Advertisement

Kushtagi: ಸಾವಿನಲ್ಲೂ ಒಂದಾದ ದಂಪತಿ

09:02 AM Oct 03, 2023 | Team Udayavani |

ಕುಷ್ಟಗಿ: ಪಟ್ಟಣದ ಅನ್ನದಾನೇಶ್ವರ ನಗರದ ನಿವಾಸಿ ವಯೋವೃದ್ದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.

Advertisement

ಮೂಲತಃ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಕುಷ್ಟಗಿಯ ಅನ್ನದಾನೇಶ್ವರ ನಗರದ ನಿವಾಸಿಯಾಗಿದ್ದರು.

ನಿವೃತ್ತ ಮುಖ್ಯ ಶಿಕ್ಷಕ ಹನುಮಂತಪ್ಪ ತಂದೆ‌ ಹನಮಪ್ಪ ಮೇಟಿ ಅವರು, ಅ.2 ರಂದು ಸೋಮವಾರ ರಾತ್ರಿ 10.30ಕ್ಕೆ  ಹೃಧಯಘಾತದಿಂದ ನಿಧನರಾಗಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಪತಿಯ ಸಾವಿನಿಂದ ಆಘಾತಗೊಂಡಿದ್ದ ಪತ್ನಿ 65 ವರ್ಷದ ಗೌರಮ್ಮ ಅವರು ಕೂಡಾ ಮಂಗಳವಾರ ಬೆಳಗಿನ ಜಾವ ಹೃಧಯಘಾತದಿಂದ ನಿಧನರಾಗಿದ್ದಾರೆ. ಐದಾರು  ತಾಸಿನ ಅಂತರದಲ್ಲಿ ವೃದ್ದ ದಂಪತಿ ಸಾವಿನಲ್ಲಿ ಒಂದಾಗಿದ್ದಾರೆ.

ಕೆಲವೇ ತಾಸುಗಳಲ್ಲಿ ಇವರಿಬ್ಬರ ಸಾವು ಕುಟುಂಬ ವರ್ಗದಲ್ಲಿ ಶೋಕ ಮಡುಗಟ್ಟಿದೆ. ಈ ಪ್ರಕರಣ ಕುಷ್ಟಗಿ ಪಟ್ಟಣದ ಸಾರ್ವಜನಿಕರಲ್ಲಿ ‌ಅಚ್ಚರಿ ಹುಟ್ಟಿಸಿದ್ದು ಎಂತಹ ವಿಚಿತ್ರ ಸಾವು‌ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಮೃತರು ಕುಷ್ಟಗಿ ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣಾಧಿಕಾರಿ ಸೋಮಶೇಖರ್ ಮೇಟಿ ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಯಲಬುರ್ಗಾ ತಾಲೂಕಿನ ಅವರ ಜಮೀನಿನಲ್ಲಿ ಅ.3ರ ಮಂಗಳವಾರ ಮದ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next