Advertisement

Kushtagi: ಬಸ್‌ ಪಲ್ಟಿ; ಹಲವು ಪ್ರಯಾಣಿಕರಿಗೆ ಗಾಯ

11:14 AM Jul 10, 2024 | Team Udayavani |

ಕುಷ್ಟಗಿ: ಬಸ್ ಪಲ್ಟಿಯಾಗಿ, 7-8 ಪ್ರಯಾಣಿಕರಿಗೆ ತರಚು ಗಾಯಗಳಾದ ಘಟನೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕ್ಯಾದಿಗುಪ್ಪ ಕ್ರಾಸ್ ಬಳಿ ಜು.10ರ ಬುಧವಾರ ಬೆಳಗಿನ ಜಾವ ನಡೆದಿದೆ.

Advertisement

ಬೆಂಗಳೂರಿನಿಂದ ಸೊಲ್ಲಾಪುರಕ್ಕೆ ಕುಷ್ಟಗಿ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ಕ್ಯಾದಿಗುಪ್ಪ ಕ್ರಾಸ್ ನ ಡಾಬಾವೊಂದರ ಬಳಿ ಪಲ್ಟಿಯಾಗಿದೆ.

ಚಾಲಕನ ನಿದ್ದೆ ಮಂಪರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next