Advertisement

Kushtagi; ಶಾರ್ಟ್ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ; ಅಪಾರ ನಷ್ಟ

09:33 PM Jun 26, 2023 | Team Udayavani |

ಕುಷ್ಟಗಿ:‌ಕುಷ್ಟಗಿ ತಾಲೂಕಿನ ಯರಗೇರಾ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ‌ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು ನಗದು, ಆಭರಣ, ದಾಖಲೆಗಳು ಧಾನ್ಯ ಬಟ್ಟೆ ಬರೆ ಸುಟ್ಟು ಕರಕಲಾಗಿದ್ದು ಅಪಾರ‌ ಪ್ರಮಾಣದಲ್ಲಿ ಹಾನಿ‌ ಸಂಭವಿಸಿದೆ.

Advertisement

ದೊಡ್ಡಪ್ಪ ಗಚ್ಚಿನಮನಿ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಜಂತೀ ಮನೆಯಾಗಿದ್ದರಿಂದ ಹಾನಿಯ ಪ್ರಮಾಣ ಹೆಚ್ಚಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಮನೆಯಲ್ಲಿನ ಚಿನ್ನ, ನಗದು, ದವಸಧಾನ್ಯ, ಬಟ್ಟೆಗಳು, ಟಿವಿ ಸೇರಿದಂತೆ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿ ನಂದಿಸುವ ಕಾರ್ಯಚರಣೆ ನಡೆದಿದ್ದು ಬೆಂಕಿ‌ ತಹಬಂದಿದೆ. ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next