Advertisement

ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ

09:55 AM Aug 20, 2022 | Team Udayavani |

ಕುಷ್ಟಗಿ : ತಾಲೂಕಿನ ಬೋದೂರು ಗ್ರಾಮದ ಯುವಕ 1ಕ್ವಿಂಟಲ್ 53 ಕೆ.ಜಿ. ಚೀಲ ಭಾರವನ್ನು ಎತ್ತುವ ಮೂಲಕ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿಕೊಂಡಿದ್ದಾನೆ.

Advertisement

26ರ ಹರಯದ ದ್ಯಾಮಣ್ಣ ಹನಮಂತಪ್ಪ ಕೊಡಗಲಿ ಈ ಯುವಕ ಕಳೆದ ಗುರುವಾರ, ಇಲ್ಲಿನ ಎಪಿಎಂಸಿ ಯಾರ್ಡ ಬನ್ನಿಕಟ್ಟಿಯ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ಹಮಾಲರ ಸಂಘದ ಶ್ರಮಿಕ ವರ್ಗದವರು, ಸೌಹಾರ್ಧ ಭಾರ ಎತ್ತುವ ಸ್ಪರ್ದೆ ಆಯೋಜಿಸಲಾಗಿತ್ತು.

ಈ ಔಪಚಾರಿಕ ಸ್ಪರ್ಧೆಯಲ್ಲಿ ದ್ಯಾಮಣ್ಣ ಹನಮಂತಪ್ಪ ಕೊಡಗಲಿ ಅವರು, 1 ಕ್ವಿಂಟಲ್, 53 ಕೆ.ಜಿ. ಚೀಲದ ಭಾರವನ್ನು ಬೆನ್ನ ಮೇಲೆ ಹೊತ್ತು ನೆಲಕ್ಕೆ ಹಣೆ ಹಚ್ಚಿ, ಮೇಲಕ್ಕೇಳಬೇಕು ಪುನಃ ಮಂಡಿಯೂರಿ ಬಾಗಿ ಹಣೆ ಹಚ್ಚಬೇಕು ಇದೇ ರೀತಿ ಮೂರು ಬಾರಿ ಮಾಡಿ ಭಾರ ಎತ್ತುವ ಸ್ಪರ್ಧೆ ಯಲ್ಲಿ ಭಲೇ ದ್ಯಾಮಣ್ಣ… ಎನಿಸಿಕೊಂಡಿದ್ದಾರೆ.

ಪದವೀಧರನಾಗಿರುವ ಯುವಕ ಬೋದೂರು ಗ್ರಾಮದಲ್ಲಿ ಕೃಷಿಕನಾಗಿದ್ದು, ಊರಲ್ಲಿ ತನ್ನಷ್ಟಕ್ಕೆ ತಾನು ಭಾರ ಎತ್ತುವ ಕಸರತ್ತು ಮಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕುಷ್ಟಗಿ ಎಪಿಎಂಸಿ ಯಾರ್ಡನಲ್ಲಿ ಶ್ರಾವಣಮಾಸದ ಬನ್ನಿ ಮಹಾಂಕಾಳಿ ಪೂಜಾ ಕಾರ್ಯಕ್ರಮದಲ್ಲಿ ಈ ಯುವಕನ ಸಹಾಸ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಇದರಲ್ಲಿ ಸೈ ಎನಿಸಿಕೊಂಡಿದ್ದಾನೆ.

ದ್ಯಾಮಣ್ಣ ಕೊಡಗಲಿ ಶಕ್ತಿ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕುಷ್ಟಗಿಯ ಮಾಜಿ ಸೈನಿಕ ಭೀಮನಗೌಡ ಪಾಟೀಲ ಜಾಲಿಹಾಳ ಅವರು, ಈ ಯುವಕ ಯಾರ ನೆರವು ಇಲ್ಲದೇ, ಒಂದೂವರೆ ಕ್ವಿಂಟಲ್ ಭಾರವನ್ನು ಸಲೀಸಾಗಿ ಎತ್ತಿರುವುದು ಅಚ್ಚರಿಯಾಗಿದೆ. ಇಂತಹ ಯುವ ಪ್ರತಿಭೆಗೆ ಸರ್ಕಾರ ವೇಟ್ ಲಿಫ್ಟಿಂಗ್ ನಂತಹ ತರಭೇತಿ ನೀಡಿ ಕಾಮನವೆಲ್ತ, ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದರೆ ಮಾತ್ರ ಇಂತಹ ಪ್ರತಿಭೆಗಳು ಬೆಳಕಿಗೆ ಬರಲು ಸಾದ್ಯವಿದೆ ಎಂದರು.

Advertisement

—-ಮಂಜುನಾಥ ಮಹಾಲಿಂಗಪುರ (ಕುಷ್ಟಗಿ)

Advertisement

Udayavani is now on Telegram. Click here to join our channel and stay updated with the latest news.

Next