ಕುಷ್ಟಗಿ: ತಮ್ಮನನ್ನು ಕೊಲೆ ಮಾಡಿದರೆ 10 ಎಕರೆ ಪಿತ್ರಾರ್ಜಿತ ಆಸ್ತಿ ತನಗೆ ದಕ್ಕುತ್ತದೆ ಎಂಬ ದುರಾಸೆಗೆ ಬೆನ್ನಿಗೆ ಹುಟ್ಟಿದ ತಮ್ಮನನ್ನು ಅಣ್ಣ ತನ್ನ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದೆ.
ಆ.20 ರಂದು ಹನುಮನಾಳದಲ್ಲಿ ಪ್ರಕರಣದಲ್ಲಿ ಕೊಲೆಯಾದ ಮಂಜುನಾಥ ದ್ಯಾಮಣ್ಣ ಜಿಗರಿ, ಆತನ ಅಣ್ಣ ರಂಗಪ್ಪ ದ್ಯಾಮಣ್ಣ ಚಿಗರಿ ಹಾಗೂ ರಮೇಶ ಶರಣಪ್ಪ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.
ಈ ಪ್ರಕರಣದ ಆರೋಪಿಯ ತಮ್ಮನಿಗೆ ಕುಡಿತದ ಚಟ ಮತ್ತು ಜನರೊಂದಿಗೆ ಜಗಳ ಸೃಷ್ಟಿಸುವುದು ಅಣ್ಣ ರಂಗಪ್ಪನಿಗೆ ಅಸಹನೀಯವಾಗಿತ್ತು. ಕೊಲೆಯಾದ ಮಂಜುನಾಥ ಕೊಲೆ ಮಾಡಿದ ಆರೋಪಿ ಇಬ್ಬರು ಸ್ವಂತ ಅಣ್ಣ-ತಮ್ಮ ಆಗಿದ್ದು, ಇವರ ಒಟ್ಟು ಪಿತ್ರಾರ್ಜಿತ ಆಸ್ತಿ 10 ಎಕರೆ ಇದೆ. ತನ್ನ ತಮ್ಮನನ್ನು ಕೊಲೆ ಮಾಡಿದರೆ ಎಲ್ಲಾ ಆಸ್ತಿ ತನಗೆ ಸಿಗುತ್ತದೆ ಎಂದು ರಂಗಪ್ಪ ಮತ್ತು ಆತನ ಸ್ನೇಹಿತ ರಮೇಶ ಜೊತೆಗೂಡಿ ಮಂಜುನಾಥನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿರುವುದಾಗಿ ನಿಜಸ್ಥಿತಿ ಒಪ್ಪಿಕೊಂಡಿದ್ದಾರೆ.
ಪ್ರಾರಂಭದಲ್ಲಿ ಕೊಲೆ ಮಾಡಿದ ಆಪಾದಿತರ ಮಾಹಿತಿಯೇ ಇಲ್ಲದ ಸ್ಥಿತಿಯಲ್ಲಿ ಸೂಕ್ಷ್ಮ ರೀತಿಯ ಕೊಲೆ ಪ್ರಕರಣವನ್ನು 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕ ಕೊಪ್ಪಳ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ, ಹನುಮಸಾಗರ ಪೊಲೀಸ್ ಠಾಣೆ ಪಿಎಸೈ ವಿರುಪಾಕ್ಷಪ್ಪ, ಹನುಮಸಾಗರ ಠಾಣೆ ಎಎಸೈ ವಸಂತ, ಕುಷ್ಟಗಿ ಠಾಣೆಯ ಎಎಸೈ ದುರುಗಪ್ಪ ಹಿರೇಮನಿ, ಪೊಲೀಸರಾದ ಪರಶುರಾಮ ಮಹಿಬೂಬ, ಕರಿಸಿದ್ದಪ್ಪ, ಮಹಾಂತೇಶ ಚಂದ್ರಶೇಖರ ಹೊನ್ನೂರು, ರೇವಣಸಿದ್ದಪ್ಪ, ಗುರುರಾಜ ಕಾಳೆ, ಮಲ್ಲಪ್ಪ ತಂಡದಿಂದ ಪ್ರಕರಣದ ತನಿಖೆ ಕೈಗೊಂಡು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕೊಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.