Advertisement

Kushtagi: ಹಳಿಗೆ ಬಂದ ಹಳೆಯ ರೈಲ್ವೇ ಯೋಜನೆ; ಕುಷ್ಟಗಿ ಅಭಿವೃದ್ಧಿಗೆ ರೈಲು ಹೊಸ ಸೇರ್ಪಡೆ

10:47 AM Feb 21, 2024 | Team Udayavani |

ಕುಷ್ಟಗಿ: ಕುಷ್ಟಗಿಗೆ ಹೊಳೆ ಇಲ್ಲ.. ಹಳಿ ಇಲ್ಲ ಇನ್ನೇನ್ ಅಭಿವೃದ್ದಿಯಾಗುತ್ತೋ? ಎನ್ನುವ ಮಾತು ಜನ ಬಳಕೆಯಲ್ಲಿತ್ತು. ಇದೀಗ ಆ ಮಾತು ಸುಳ್ಳಾಗಿಸಿದ್ದು, ಕೊಪ್ಪಳ‌ ಸಂಸದ ಕರಡಿ ಸಂಗಣ್ಣ ಪ್ರಯತ್ನದ ಫಲವಾಗಿ ಕುಷ್ಟಗಿಗೆ ರೈಲ್ವೆ ಹಳಿಯೂ ಆಗಿದೆ.

Advertisement

ಇನ್ನೇನು ಕೆಲವೇ ದಿನಗಳಲ್ಲಿ ಗದಗ- ವಾಡಿ ಮಾರ್ಗದಲ್ಲಿ ರೈಲು ಸಂಚರಿಸುವುದು ಸನ್ನಿಹಿತವಾಗಿದೆ. ಕುಷ್ಟಗಿ ಜನ ಗದಗ, ಹುಬ್ಬಳ್ಳಿ ರೈಲಿನಲ್ಲಿ ಸಂಚರಿಸಲು ಕಾತುರರಾಗಿದ್ದಾರೆ.

ಹೌದು… ನೈಋತ್ಯ ರೈಲ್ವೇ ವಲಯದ ಗದಗ- ವಾಡಿ ಉದ್ದೇಶಿತ ರೈಲು ಮಾರ್ಗ ಗದಗ-ಕೊಪ್ಪಳ ಉದ್ದೇಶಿತ ಬ್ರಾಡ್ ಗೇಜ್ ರೈಲು ಮಾರ್ಗ ಗದಗದಿಂದ ತಳಕಲ್‌ವರೆಗೆ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್‌ನಿಂದ ಕುಷ್ಟಗಿವರೆಗಿನ 57 ಕಿ.ಮೀ. ಪೈಕಿ ಹನುಮಪುರದವರೆಗೆ ಕೆಲಸ ಮುಗಿದಿದೆ. ಕುಷ್ಟಗಿವರೆಗಿನ ಮಾರ್ಗ ಮಾರ್ಚ್‌ 24ರೊಳಗೆ ಸಂಪೂರ್ಣ ಮುಗಿಯಲಿದೆ. ಬಳಿಕವಷ್ಟೇ  ರೈಲು ಸಂಚಾರ ಆರಂಭಿಸಲಿದೆ.

ತಳಕಲ್, ಕುಕನೂರು, ಯಲಬುರ್ಗಾ, ಸಂಗನಾಳ ಲಿಂಗಲಬಂಡಿವರೆಗೆ ಪ್ರಾಯೋಗೀಕ ರೈಲು ಸಂಚರಿಸಿದೆ. ಕೆಲವು ದಿನಗಳಿಂದ ಹನುಮಾಪುರದಿಂದ ಲಿಂಗಲಬಂಡಿ, ಕುಷ್ಟಗಿ ಪಟ್ಟಣದ ಸಂತ ಶಿಶುನಾಳ ಷರೀಫ್ ನಗರದವರೆಗೂ ಹಳಿ ಜೋಡಣೆ ಕೆಲಸ ಆಗಿದೆ. ಸದ್ಯ ಕುಷ್ಟಗಿ ಪಟ್ಟಣದವರೆಗೆ ರೈಲ್ವೆ ಹಳಿಗಳ ಜೋಡಣೆ ಕೆಲಸ ವೇಗದಲ್ಲಿ ಸಾಗಿದೆ.

ಕಳೆದ ಮಂಗಳವಾರ ರೈಲ್ವೆ ಇಂಜಿನ್ ಮೂಲಕ ಕುಷ್ಟಗಿ ರೈಲ್ವೆ ನಿಲ್ದಾಣವರೆಗೂ ಬಿಲಾಯಿ ಉಕ್ಕು‌ ಕಾರ್ಖನೆಯಲ್ಲಿ ಸಿದ್ದಗೊಂಡ 26 ಮೀಟರ ಉದ್ದ ಇರುವ ಹೊಸ ರೈಲ್ವೆ ಹಳಿಗಳ ಜೋಡಣೆ ಹಾಗೂ ರೈಲ್ವೆ ಟ್ರ್ಯಾಕ್ ಚಕೀಂಗ್ ಕಾರ್ಯ ನಡೆದಿದೆ.

Advertisement

ಕುಷ್ಟಗಿ ಪಟ್ಟಣಕ್ಕೆ ಪ್ರ ಪ್ರಥಮ ಬಾರಿಗೆ ರೈಲಿನ ಇಂಜಿನ್ ಹಾರ್ನ್ ಮಾಡುತ್ತ ಬಂದಿರುವುದು ಕುಷ್ಟಗಿ ಪಟ್ಟಣದ ಜನತೆಗೆ ಸಂತಸ ಉಕ್ಕಿದೆ. ರೈಲ್ವೇ ಟ್ರ್ಯಾಕ್ ಚಕಿಂಗ್ ಗೆ ರೈಲ್ವೇ ಇಂಜಿನ್ ಬರುತ್ತಿದ್ದಂತೆ ಜನ ಮೊಬೈಲ್ ಸೆಲ್ಪಿಗೆ ಮುಗಿ ಬಿದ್ದು ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ‌ ಜಾಲತಾಣದಲ್ಲಿ ‌ಅಪ್ಲೋಡ್ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ಇದೀಗ ಶತಮಾನದ ಕನಸು ನನಸಾಗುವ ಘಳಿಗೆಯಲ್ಲಿ ಸಂಸದ ಕರಡಿ ಸಂಗಣ್ಣ ಅವರ ಇಚ್ಚಾಶಕ್ತಿಯಿಂದ ಇದು ಸಾದ್ಯ ಎಂದು ನಿರೂಪಿತವಾಗಿದೆ.

-ಮಂಜುನಾಥ ಮಹಾಲಿಂಗಪುರ (ಕುಷ್ಟಗಿ)

Advertisement

Udayavani is now on Telegram. Click here to join our channel and stay updated with the latest news.

Next