Advertisement

ಸಿಸಿ ರಸ್ತೆ ಕಾಮಗಾರಿಗೆ ಸ್ಥಳೀಯರ ಅಡ್ಡಿ

04:02 PM Mar 11, 2020 | Naveen |

ಕುಷ್ಟಗಿ: ಪಟ್ಟಣದ 13ನೇ ವಾರ್ಡ್ ನಲ್ಲಿ ಸುಸ್ಥಿತಿಯಲ್ಲಿರುವ ಸಿಸಿ ರಸ್ತೆ ಮೇಲೆ ಪುನಃ ಸಿಸಿ ರಸ್ತೆ ಕಾಮಗಾರಿಗೆ ಸ್ಥಳೀಯರು ಅಡ್ಡಿಪಡಿಸಿ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದರು.

Advertisement

ಪಟ್ಟಣದ 12ನೇ ವಾರ್ಡ್‌ನಲ್ಲಿ ಕೈಗೊಂಡಿದ್ದ ಕಾಮಗಾರಿಗೆ ಇದೇ ರೀತಿ ಸ್ಥಳೀಯರಿಂದ ವಿರೋಧವ್ಯಕ್ತವಾಗಿತ್ತು. ಅದನ್ನು ಅಲ್ಲಿಗೆ ಕೈ ಬಿಟ್ಟಿದ್ದ ಗುತ್ತಿಗೆದಾರರು ಮಂಗಳವಾರ 13ನೇ ವಾರ್ಡ್‌ನಲ್ಲಿ ಸ್ಮಶಾನದ ಸಂಪರ್ಕ ರಸ್ತೆ ಕಾಮಗಾರಿ ದಿಢೀರ್‌ ಆರಂಭಿಸಿದ್ದರು.

ಸುಸ್ಥಿತಿಯಲ್ಲಿದ್ದ ರಸ್ತೆ ಮೇಲೆ ಪುನಃ ಸಿಸಿ ರಸ್ತೆ ಆರಂಭಿಸಿದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ವಾರ್ಡ್ನ ನಾಗರಾಜ ಭೋವಿ, ಅಗತ್ಯ ಇಲ್ಲದ ಕಾಮಗಾರಿ ಇಲ್ಲೇಕೆ ಎಂದು ಪ್ರಶ್ನಿಸಿದರು.

12ನೇ ವಾರ್ಡ್‌ನಲ್ಲಿ ಯಾವುದೇ ಎಸ್ಟಿಮೇಟ್‌ ಇಲ್ಲದ್ದರಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಾಮಗಾರಿಗೆ ತಡೆಯೊಡ್ಡಿದ್ದರು. ಇದರಿಂದ ಸಿಟ್ಟಿಗೆದ್ದ ಪುರಸಭೆ ಸದಸ್ಯ ಸಯ್ಯದ್‌ ಖಾಜಾ ಮೈನುದ್ದೀನ್‌ ಮುಲ್ಲಾ ಅವರಿಂದ ನಾಗರಾಜ ಭೋವಿ ಅವರ ಮೇಲೆ ಹಲ್ಲೆಗೆ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.

ಕಳಪೆ ಕಾಮಗಾರಿ ಕಣ್ಣೆದುರೇ ನಡೆದಿರುವಾಗ ನಾನೇಕೆ ಸುಮ್ಮನಿರಲಿ? ಅಗತ್ಯ ಇರುವ ಕಡೆಗೆ ಕಾಮಗಾರಿ ಕೈ ಬಿಟ್ಟು ಸರ್ಕಾರದ ಅನುದಾನ ದೋಚಲು ತರಾತುರಿಯಲ್ಲಿ ಇಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪುರಸಭೆ ಸದಸ್ಯ ಸಯ್ಯದ್‌ ಖಾಜಾ ಮೈನುದ್ದೀನ್‌ ಮುಲ್ಲಾ ಅವರಿಗೆ ಸಾತ್‌ ನೀಡಿದ್ದಾರೆ ಎಂದು ನಾಗರಾಜ ಭೋವಿ ಆರೋಪಿಸಿದರು.

Advertisement

ಈ ಪ್ರಕರಣದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯ ಸಯ್ಯದ್‌ ಖಾಜಾ ಮೈನುದ್ದಿನ್‌ ಮುಲ್ಲಾ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡುವುದಾಗಿ ಭೋವಿ ತಿಳಿಸಿದ್ದಾರೆ.

ಕಾಮಗಾರಿ ಗುತ್ತಿಗೆದಾರ ರೆಹಮಾನ್‌ ದೊಡ್ಡಮನಿ ಅವರು ನಿರ್ವಹಿಸಬೇಕಾದ ಕಾಮಗಾರಿಯನ್ನು ಪುರಸಭೆ ಸದಸ್ಯ ಸಯ್ಯದ್‌ ಖಾಜಾ ಮೈನುದ್ದೀನ್‌ ಮುಲ್ಲಾ ನಿರ್ವಹಿಸುತ್ತಿದ್ದಾರೆ. 13ನೇ ವಾರ್ಡ್‌ ಸದಸ್ಯೆ ಪುತ್ರ ಶೌಕತ್‌ ತಮ್ಮ ವಾರ್ಡ್‌ನಲ್ಲಿ ಕಾಮಗಾರಿಗೆ ಅನುವು ಮಾಡಿದ್ದರು.

ಪುನಃ ಕಾಮಗಾರಿ ಮಾಡಿದರೆ ಸಿಸಿ ರಸ್ತೆ ಮತ್ತಷ್ಟು ಎತ್ತರವಾಗಲಿದೆ. ಜನ ಸಂಚಾರಕ್ಕೆ ತೊಂದರೆಯಾಗಲಿದೆ. ಯಥಾಸ್ಥಿತಿಯೇ ಇರಲಿ ಎನ್ನುವುದು ಸ್ಥಳೀಯರ ವಾದ.

ಪುರಸಭೆ ಸದಸ್ಯ ಸಯ್ಯದ್‌ ಖಾಜಾ ಮೈನುದ್ದೀನ್‌ ಮುಲ್ಲಾ 1 ಕೋಟಿ ರೂ. ಮೊತ್ತದ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲವೂ ಕಳಪೆ, ಅವೈಜ್ಞಾನಿಕವಾಗಿದೆ. ಇದನ್ನು ಪ್ರಶ್ನಿಸಿದವರ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಜಾತಿ ಪೊಲೀಸ್‌ ಠಾಣೆಗೆ ದೂರು ನೀಡುವೆ.
ನಾಗರಾಜ ಭೋವಿ,
ವಾರ್ಡ್‌ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next