ಕುಷ್ಟಗಿ: ಈ ಬಾರಿ ನಿರೀಕ್ಷೆಯಂತೆ ಮಳೆಯಾಗುತ್ತಿದ್ದಂತೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅರಣ್ಯೀಕರಣಕ್ಕಾಗಿ 63,030 ಸಸಿಗಳನ್ನು ನೆಡಲು ಮುಂದಾಗಿದೆ. ಡೀಮ್ಡ್ ಆರಣ್ಯ ಸೇರಿದಂತೆ ಕಾಯ್ದಿಟ್ಟ ಅರಣ್ಯ ಪ್ರದೇಶ, ರಸ್ತೆ ಬದಿ ನೆಡುತೋಪುಗಳಲ್ಲಿ ಆದ್ಯತೆಯಾಗಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಮಳೆಯಾದ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಲ್ಲೀನರಾಗಿದ್ದಾರೆ.
Advertisement
ಪರಿಸರ ಸಂರಕ್ಷಣೆ ಹಾಗೂ ಸಮರ್ಪಕ ಮಳೆಗಾಗಿ ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕೆನ್ನುವ ಉದ್ದೇಶದೊಂದಿಗೆ ಈ ಬಾರಿ ಮೇ ತಿಂಗಳ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗಿದೆ. ಜೂನ್ ತಿಂಗಳ ಆರಂಭವಾಗುತ್ತಿದ್ದಂತೆ ಮುಂಗಾರು ಹಂಗಾಮಿನಲ್ಲಿ ಸಸಿ ನೆಡುವ ಕಾರ್ಯಕ್ಕೆ ವೇಗ ಸಿಕ್ಕಿದೆ.
Related Articles
750 ಗಿಡ, ವೆಂಕಟಾಪೂರ ಕ್ರಾಸ್ ರಸ್ತೆ ಬದಿ 500 ಹಾಗೂ ಹನುಮನಾಳ-ಮಾಲಗಿತ್ತಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 2,500 ಸಸಿ ನಾಟಿ ಮಾಡಲಾಗಿದೆ.
Advertisement
2024-25ನೇ ಸಾಲಿಗೆ 100 ಹೆಕ್ಟೇರ್‌ನಲ್ಲಿ ಸಸಿ ಬೆಳೆಸಲು ಗುರಿ ಹೊಂದಲಾಗಿದೆ. ಈ ಕುರಿತು ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿದೆ. ಗುಡ್ಡಗಾಡು ಪ್ರದೇಶ ಹಾಗೂ ಅರಣ್ಯ ಪ್ರದೇಶದ ಒತ್ತುವರಿ ಜಮೀನುಗಳಲ್ಲಿ ಗಿಡ ನೆಡಲಾಗುವುದು. ಸಾರ್ವಜನಿಕರು, ರೈತರು, ಸಂಘ ಸಂಸ್ಥೆ ಅವರು ಗಿಡ ನೆಡುವುದಷ್ಟೇ ಅಲ್ಲ ವರ್ಷದುದ್ದಕ್ಕೂ ಕಾಳಜಿ ವಹಿಸಬೇಕು ಎನ್ನುವುದು ಅರಣ್ಯ ಇಲಾಖೆಯ ಕಾಳಜಿ.*ರಿಯಾಜ್ ಗನಿ,
ಪ್ರಭಾರ ಅರಣ್ಯಾಧಿಕಾರಿ ಪ್ರಾದೇಶಿಕ ವಲಯ ಕುಷ್ಟಗಿ *ಮಂಜುನಾಥ ಮಹಾಲಿಂಗಪುರ