Advertisement

ಬಿಹಾರದಲ್ಲಿ ಮಹಾ ಘಟಬಂಧನ ಸೇರಿಕೊಂಡ ಉಪೇಂದ್ರ ಕುಶ್ವಾಹ

05:29 PM Dec 20, 2018 | Team Udayavani |

ಪಟ್ನಾ : ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಬೇರ್ಪಟ್ಟ ಬಳಿಕ ಆರ್‌ಎಸ್‌ಎಲ್‌ಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಇಂದು ಗುರುವಾರ ಬಿಹಾರದಲ್ಲಿನ ಮಹಾ ಘಟಬಂಧನವನ್ನು ಸೇರಿಕೊಂಡರು.

Advertisement

ಬಿಜೆಪಿ ಜತೆಗಿನ ಸಂಬಂಧವನ್ನು ಆರ್‌ಎಸ್‌ಎಲ್‌ಪಿ ಈ ತಿಂಗಳ ಆದಿಯಲ್ಲಿ ಕಡಿದುಕೊಂಡ ಬಳಿಕ ಇದೀಗ ಕುಶ್ವಾಹ ಅವರು ಯುಪಿಎ ಘಟಕ ಪಕ್ಷಗಳೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡಿದ್ದಾರೆ. 

ಜನಸಾಮಾನ್ಯರ ಭಾವನೆಗಳು ಮತ್ತು ಆಶೋತ್ತರಗಳಿಗೆ ಸ್ಪಂದಿರುವ ಜನರನ್ನು ಸೇರಿಕೊಳ್ಳುವುದು ಅಗತ್ಯವೆಂದು ನಾನು ಭಾವಿಸಿದ್ದೇನೆ ಎಂಬುದಾಗಿ ಕುಶ್ವಾಹ ಇಂದು ಗುರುವಾರ ಹೇಳಿದರು.

ಕುಶ್ವಾಹ ಬಿಹಾರದಲ್ಲಿನ ಮಹಾ ಘಟಬಂಧನವನ್ನು ಸೇರಿಕೊಳ್ಳುವ ಮೂಲಕ ರಾಜ್ಯದಲ್ಲಿ ಎನ್‌ಡಿಎ ವಿರುದ್ಧದ ಶಕ್ತಿ ಇನ್ನಷ್ಟು ಬಲಗೊಳ್ಳುವುದೆಂದು ನಾವು ಭಾವಿಸಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಹೇಳಿದ್ದಾರೆ. ಕುಶ್ವಾಹ ಜತೆಗಿನ ಅಹ್ಮದ್‌ ಪಟೇಲ್‌ ಸಭೆಯಲ್ಲಿ ಆರ್‌ಜೆಡಿ ಯ ತೇಜಸ್ವಿ ಯಾದವ್‌ ಮತ್ತು ಹಿಂದುಸ್ಥಾನ್‌ ಆವಾಮ್‌ ಮೋರ್ಚಾ ನಾಯಕ ಜೀತನ್‌ ರಾಮ್‌ ಮಾಂಜಿ ಕೂಡ ಉಪಸ್ಥಿತರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next