Advertisement

Kushtagi: ಟಿಪ್ಪರ್ ವಾಹನಗಳ ಸಂಚಾರ; ಜನ ಸಾಮಾನ್ಯರಿಗೆ ಜೀವ ಭಯ

01:16 PM Nov 09, 2023 | Team Udayavani |

ಕುಷ್ಟಗಿ: ಪಟ್ಟಣದ ಹೊರವಲಯದ ಗದಗ- ವಾಡಿ ರೈಲ್ವೇ ಕಾಮಗಾರಿಗೆ ಓವರ್ ಲೋಡಿಂಗ್ ಮರಂ ಮಣ್ಣು ಸಾಗಾಟ ಭರದಿಂದ ಸಾಗಿರುವುದು ಒಂದೆಡೆಯಾದರೆ ಮರಂ‌ ಮಣ್ಣು ಹೊತ್ತು ತರುವ ಟಿಪ್ಪರ್ ವಾಹನಗಳಿಗೆ ಲಂಗು ಲಗಾಮಿಲ್ಲದ ಸಂಚಾರ ಜನ ಸಾಮಾನ್ಯರಿಗೆ ಜೀವ ಭಯ ಸೃಷ್ಟಿಸಿದೆ.

Advertisement

ಗದಗ-ವಾಡಿ ರೈಲ್ವೇ ಕಾಮಗಾರಿಗೆ ಪೂರಕವಾಗಿರುವ ಮರಂ ಮಣ್ಣನ್ನು ಶರವೇಗದಲ್ಲಿ ಹೊತ್ತು ಸಾಗುವ ಟಿಪ್ಪರ್ ಗಳು ಲೋಡಿಂಗ್, ಅನ್ ಲೋಡಿಂಗ್ ನಲ್ಲಿ ನಿರತವಾಗಿವೆ. ಲೋಡಿಂಗ್ ಹೆಚ್ಚಿಸಿಕೊಳ್ಳಲು ಟಿಪ್ಪರ್ ವಾಹನ ಚಾಲಕರು ಸಂಚಾರ ನಿಯಮಗಳ‌ ಲಂಗಾ-ಲಗಾಮಿನಲ್ಲದೇ ಚಲಾಯಿಸುತ್ತಿದ್ದಾರೆ.

ಕಳೆದ ಅಕ್ಟೋಬರ್ 20 ರಂದು ವಾಯುವಿಹಾರಿಗಳ ಮೇಲೆ ಟಿಪ್ಪರ್ ಹರಿದು ದೊಡ್ಡಪ್ಪ ಕಂಚಿ ಎಂಬವರು ದುರ್ಮರಣಕ್ಕೀಡಾಗಿದ್ದರು. ಶೇಖಪ್ಪ ಅಬ್ಬಿಗೇರಿ ಅವರಿಗೆ ಗಾಯವಾಗಿತ್ತು.

ಈ ಪ್ರಕರಣ ಮಾಸುವ ಕೆಲ ದಿನಗಳಲ್ಲಿ ಕುಷ್ಟಗಿ ಡಂಬರ್ ಓಣಿಯ ಮುತ್ತಣ್ಣ ಹಕ್ಕಲ್ ಎಂಬವರು ತಮ್ಮ ತಾಯಿಯೊಂದಿಗೆ ಬೈಕ್ ನಲ್ಲಿ ಜಮೀನಿಗೆ ಹೋಗುವಾಗ ಟಿಪ್ಪರ್ ವಾಹನವೊಂದು ಮೇಲೆ ಬಂದು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದರು.

ಈ ರಸ್ತೆಯಲ್ಲಿ ಟಿಪ್ಪರ್ ವಾಹನಗಳಿಂದ ಒಂದಲ್ಲ ಒಂದು ಅವಘಡಗಳು ‌ನಡೆಯುತ್ತಿವೆ. ಅಲ್ಲದೇ ಈ ವಾಹನಗಳ ಓಡಾಟದಿಂದ ಕುಷ್ಟಗಿ- ಕೊಪ್ಪಳ ರಸ್ತೆ ಹದಗೆಟ್ಟಿದೆ. ಟಿಪ್ಪರ್ ವಾಹನ ಚಾಲಕರು ನಿದ್ದೆಗೆಟ್ಟು ಚಲಾಯಿಸುತ್ತಿದ್ದು, ನಿದ್ದೆ ನಿಯಂತ್ರಿಸಲು ಮಾದಕ ಹಾಗೂ ಮದ್ಯ ಸೇವನೆಯಿಂದ ಈ ರೀತಿ ಚಾಲನೆ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ‌ ಅನುಮಾನ ವ್ಯಕ್ತವಾಗಿದೆ.

Advertisement

ಟಿಪ್ಪರ್ ವಾಹನಗಳ ಓಡಾಟದ ಸಾರ್ವಜನಿಕ ಸ್ಥಳಗಳಲ್ಲಿ ವೇಗದ ಮಿತಿ ನಿಯಂತ್ರಣಕ್ಕೆ ಕ್ರಮ ಜರುಗಿಸಿ ಸಂಚಾರ ನಿಯಮಗಳ‌ ಜಾಗೃತಿ ಮೂಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಈ ಕುರಿತು ಮುತ್ತಣ್ಣ ಹಕ್ಕಲ್ ಅವರು, ಟಿಪ್ಪರ್ ವಾಹನಗಳ‌ ಹದ್ದು ಮೀರಿ ಓಡಾಟದ ಬಗ್ಗೆ ದೂರು ನೀಡಿದ್ದು ಎಲ್ಲಾ ಟಿಪ್ಪರ್ ಚಾಲಕರನ್ನು ಕರೆಸಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next