ಕುಷ್ಟಗಿ: ಕುಷ್ಟಗಿ ತಾಲೂಕು ರೈತ ಸಂಘದ ಅಧ್ಯಕ್ಷರಾಗಿದ್ದ ನಿವೃತ್ತ ಅರಣ್ಯಾಧಿಕಾರಿ ಮಲ್ಲಪ್ಪ ಬಸಪ್ಪ ಹವಲ್ದಾರ ಲೋ ಬಿಪಿ ಸಮಸ್ಯೆಯಿಂದ ಜ.20 ರ ಶುಕ್ರವಾರ ಬೆಳ್ಳಿಗ್ಗೆ ನಿಧನರಾಗಿದ್ದಾರೆ.
ಮೂಲತಃ ತಾಲೂಕಿನ ಕಾಟಾಪೂರ ಗ್ರಾಮದವರಾಗಿದ್ದ ಮಲ್ಲಪ್ಪ ಅವರು ವೃತ್ತಿಯಿಂದ ಅರಣ್ಯಾಧಿಕಾರಿಯಾಗಿ ಸೇವೆಯಲ್ಲಿದ್ದರು.
ನಿವೃತ್ತಿ ನಂತರ ಕುಷ್ಟಗಿ ನಿವಾಸಿಯಾಗಿ ಕರ್ನಾಟಕ ರೈತ ಸಂಘದಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಕುಷ್ಟಗಿ ತಾಲೂಕು ರೈತ ಸಂಘದ ಕುಷ್ಟಗಿ ಘಟಕದ ಅಧ್ಯಕ್ಷರಾಗಿದ್ದರು. ಕಳೆದ ಜ.16 ರಂದು ಶಿರಗುಂಪಿ ಗ್ರಾಮ ಘಟಕ ಕಾರ್ಯಕ್ರಮದ ಬಳಿಕ ಅವರಿಗೆ ವಾಂತಿ ಕಾಣಿಸಿಕೊಂಡಿತ್ತು.
ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಲೋ ಬಿಪಿಯಿಂದ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮಲ್ಲಪ್ಪ ಹವಲ್ದಾರ ಅಕಾಲಿಕ ನಿಧನಕ್ಕೆ ಕರ್ನಾಟಕ ರೈತ ಸಂಘ, ನಿವೃತ್ತ ನೌಕರರ ಸಂಘ ಸಂತಾಪ ವ್ಯಕ್ತಪಡಿಸಿವೆ.
Related Articles
ಈ ಕುರಿತು ಜಿಲ್ಲಾಧ್ಯಕ್ಷ ನಜೀರಸಾಬ್ ಮೂಲಿಮನಿ ಪ್ರತಿಕ್ರಿಯಿಸಿ ಮಲ್ಲಪ್ಪ ಹವಲ್ದಾರ ಅರಣ್ಯಾಧಿಕಾರಿ ನಿವೃತ್ತ ನಂತರ ರೈತ ಸಂಘದ ಹೋರಾಟದಲ್ಲಿ ಮುಂಚೂಣಿಯಾಗಿದ್ದರು. ರೈತ ಸಂಘಕ್ಕೆ ಅವರ ಸೇವೆ ಇರುವಾಗಲೇ ಅಕಾಲಿಕ ನಿಧನರಾಗಿರುವುದು ರೈತ ಸಂಘದ ಶಕ್ತಿ ಕುಂದಿದೆ ಎಂದು ಕಂಬನಿ ಮಿಡಿದಿದ್ದಾರೆ.