Advertisement

ಕುಷ್ಟಗಿ: ಅಪಾಯದ ವಿದ್ಯುದ್ದಿಪದ ಕಂಬ ತೆರವುಗೊಳಿಸಿದ ಪುರಸಭೆ

11:31 AM Mar 29, 2023 | Team Udayavani |

ಕುಷ್ಟಗಿ: ಸಂಭವನೀಯ ಅಪಾಯಕ್ಕೆ ಎಡೆ ಮಾಡಿದ್ದ ರಸ್ತೆ ವಿಭಜಕದ ವಿದ್ಯುದ್ದೀಪದ ಕಂಬವನ್ನು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ‌ ಕುಮಾರ್ ತಕ್ಷಣ‌‌ ಸ್ಪಂದಿಸಿ ತೆರವುಗೊಳಿಸಿದ್ದಾರೆ

Advertisement

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಅಂಬೇಡ್ಕರ್ ವೃತ್ತದಿಂದ ಕುಷ್ಟಗಿ ಮುಖ್ಯರಸ್ತೆ ವಿಭಜಕದಲ್ಲಿದ್ದ  ವಿದ್ಯುದ್ದೀಪದ ಕಂಬ ತುಕ್ಕು ಹಿಡಿದು ಬಾಗಿತ್ತು. ಬಿರುಗಾಳಿ ಇಲ್ಲವೇ ವಾಹನ ಸ್ವಲ್ಪ ಡಿಕ್ಕಿಯಾದರೆ ಸಾಕು ಬೀಳುವ ಸಂಭವ ಇತ್ತು. ಸುಮಾರು ಇಪ್ಪತ್ತು ವರ್ಷಗಳ ಹಳೆಯ ಕಬ್ಬಿಣ ಕಂಬ ಬಾಗಿದ್ದರೂ ಪುರಸಭೆ ಸರಿಪಡಿಸಲು ಮುಂದಾಗಿರಲಿಲ್ಲ.

ಮಾ.29 ರಂದು ಉದಯವಾಣಿ ವೆಬ್ ನ್ಯೂಸ್‌ ನಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ  ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಮಾರ್ಚ್ 29 ರ ಮುಂಜಾನೆ ಅಪಾಯದ ಸ್ಥಿತಿಯಲ್ಲಿದ್ದ ಕಂಬವನ್ನು ಪುರಸಭೆ ಪೌರ ಕಾರ್ಮಿಕರ ಸಹಾಯದಿಂದ ತೆರವುಗೊಳಿಸಿದ್ದಾರೆ.

ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಅವರ ಈ ಕ್ರಮದಿಂದ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next