ಕುಷ್ಟಗಿ: ತಾಲೂಕಿನ ಹನುಮನಾಳ ಭಾಗದಲ್ಲಿ ಕೇವಲ ನಾಲ್ಕು ತಾಸಿನಲ್ಲಿ 152.08 ಮೀ.ಮೀ.ನಷ್ಟು ಮಳೆಯಾಗಿದ್ದು, ಈ ಮಳೆ ಹುಬ್ಬೇರಿಸುವಂತೆ ಮಾಡಿದೆ.
ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಮಳೆಯ ನಿರೀಕ್ಷೆ ಇದ್ದಾಗ್ಯೂ ಮಳೆಯಾಗದೆ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೇನು ಬರ ಘೋಷಣೆ ಸಂದರ್ಭದಲ್ಲಿ ತಾಲೂಕಿನಲ್ಲಿ ಹಲವೆಡೆ ಮಳೆಯಾಗಿದೆ.
ಈ ವರ್ಷದ ಹನುಮನಾಳದಲ್ಲಿ ದಾಖಲೆಯ ಮಳೆ ಯಾಗಿರುವುದು ಗಮನಾರ್ಹವೆನಿಸಿದೆ. ಕಳೆದ ರಾತ್ರಿ 10 ಗಂಟೆಯಿಂದ ಪ್ರಾರಂಭವಾದ ಮಳೆ ತಡರಾತ್ರಿ 10 ಗಂಟೆಯವರೆಗೂ ಸುರಿಯಿತು. ಈ ಮಳಯಿಂದ 20 ಕ್ಕೂ ಮನೆಗಳು ಕುಸಿತ ಕಂಡಿದ್ದು ಹಾನಿಯ ಪ್ರಮಾಣ ಹೆಚ್ಚಾಗುವ ಸಾದ್ಯತೆ ಇದೆ.
ಏಕಾಏಕಿ ಸುರಿದ ಕುಂಭ ದ್ರೋಣ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ಜಮೀನುಗಳ ಒಡ್ಡುಗಳು ಒಡೆದಿದ್ದು ಬೆಳೆ ಹಾನಿಯಾಗಿದೆ.
ತಾಲೂಕಿನಲ್ಲಿ ಈ ವರ್ಷದ ಅತಿ ಹೆಚ್ಚು ಮಳೆ ಹನುಮನಾಳ ಪ್ರದೇಶದಲ್ಲಿ ಆಗಿದ್ದು, ದೋಟಿಹಾಳದಲ್ಲಿ 76.2 ಮೀ.ಮೀ. ಹನುಮಸಾಗರದಲ್ಲಿ 45 ಮೀ.ಮೀ. ಕುಷ್ಟಗಿ 38.2 ಮೀ.ಮೀ., ತಾವರಗೇರಾ 29 ಮೀ.ಮೀ. ಹಾಗೂ ಕಿಲ್ಲಾರಹಟ್ಟಿಯಲ್ಲಿ 12 ,ಮೀ.ಮೀ ನಷ್ಟು ಮಳೆ ಆಗಿದೆ. ಕಳೆದ ತಡ ರಾತ್ರಿ ಮಳೆಗೆ ತುಗ್ಗಲದೋಣಿ ಯಲ್ಲಿ10 ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು ಹನುಮನಾಳ ಸೇರಿದಂತೆ ಮನೆಗಳು ಕುಸಿದಿದೆ ಎಂದು ಕಂದಾಯ ನಿರೀಕ್ಷಕ ರಝಾಕ್ ಮಾಹಿತಿ ನೀಡಿದ್ದಾರೆ.