ಕುಷ್ಟಗಿ: ಸರ್ಕಾರದ ಕಟ್ಟು ನಿಟ್ಟಿನ ನಿಷೇಧದ ಹೊರತಾಗಿಯೂ ಗೋಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ನಾಲ್ವರು ಅರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ತಲೆಮರೆಸಿಕೊಂಡ ಇನ್ನಿಬ್ಬರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ದೋಟಿಹಾಳ ಗ್ರಾಮದವರಾದ ಪರಶುರಾಮ್ ಕರಿಯಪ್ಪ ಪೂಜಾರ, ಸಣ್ಣಪ್ಪ ಕರಿಯಪ್ಪ ಅಲಿಯಾಸ ಗಿಡ್ಡಪ್ಪ ಹೊಸಮನಿ,ಹನೀಪ್ ರಸೂಲ್ ಸಾಬ ಕಾಟೇವಾಡೆ, ಗುಲಾಮ್ ರಸೂಲ್ ದಸ್ತಗೀರಸಾಬ್ ಕಾಟೆವಾಡೆಯನ್ನು ಕರ್ನಾಟಕ ಜಾನುವಾರು, ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಆಗಿದ್ದೇನು?: ಜುಲೈ10 ರಂದು ಪೊಲೀಸರಿಗೆ ಖಚಿತ ಮಾಹಿತಿ ಮೇರೆಗೆ ದೋಟಿಹಾಳ ಗ್ರಾಮದಿಂದ ಮೂರು ಕಿ.ಮೀ.ದೂರದ ಅರಣ್ಯ ಪ್ರದೇಶದಲ್ಲಿ ಬಂಧಿಸಲಾದ ನಾಲ್ವರು ಆರೋಪಿಗಳು ಸೇರಿದಂತೆ 6 ಜನರು ಗೋಹತ್ಯೆ ಮಾಡುತ್ತಿರುವುದನ್ನು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಪಶು ಆಸ್ಪತ್ರೆಯ ವೈದ್ಯ ಗೋವು ವಧಾ ಸ್ಥಳಕ್ಕೆ ದಾಳಿ ನಡೆಸಿ ವಿಡಿಯೋ ಚಿತ್ರೀಕರಿಸಲಾಯಿತು. ಈ ಸಂದರ್ಭದಲ್ಲಿ 6 ಜನ ಆರೋಪಿಗಳು ಪರಾರಿಯಾಗಿದ್ದರು. ವಿಡಿಯೋ ಸಾಕ್ಷ ಆದರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಈ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಈ ಪ್ರಕರಣದಲ್ಲಿ40 ಕೆ.ಜಿ.ಗೋಮಾಂಸ ವಶಪಡಿಸಿಕೊಂಡಿದ್ದರು. ಪಶು ವೈದ್ಯಾಧಿಕಾರಿ ಡಾ. ಸಂತೋಷ ಕುದರಿ ನೀಡಿದ ದೂರಿನ ಮೇರೆಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.