Advertisement
ಯಮನೂರಪ್ಪ ಬಸಪ್ಪ ಕಡಿವಾಲರ್ (35) ಮೃತ ದುರ್ದೈವಿ, ಯಮನೂರಪ್ಪನಿಗೆ ಕೆಲಸ ನೆಪದಲ್ಲಿ ಬಂದ ಯಮರೂಪಿ ತಮ್ಮ ಮಲ್ಲಪ್ಪ ಕಡಿವಾಲರ್ (30) ನೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ನಡೆಸಿ, ಸ್ನಾನದ ಕೊಠಡಿಯಲ್ಲಿ ಕಟ್ಟಿಗೆಯಿಂದ ಭೀಕರವಾಗಿ ಹೊಡೆದು, ಚಾಕುವಿನಿಂದ ಮನಬಂದಂತೆ ಇರಿದು ಕೊಂದು ಹಾಕಿದ್ದಾನೆ. ನಂತರ ಕೊಲೆ ನಡೆದ ಸ್ಥಳದಲ್ಲಿ ಕದಲದೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.
ಪಟ್ಟಣಚಿಂತಿ ಗ್ರಾಮದ ಬಸಪ್ಪ ಕಡಿವಾಲರ್ ಅವರಿಗೆ ನಾಲ್ವರು ಗಂಡು ಮಕ್ಕಳು 16 ಎಕರೆ ಜಮೀನು ಇತ್ತು. ಶರಣಪ್ಪ, ನಾಗಪ್ಪ, ಯಮನೂರಪ್ಪ, ಮಲ್ಲಪ್ಪ ಈ ನಾಲ್ವರು ಸಹೋದರರಲ್ಲಿ ಕೊನೆಯವ ಮಲ್ಲಪ್ಪ ಹೊರತು ಪಡಿಸಿ ಮೂವರು ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆರೋಪಿ ಮಲ್ಲಪ್ಪ ಮಾತ್ರ ಎರಡನೇ ಸಹೋದರ ನಾಗಪ್ಪನ ಜೊತೆಯಲ್ಲಿದ್ದ. ಇವರ ಪಿತ್ರಾರ್ಜಿತ 16 ಎಕರೆ ಆಸ್ತಿಯಲ್ಲಿ ತನಗೆ ಸೇರಬೇಕಾದ ಆಸ್ತಿ ಹಂಚಿಕೆಗೆ ಅಣ್ಣಾ ಯಮನೂರಪ್ಪ ಅವರನ್ನು ಒತ್ತಾಯಿಸುತ್ತಲೇ ಇದ್ದ. ಅಣ್ಣಾ ಯಮನೂರಪ್ಪ ತಮ್ಮ ಮಲ್ಲಪ್ಪನಿಗೆ ಮದುವೆಯಾಗಲಿ ನಂತರ ಆಸ್ತಿ ಹಂಚಿಕೆ ವಿಷಯ ಹೇಳುತ್ತನೇ ದಿನದೂಡುತ್ತಿದ್ದ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನನಾಗಿದ್ದ ಮಲ್ಲಪ್ಪ ಮೂರನೇ ಸಹೋದರ ಯಮನೂರಪ್ಪನನ್ನು ಚಾಕುವಿನಿಂದ ಇರಿದು ಕೊಂದು ಹಾಕಿದ್ದಾನೆ.
Related Articles
Advertisement
ಇದನ್ನೂ ಓದಿ: ಟಿಕೆಟ್ ಖರೀದಿಸಲು ನಿರಾಕರಣೆ: ಶಿಶುವನ್ನೇ ಬಿಟ್ಟು ಹೋದ ದಂಪತಿ.!