Advertisement

Kushtagi: ಕಂಟೈನರ್ ಕ್ಯಾಬಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್

07:52 AM Aug 29, 2023 | Team Udayavani |

ಕುಷ್ಟಗಿ: ಪಟ್ಟಣದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ‌ ಎಸ್ ಬಿ‌ ಪೆಟ್ರೋಲ್ ಬಂಕ್ ಬಳಿ ಚಲಿಸುತ್ತಿದ್ದ ಕಂಟೈನರ್ ಕ್ಯಾಬಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಧಗ ಧಗನೇ ಹೊತ್ತಿ ಉರಿದಿದೆ.

Advertisement

ಟೋಯೊಟಾ ಕಂಪನಿಯ ಕಾರುಗಳನ್ನು ಹೇರಿಕೊಂಡು ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ‌ನಲ್ಲಿ ಇದ್ದಕ್ಕಿದ್ದಂತೆ ಕ್ಯಾಬಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊಗೆಯಾಡುತ್ತಿರುವುದು ಚಾಲಕನ‌ ಗಮನಕ್ಕೆ ಬಂದಿದೆ.

ಕೂಡಲೇ ಕಂಟೈನರ್ ನಿಲ್ಲಿಸುತ್ತಿದ್ದಂತೆ ಬೆಂಕಿ‌ ಇಡೀ ಕ್ಯಾಬೀನ್ ಆವರಿಸಿದ ಸಂದರ್ಭದಲ್ಲಿ ಗಾಳಿಯೂ‌ ಇದ್ದಿದ್ದರಿಂದ ಬೆಂಕಿಯ ತೀವ್ರತೆ ಜಾಸ್ತಿಯಾಗಿತ್ತು. ಕೂಡಲೇ ಅಗ್ನಿಶಾಮಕ ವಾಹನ ದೌಡಾಯಿಸಿ ಬೆಂಕಿ ನಿಯಂತ್ರಿಸಿತು.

ಠಾಣಾಧಿಕಾರಿ ನೇತೃತ್ವದಲ್ಲಿ 15 ನಿಮಿಷಗಳ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಸಿಬ್ಬಂದಿಗಳು ಜೀವದ ಹಂಗು ತೊರೆದು ನಿರ್ವಹಿಸಿದರು. ನಾವು ಬರುವುದು ಸ್ವಲ್ಪ ತಡವಾಗಿದ್ದರೆ ಡೀಸಲ್ ಟ್ಯಾಂಕ್ ಹಾಗೂ ಟೈರ್ ಸ್ಪೋಟಿಸುವ ಸಾದ್ಯತೆ ಇತ್ತು ಎಂದು ಠಾಣಾಧಿಕಾರಿ ಎನ್ ರಾಜು ಮಾಹಿತಿ‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next