ : ಧಾರಾಕಾರ ಮಳೆಗೆ ಜನವಸತಿ ಪ್ರದೇಶ ಜಲಾವೃತ, ಜನ ಜೀವನ ಅಸ್ತವ್ಯಸ್ತ

10:14 AM Oct 19, 2022 | Team Udayavani |

ಕುಷ್ಟಗಿ: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕುಷ್ಟಗಿ,ಪಟ್ಟಣದ ಹಳೆ ನೆರೆಬೆಂಚಿ ರಸ್ತೆಯಲ್ಲಿ ರಾಜಕಾಲುವೆ ನೀರು ಜನವಸತಿಯತ್ತ‌‌ ನುಗ್ಗಿದ್ದರಿಂದ ಕೆಲವು‌ ಮನೆಗಳು ಜಲಾವೃತವಾಗಿ ಅವಾಂತರ ಸೃಷ್ಟಿಸಿತು.

Advertisement

ಇಲ್ಲಿನ‌ ನೆರೆಬೆಂಚಿ ರಸ್ತೆಯಲ್ಲಿ ಅತಾಂತ್ರಿಕ‌ ಚರಂಡಿ ಕಾಮಗಾರಿಯೇ ರಾಜ‌ಕಾಲುವೆ ನೀರು ರಸ್ತೆಯ ಮೇಲೆ ಹರಿದು, ಕೆಲವು ಮನೆಗಳಿಗೆ ಜಲ ದಿಗ್ಬಂಧನ ವಿಧಿಸಿತ್ತು. ನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆ ಆತಂಕಗೊಂಡ ಜನತೆ ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ ಅವರ ಗಮನಕ್ಕೆ ತಂದರು. ಕೂಡಲೇ ಪುರಸಭೆ ಪೌರ ಕಾರ್ಮಿಕರೊಂದಿಗೆ ದೌಡಾಯಿಸಿ ಜೆಸಿಬಿ ಸಹಾಯದಿಂದ ಕಟ್ಟಿಕೊಂಡಿದ್ದ ನೀರಿನ ತಡೆಯನ್ನು ತೆರವುಗೊಳಿಸಿದರು.

ಗುಡುಗು,ಸಿಡಿಲು ಅಬ್ಬರದ ಒಂದು ಗಂಟೆ ಧಾರಕಾರ ಮಳೆ ಸುರಿದಿದ್ದರಿಂದ ಚರಂಡಿಗಳು ಭರ್ತಿಯಾಗಿ‌ ರಸ್ತೆಯ ಮೇಲೆ ಹರಿದಿದ್ದರಿಂದ ಜನರು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

ಬಿತ್ತನೆ‌ ಮತ್ತೆ‌ ಮುಂದೂಡಿಕೆ:
ಕಳೆದೆರೆಡು ದಿನಗಳಿಂದ ಬಿಡುವು ನೀಡಿದ್ದ ಮಳೆಗೆ ಅಂತು ಇಂತೂ ಬಿತ್ತನೆಗೆ ಅವಕಾಶ ಸಿಕ್ಕಿತು ಎನ್ನುವ ಖುಷಿಯಲ್ಲಿದ್ದರು ಅದರೆ ಸಂಜೆ ಮಳೆಯಾಗುತ್ತಿದ್ದಂತೆ ನಿರಾಸೆ ವ್ಯಕ್ತವಾಗಿದ್ದಲ್ಲದೇ ಹಿಂಗಾರು ಹಂಗಾಮಿನ  ಬಿತ್ತನೆ ದಿನಾಂಕ ಮತ್ತೆ ಮುಂದೂಡಿಕೆ ಅನಿವಾರ್ಯವಾಗಿದೆ. ಈಗಾಗಲೇ ಕಡಲೆ ಬಿತ್ತನೆ ಮಾಡಿದ ಕಡಲೆ ಬೆಳೆ ಭೂಮಿಯ ತೇವಾಂಶ ಹೆಚ್ಚಿದ್ದು‌ ಹರಗಿ ಬಿತ್ತನೆ ಯೋಚಿಸಲಾಗುತ್ತಿದೆ.

ಕೆಲ ರೈತರು ಎರಡು ದಿನ ಮಳೆ ಬಿಡುವು ನೀಡಿದ್ದರಿಂದ ಕಡಲೆಗೆ ಔಷಧಿ ಸಿಂಪರಣೆ ಮಾಡಿದ್ದು ಬಳಿಕ ಮಳೆಯಾಗಿರುವುದು ಔಷಧಿ ಸಿಂಪರಣೆ ವ್ಯರ್ಥವಾಗಿದ್ದು ರೈತರು ಹಳಹಳಿಸುವಂತಾಗಿದೆ.

Advertisement

ಇದನ್ನೂ ಓದಿ : ರಾಮನವಮಿ ಗಲಭೆ ಪ್ರಕರಣ: 2.9 ಲ.ರೂ. ಪಾವತಿಸಲು 12ವರ್ಷದ ಬಾಲಕನಿಗೆ ನೋಟಿಸ್! ಕಂಗಾಲಾದ ಕುಟುಂಬ

Advertisement

Udayavani is now on Telegram. Click here to join our channel and stay updated with the latest news.

Next