Advertisement

ಕುಷ್ಟಗಿ: ಹುಣಸೆ ಬೀಜಕ್ಕೆ ಯೋಗ್ಯ ದರವಿದ್ರೂ, ಉತ್ಪನ್ನ ಕಡಿಮೆ!

05:58 PM Mar 20, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ: ರಾಜ್ಯದ ಹುಣಸೆ ಬೀಜದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿರುವ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹುಣಸೆ ಬೀಜಕ್ಕೆ ಯೋಗ್ಯ ಧಾರಣಿ ಇದ್ದಾಗ್ಯೂ ಉತ್ಪನ್ನ ಕಡಿಮೆಯಾಗಿದ್ದು, ಕಳೆದ ವರ್ಷಕ್ಕೆ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ಉತ್ಪನ್ನ ಮಾರುಕಟ್ಟೆಗೆ ಆಕರಣೆಯಾಗಿದೆ. ರಾಜ್ಯದಲ್ಲಿ ಕುಷ್ಟಗಿ ಸೇರಿದಂತೆ ಪಾವಗಡ ಕೂಡ್ಲಗಿ, ಬಳ್ಳಾರಿ, ಚಿಂತಾಮಣಿ ಹುಣಸೆ ಬೀಜದ ಪ್ರಮುಖ ಮಾರುಕಟ್ಟೆಗಳಾಗಿ ಗುರುತಿಸಿಕೊಂಡಿವೆ.

Advertisement

ಪ್ರತಿ ವರ್ಷವೂ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಗ್ರಹವಾಗುವ ಹುಣಸೆ ಬೀಜ ಮಹಾರಾಷ್ಟ್ರದ ವಿವಿಧ ಉದ್ಯಮಗಳಿಗೆ ಸಾಗಾಣಿಕೆ ಆಗುತ್ತಿದೆ. ಈ ಹುಣಸೆ ಬೀಜದ ಉತ್ಪನ್ನದಿಂದ ಆಯುರ್ವೇದದ ಔಷಧ, ಜವಳಿ ಉದ್ಯಮದಲ್ಲಿ ಅಗತ್ಯವಾಗುವ ಸ್ಟಾರ್ಚ್‌ ಸೇರಿದಂತೆ ಬಣ್ಣ ತಯಾರಿಕೆಗೆ ಈ ಹುಣಸೆ ಬೀಜದ ಉತ್ಪನ್ನ ಬೇಡಿಕೆಯಲ್ಲಿದ್ದರೂ, ಮಾರುಕಟ್ಟೆಯ ಧಾರಣಿ ಆಧರಿಸಿ ಉತ್ಪನ್ನ ಹೆಚ್ಚಿದಷ್ಟು ನಿರೀಕ್ಷಿತ ಆದಾಯ ತರಲಿದೆ. ಈ ಉತ್ಪನ್ನ ಹೆಚ್ಚಲು ಮಳೆಯನ್ನೇ ಅವಲಂಬಿಸಿರುವುದು ಗಮನಾರ್ಹವೆನಿಸಿದೆ.

ಹುಣಸೆ ಹಣ್ಣು ಪದಾರ್ಥವಾಗಿರುವ ಕಾರಣದಿಂದ ಇದು ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪ್ತಿಯ ಉತ್ಪನ್ನಗಳ
ಪಟ್ಟಿಯಲ್ಲಿ ಇಲ್ಲ. ಪ್ರತಿ ವರ್ಷ ಖಾಸಗಿ ಮಾರುಕಟ್ಟೆಯಲ್ಲಿ ಸೀಜನ್‌ವಾರು ನಡೆಯುತ್ತಿದೆ. ಆದರೆ ಹುಣಸೆ ಬೀಜದ ವಹಿವಾಟು ಮಾತ್ರ ಈ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಕಳೆದ ವರ್ಷ 6 ಸಾವಿರ ಟನ್‌ ಆವಕವಾಗಿತ್ತು ಆಗಿನ ದರ ಪ್ರತಿ ಕ್ವಿಂಟಲ್‌ ಗೆ
1,400 ರೂ.ದಿಂದ 1,600 ರೂ. ಇತ್ತು. ಪ್ರಸಕ್ತ ವರ್ಷದಲ್ಲಿ ಹುಣಸೆ ಬೀಜದ ದರ ಹೆಚ್ಚಿದ್ದಾಗ್ಯೂ ಉತ್ಪನ್ನ ಕಡಿಮೆಯಾಗಿದೆ. ಈ ಬಾರಿ ಕಳೆದ ಉತ್ಪನ್ನಕ್ಕಿಂತ ಅರ್ಧದಷ್ಟು ಎಂದರೆ 3ಸಾವಿರ ಟನ್‌ ನಿರೀಕ್ಷಿಸಲು ಸಾಧ್ಯವಿದೆ. ಇದರ ಧಾರಣಿ ಮಾತ್ರ ಪ್ರತಿ ಕ್ವಿಂಟಲ್‌ ಗೆ 1,800 ರೂ.ದಿಂದ 2,100 ರೂ. ಇದೆ. ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಈ ಉತ್ಪನ್ನಕ್ಕೆ 400ರೂ. ದಿಂದ 500
ರೂ. ಹೆಚ್ಚಿಗೆ ಸಿಗುತ್ತಿತ್ತು.

ಹುಣಸೆ ಬೀಜಕ್ಕೆ ಕುಷ್ಟಗಿ ಪ್ರಮುಖ ಮಾರುಕಟ್ಟೆಯಾಗಿದೆ ಆದರೀಗ ಹುಣಸೆ ಮರಗಳನ್ನು ಕಡಿಯುತ್ತಿರುವುದರಿಂದ
ಉತ್ಪನ್ನ ಕಡಿಮೆ ಆಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರು, ಹುಣಸೆ ಗಿಡ ಹತ್ತಿ ಹುಣಸೆ ಹಣ್ಣನ್ನು ಬಿಡಿಸುವ ಕೆಲಸಕ್ಕೆ ಹೆಚ್ಚಿನ ಕೂಲಿ ಕೇಳುತ್ತಿದ್ದು, ಇದರ ಹುಣಸೆ ಹಣ್ಣು, ಬೀಜ ಮಾರಾಟಗಾರರಿಗೆ ಹೆಚ್ಚುವರಿ ಹೊರೆಯಾಗಿದೆ.
ಗೂಳಪ್ಪ ಶಿವಶೆಟ್ಟರ್‌, ಹುಣಸೆ ಬೀಜ ಖರೀದಿದಾರ

ಹುಣಸೆ ಬೀಜ ಉತ್ಪನ್ನ ಕುಷ್ಟಗಿ ಎಪಿಎಂಸಿಗೆ ಆಕರಣೆ ಮೊದಲಿನಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಉತ್ಪನ್ನ ಕೆಲವು ಖರೀ ದಿದಾರರಿಗೆ ಸೀಮಿತವಾಗಿದೆ.
ಟಿ. ನೀಲಪ್ಪ ಶೆಟ್ಟಿ ,
ಕಾರ್ಯದರ್ಶಿ ಎಪಿಎಂಸಿ ಕುಷ್ಟಗಿ

Advertisement

ಹುಣಸೆ ಹಣ್ಣಿಗೆ ಪ್ರತಿ ಕ್ವಿಂಟಲ್‌ ಗೆ 7,200 ರೂ. ದಿಂದ 8ಸಾವಿರ ರೂ. ಧಾರಣಿ ಇದೆ. ಹುಣಸೆ ಬೀಜ ಪ್ರತಿ ಕ್ವಿಂಟಲ್‌ ಗೆ 2,100 ರೂ. ಇದೆ. ಮಳೆಗಾಲ ಕಡಿಮೆಯಾಗಿದ್ದರಿಂದ ಈ ಉತ್ಪನ್ನಕ್ಕೆ ಉತ್ತಮ ಬೆಲೆ ಇದೆ ಆದರೆ ಉತ್ಪನ್ನ ಕಡಿಮೆ ಬಂದಿದೆ.
ಯಮನೂರಪ್ಪ ಭಜಂತ್ರಿ,
ಹುಣಸೆ ಹಣ್ಣು, ಬೀಜ ಮಾರಾಟಗಾರ.

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next