Advertisement

ಕುಷ್ಟಗಿ: ಅತಿಥಿ ಉಪನ್ಯಾಸಕರ ಹೋರಾಟ ಸಭೆ

11:37 AM Jan 20, 2022 | Team Udayavani |

ಕುಷ್ಟಗಿ: ಪ್ರತಿಯೊಬ್ಬ ಅತಿಥಿ ಉಪನ್ಯಾಸಕರು ಕಡ್ಡಾಯವಾಗಿ ಆನ್‍ಲೈನ್ ಅರ್ಜಿಯನ್ನು ಸಲ್ಲಿಸಿ ಎಂದು ತಾಲೂಕ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಕಾರ್ಯದರ್ಶಿ ವಿಶ್ವನಾಥ ತೊಂಡಿಹಾಳ ಹೇಳಿದರು.

Advertisement

ಇಲ್ಲಿನ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನಲ್ಲಿ ಬುಧವಾರ ನಡೆದ ತಾಲೂಕ ಅತಿಥಿ ಉಪನ್ಯಾಸಕರ ಹೋರಾಟ ಸಭೆಯಲ್ಲಿ ಅವರು ಮಾತನಾಡಿದರು.

ಅತಿಥಿ ಉಪನ್ಯಾಸಕರಲ್ಲಿ ಹಿರಿಯ ಹಾಗೂ ಕಿರಿಯ ಎಂಬ ಬೇಧಭಾವನೆಯನ್ನು ಬಿಟ್ಟಾಕೋಣ. ಎಲ್ಲಾರು ಒಂದಾಗಿರೋಣ. ಈಗಾಗಲೇ ರಾಜ್ಯಮಟ್ಟದಲ್ಲಿ ಅತಿಥಿ ಉಪನ್ಯಾಸಕರ ಸೇವಾಭದ್ರತೆ ಸೇರಿದಂತೆ ನಾನಾ ಬೇಡಿಕೆಗಳಿಗೆ ಅನಿರ್ಧಿಷ್ಠಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ವೇಳೆಯಲ್ಲಿ ರಾಜ್ಯ ಸರಕಾರವು ಸೇವಾ ಭದ್ರತೆಯ ಬದಲಾಗಿ ವೇತನವನ್ನು ಪರಿಷ್ಕರಿಸಿ ನಾಲ್ಕು ಹಂತಗಳಲ್ಲಿ ಒದಗಿಸಿದೆ ಎಂದರು.

ಈ ಮೊದಲಿದ್ದ 8 ಅವಧಿಯ ಬದಲಾಗಿ ತರಗತಿಯ ಅವಧಿಯನ್ನು 15 ಕ್ಕೆ ಏರಿಸಿದೆ. ಇದು ಅರ್ಧ ಜನರಿಗೆ ಹೋರಹಾಕುವ ಹುನ್ನಾರವಾಗಿದೆ. ಇದರ ಬದಲಾಗಿ ಸರಕಾರ ಘೋಷಣೆ ಮಾಡಿರುವ ಅವಧಿಯಲ್ಲಿಯೇ ಮೊದಲಿದ್ದ ಅವಧಿಯ ಪ್ರಕಾರ ಕೆಲಸವನ್ನು ನಿರ್ವಹಿಸುವಂತೆ ಮಾಡಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಮೂಡುತ್ತಿದೆ. ಇದರೊಂದಿಗೆ ಹೊಸದಾಗಿ ಆನ್‍ಲೈನ್ ಅರ್ಜಿ ಸಲ್ಲಿಕೆ ಆರಂಭಿಸಿದೆ. ಆದ್ದರಿಂದ ಮೊದಲು ಎಲ್ಲಾ ಸಹೋದ್ಯೋಗಿಗಳು ಅರ್ಜಿಯನ್ನು ಸಲ್ಲಿಸೋಣ ಎಂದರು.

ಪ್ರಮುಖರಾದ ಅತಿಥಿ ಉಪನ್ಯಾಸಕರ ಸಂಘದ ತಾಲೂಕ್ಷ ಅಧ್ಯಕ್ಷ ಶಂಕರ ಅಡವಿಬಾವಿ, ಡಾ.ವೀರಣ್ಣ ಹುರಳಿ, ಶಿಲ್ಪ ಪಾಟೀಲ್, ಶಿವಮಲ್ಲಮ್ಮ, ಲಕ್ಷ್ಮೀ, ಯಮನಪ್ಪ ಮೇಗೂರು, ರಾಜಶೇಖರ, ಬಸಯ್ಯ ಮಠಪತಿ, ಮಲ್ಲನಗೌಡ, ಪ್ರಲ್ಹಾದ, ಬಸವರಾಜ ಪತ್ತಾರ, ಶೇಖರಪ್ಪ, ಡಾ.ಎಸ್.ಜಿ.ಕಂಬಳಿ, ಎಸ್.ಸಿ.ಬಂಡಿಹಾಳ, ತಾವರಗೇರಾ, ಕುಷ್ಟಗಿ ಹಾಗೂ ಹಿರೆವಂಕಲಕುಂಟಾ ಕಾಲೇಜಿನ ಅತಿಥಿ ಉಪನ್ಯಾಸಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next